ಮುಳಗುಂದ: ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಮೃತ ವ್ಯಕ್ತಿ ಪಟ್ಟಣದ ಹಳೆಹುಡಾ ಓಣಿ ನಿವಾಸಿ ಬಸವರಾಜ ಫ. ಕೊಲ್ಲಾರಿ (38) ಎಂದು ಗುರುತಿಸಲಾಗಿದೆ. ನ.21 ರಂದು ಹೊಲದಲ್ಲಿ ಗೋವಿನಜೋಳ ಕಟಾವು ಮಾಡುತ್ತಿರುವಾಗ ಕಾಲಿಗೆ ಹಾವು ಕಚ್ಚಿದೆ, ತಕ್ಷಣ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಈ ಕುರಿತು ಮುಳಗುಂದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಮೀಟರ್ ಬಡ್ಡಿಗೆ ಬ್ರೆಕ್ ಹಾಕಲು ಮುಂದಾದ ಸರ್ಕಾರ

ಈ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಹೊರಟಿರುವಂತ ರಾಜ್ಯ ಸರ್ಕಾರ, ಕಾಯ್ದೆಯ ತಿದ್ದುಪಡಿಗೂ ನಿನ್ನೆಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ. ಒಂದು ವೇಳ ತಿದ್ದುಪಡಿಯಾಗಿ, ಜಾರಿಗೆ ಬಂದ್ರೆ, ಬಲವಂತವಾಗಿ ಸಾಲ ವಸೂಲಾತಿಗೆ ಬ್ರೇಕ್ ಬೀಳಲಿದೆ.

ಗದಗನಲ್ಲಿ ಅಲ್ಪಸಂಖ್ಯಾತ ನಿಗಮದ ಅಧಿಕಾರಿ ಎಸಿಬಿ ಬಲೆಗೆ

ಗದಗ: ನಗರದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಹಾಗೂ ಕಂಪ್ಯೂಟರ್ ಆಪರೇಟರ್ ಇಂದು ಎಸಿಬಿ…

ನಾಡಬಾಂಬ್‌ ; ಹಸುವಿನ ಬಾಯಿ ಛಿದ್ರ

ಜಮೀನಿನಲ್ಲಿ ಮೇಯುತ್ತಿದ್ದ ಸೀಮೆ ಹಸುವೊಂದು ನಾಡಬಾಂಬ್‌ ಜಿಗಿದ ಪರಿಣಾಮ ಅದರ ಬಾಯಿ ಛಿದ್ರಗೊಂಡಿರುವ ಘಟನೆ ತಾಲ್ಲೂಕಿನ ಕೆಬ್ಬಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.