ಮಸ್ಕಿ: ಕ್ಷೇತ್ರದ ಬಿಜೆಪಿ ಪಕ್ಷದಿಂದ ನ.30ರಂದು ಪಟ್ಟಣದಲ್ಲಿ ಗ್ರಾಮ ಸ್ವರಾಜ್ ಸಮಾವೇಶ ನಡೆಯಲಿದೆ. ಈ ಸಮಾವೇಶಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬರಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕಲದಿನ್ನಿ ಅವರು ಹೇಳಿದರು.

ಪಟ್ಟಣದ ಬಸವೇಶ್ವರ ನಗರದಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಗ್ರಾಮ ಸ್ವರಾಜ್ಯ ಸಮಾವೇಶ ಮಾಡಲಾಗುತ್ತಿದೆ. ಪ್ರತಿ ಬೂತ್ ನಲ್ಲಿ ಪಕ್ಷದ 5 ಜನರನ್ನು ಎಜೆಂಟ್ ರನ್ನಾಗಿ ನೇಮಕ ಮಾಡಲಾಗುವುದು. ಇದಕ್ಕೆ ಪಂಚರತ್ನ ಎಂದು ಕರೆಯಲಾಗುತ್ತದೆ. ಅಂದಿನ ದಿನ ಸಮಾವೇಶಕ್ಕೆ ಸಮಾಜ ಕಲ್ಯಾಣ ಸಚಿವ ಶ್ರೀರಾಮಲು, ಸಂಸದ ಕರಡಿ ಸಂಗಣ್ಣ, ಸಂಸದ ಪ್ರತಾಪಸಿಂಹ ಸೇರಿ ಜಿಲ್ಲೆಯ 600ಕ್ಕೂ ಹೆಚ್ಚು ಪ್ರಮುಖ ನಾಯಕರು, ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಾಣೇಶ ದೇಶಪಾಂಡೆ, ಬಿಜೆಪಿ ಮಸ್ಕಿ ಘಟಕ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ಇದ್ದರು.

Leave a Reply

Your email address will not be published. Required fields are marked *

You May Also Like

ಗಡಿಬಿಡಿಯ ಲಾಕ್ ಡೌನ್ ಜಾರಿ: ಗಲಿಬಿಲಿಯಲ್ಲಿ ಉತ್ಪಾದನಾ ಫ್ಯಾಕ್ಟರಿ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ಜಿಲ್ಲೆ ಮತ್ತು ನಗರಗಳಲ್ಲಿ ದಿಢೀರ್ ಲಾಕ್ ಡೌನ್ ಹೇರಿದ್ದರಿಂದ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಕಿಚ್ಚನಿಗೆ ಜಪಾನ್ ನಿಂದ ಅಭಿಮಾನಿಯ ಮನವಿ

ಅನಾರೋಗ್ಯದಿಂದಾಗಿ ಕಳೆದ ಎರಡು ವಾರಗಳಿಂದ ಬಿಗ್ ಬಾಸ್ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿಲ್ಲ. ಇದು ಅಭಿಮಾನಿಗಳಿಗೆ ಬೇಸರವುಂಟು ಮಾಡಿದ್ದು ಒಂದುಕಡೆಯಾದರೇ, ಕಿಚ್ಚನ ಆರೋಗ್ಯದ ಬಗ್ಗೆಯೂ ಅಭಿಮಾನಿಗಳಿಗೆ ಚಿಂತೆಯಾಗಿದೆ.

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ದೇವರಮನಿ

ಕಾಂಗ್ರೆಸ್ನಿಂದ ಮೇಯರ್ ಆಕಾಂಕ್ಷಿಯಾಗಿದ್ದ ದೇವರಮನಿ ಶಿವಕುಮಾರ್ ಪಾಲಿಕೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ.

ಡೆಂಜರ್ ಝೋನ್ ನಲ್ಲಿ ಭಯಾನಕ ಘಟನೆ: ಕಿಟ್ ಗಾಗಿ ಮಗ್ಗರಿಸಿ ಬಿದ್ದ ಮಹಿಳೆಯರು

ಆಹಾರ ಕಿಟ್ ಪಡೆಯಲು ಹೋದ ಮಹಿಳೆಯರು ಮಗ್ಗರಿಸಿ ಬಿದ್ದಿದ್ದಾರೆ. ನಿಜಕ್ಕೂ ಇದು ಭಯಾನಕ ಘಟನೆ. ಕೊರೋನಾ ಕರಾಳ ಛಾಯೆಯ ಲಕ್ಷಣವೇ ಸರಿ.