ಲಕ್ಷ್ಮೇಶ್ವರ: ನೇಕಾರರಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಗುರುವಾರ ವಿಶ್ವ ಬಂಧು ವಿದ್ಯುತ್ ಮಗ್ಗಗಳ ನೇಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಉಪ ನಿರ್ದೇಶಕರ ಕಚೇರಿ ಎದುರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಅಧ್ಯಕ್ಷ ಅಮಾತೆಪ್ಪ ಹರವಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ವಿದ್ಯುತ್  ಹಾಗೂ ಕೈ ಮಗ್ಗಗಳ ಕಾರ್ಮಿಕಾರ್ಮಿಕರು ಕೆಲಸ ವಿಲ್ಲದೆ ಅತಂತ್ರ ಸ್ಥಿತಿಯನ್ನು ಮನಗಂಡು  ಸರ್ಕಾರ  ನೆಕಾರರಿಗೆ ಸಹಾಯಧನ ವಾಗಿ 2 ಸಾವಿರ ರೂ. ನೀಡುಲಾಗಿದೆ. ಆದರೆ, ಶಿಗ್ಲಿ ಗ್ರಾಮದಲ್ಲಿ ಒಟ್ಟು  163 ಘಟಕಗಳು ಇದ್ದು ಈ ಗ್ರಾಮದಲ್ಲಿ 1200 ಜನ ಕಾರ್ಮಿಕರಿದ್ದಾರೆ. ಇದರಲ್ಲಿ ಅರ್ಧದಷ್ಟು ಕಾರ್ಮಿಕ ರಿಗೆ ಸಹಾಯಧನ ದೊರೆಯದೆ ಅನ್ಯಾಯವಾಗಿದೆ ಎಂದು ಆರ್ಕೋಶ ವ್ಯಕ್ತಪಡಿಸಿದರು.

ಸಿಗ್ಲಿ ಗ್ರಾಮದಲ್ಲಿನ ಸರ್ಕಾರ ನೀಡಿರುವ ಸಹಾಯಧನ ಸಿಗದೆ ವಂಚಿತರಾಗಿರುವ ನೇಕಾರರಿಗೆ ಸಹಾಯಧನ ತಲುಪಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮನೋಹರ ಕೊಪರ್ಡೆ , ಪ್ರಕಾಶ ಕುಸಗುರ,ಬಸವರಾಜ ಬಸ್ಮಿ, ಕೃಷ್ಣ ಹರವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಶ್ರೀಮತಿ ಹನುಮಮ್ಮ ಮಂಜುನಾಥ್ ಮತ್ತು ಮಾರುತಿ ಕರಡೋಣ ಕರ್ನಾಟಕ ರತ್ನ 2021 ಪ್ರಶಸ್ತಿ ಪ್ರಧಾನ

ಉತ್ತರಪ್ರಭ ಸುದ್ದಿ ಕನಕಗಿರಿ: ಕನಕಗಿರಿ ತಾಲೂಕಿನ ನವಲಿ ತಾಂಡಾ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಹನುಮಮ್ಮ ಮಂಜುನಾಥ್…

ಗದಗ ಜಿಲ್ಲೆಯಲ್ಲಿಂದು ಮತ್ತೆ 6 ಕೊರೊನಾ ಪಾಸಿಟಿವ್!: ಒಂದು ಸಾವು

ಜಿಲ್ಲೆಯಲ್ಲಿಂದು 06 ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 322 ಕ್ಕೆ ಏರಿಕೆಯಾಗಿದೆ. ಇಂದು 05 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು

ಕರ್ನಾಟಕದಲ್ಲಿ ದೀಪಾವಳಿ ಆಚರಣೆಗೆ ಸರ್ಕಾರದ ಕೊವಿಡ್-19 ಮಾರ್ಗಸೂಚಿ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 3ನೇ ಅಲೆ ಮತ್ತು ರೂಪಾಂತರ ವೈರಸ್ ಭೀತಿ ನಡುವೆ…

ಗಂಗಾಮತ ಸಮಾಜದ ವಧು-ವರರ ಸಮಾವೇಶ

ನಿಜಶರಣ ಅಂಬಿಗರ ಚೌಡಯ್ಯನವರ ಸಮಾಜದಿಂದ ವಧು-ವರರ ಸಮಾವೇಶ ಜ.31 ರಂದು ಶ್ರೀ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಪೂಜ್ಯಶ್ರೀ ಷ.ಬ್ರ. ಫಕೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಲಿದೆ.