ಬೆಳಗಾವಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಇನ್ನೇನು ಫಲಿತಾಂಶ ಹೊರಬರುವುದು ಬಾಕಿ ಇತ್ತು. ಆದರೆ ಫಲಿತಾಂಶ ನಾಯಿತು ಎಂದು ನೋಡಲು, ಕೇಳಲು ನಿಂತ ವ್ಯಕ್ತಿಯೇ ಇಲ್ಲ.

ಹೌದು, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಪಂ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಿ.ಬಿ ಅಂಬೋಜಿ ಅವರು 414 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಡಿ.27ರಂದು ಅಂಬೋಜಿ(64) ಅವರು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದರು.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮ ಪಂಚಾಯತಿಗೆ ಮೊದಲ ಹಂತದಲ್ಲಿಯೇ ಚುನಾವಣೆ ನಡೆದಿತ್ತು. ಡಿ. 22ರಂದು ಮತದಾನವಾಗಿದ್ದು ಇಂದು ಫಲಿತಾಂಶವೂ ಹೊರಬಿದ್ದಿದೆ. ಆ ಗೆಲುವನ್ನು ಸಂಭ್ರಮಿಸಲು ಮಾತ್ರ ಅಭ್ಯರ್ಥಿಯೇ ಇಲ್ಲದಂತಾಗಿದೆ.

Leave a Reply

Your email address will not be published. Required fields are marked *

You May Also Like

ಇಂಡೋ-ನೇಪಾಳ ಕ್ರಿಕೆಟ್ ಟ್ರೋಫಿ “ನಿಡಗುಂದಿ ತಂಡಕ್ಕೆ ಚಿನ್ನದ ಪದಕ”

ಉತ್ತರಪ್ರಭ ಸುದ್ದಿ ನಿಡಗುಂದಿ: ನೇಪಾಳದ ಪೊಖರಾದಲ್ಲಿ ನಡೆದ ಇಂಡೋ-ನೇಪಾಳ ಇಂಟರ್ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್ ಶಿಪ್…

ಶಿಕ್ಷಕರ ಅಗತ್ಯ ಸೇವೆ ಈಗ ಆನಲೈನ್ ವ್ಯಾಪ್ತಿಯಲ್ಲಿ: ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ಲೇಪಿಸಿದ ಶಿಕ್ಷಣ ಸಚಿವರು,ಅಧಿಕಾರಿಗಳು

ಉತ್ತರಪ್ರಭ ಸುದ್ದಿಆಲಮಟ್ಟಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಶಿಕ್ಷಕರ ಅಗತ್ಯ 17 ಸೇವೆಗಳನ್ನು ಆನ್…

ಶಾಲೆಗಳು ಪ್ರಾರಂಭವಾಗಲು ಕೂಡಿ ಬಂದಿದೆಯೇ ಮುಹೂರ್ತ!?

ಬೆಂಗಳೂರು : ಕೊರೊನಾ ಹಾವಳಿಯಿಂದಾಗಿ ರಾಜ್ಯದಲ್ಲಿ ಶಾಲೆಗಳು ಮುಚ್ಚಿವೆ. ಆದರೆ, ಸದ್ಯ ಕೊರೊನಾ ತಗ್ಗುತ್ತಿದ್ದು, ಶಾಲೆಗಳನ್ನು ತೆರೆಯುವ ಕುರಿತು ಚಿಂತನೆ ನಡೆಯುತ್ತಿದೆ.

ಜೈಲುವಾಸದಿಂದ ಇಂದು ಶಶಿಕಲಾ ಬಿಡುಗಡೆ

ಕಳೆದ ೪ ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿಯಾಗಿದ್ದ ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ಶಶಿಕಲಾ ಬಿಡುಗಡೆಯಾಗುವರು. ಕೊರೊನಾ ಸೋಂಕು ತಗುಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿಯೇ ಪ್ರಕ್ರಿಯೆ ಪೂರ್ಣಗೊಳಿಸಲಿರುವ ಜೈಲ್ ಸಿಬ್ಬಂದಿ ಅವರನ್ನು ಬಿಡುಗಡೆ ಮಾಡಲಿದ್ದಾರೆ ತಿಳಿಸಿದೆ.