ಗದಗ: ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಅವರು ಸಣ್ಣತನದ ರಾಜಕಾರಣ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಎಚ್.ಕೆ.ಪಾಟೀಲ್ ಅಭಿಮಾನಿ ಬಳಗದ ವೆಂಕನಗೌಡ ಗೋವಿಂದಗೌಡ್ರ ಕಿಡಿಕಾರಿದ್ರು.

ಈ ಕುರಿತು ಗುರುವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಶಾಸಕ ಎಚ್.ಕೆ.ಪಾಟೀಲ್ ಸರ್ಕಾರದ ಆಹಾರದ ಕಿಟ್ ಗಳನ್ನು ಹುಲಕೋಟಿಯ ಕೆ.ವಿ.ಕೆಯಲ್ಲಿ ಇಟ್ಟಿದ್ದಾರೆ ಎಂಬ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಕೊರಾನಾ ಸಮಯದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ 50 ಸಾವಿರ ಕಿಟ್ ಗಳನ್ನು ವಿತರಿಸಿದ್ದಾರೆ. ಅಂತಹ ವ್ಯಕ್ತಿತ್ವ ರುವ ಒಬ್ಬ ನಾಯಕರು 3000 ಕಿಟ್ ಗಳನ್ನು ಏಕೆ ಒಯ್ದಿಟ್ಟುಕೊಳ್ಳುತ್ತಾರೆ. ಅದರಲ್ಲೂ ಎಚ್.ಕೆ.ಪಾಟೀಲ್ ಅವರು ತಮ್ಮ ಸ್ವಂತ ಹಣದಲ್ಲಿ ಕಿಟ್ ವಿತರಿಸಿದ್ದಾರೆಯೇ ಹೊರತು ಬೇರೆಯವರ ಹಣದಲ್ಲಿ ಅಲ್ಲ. ಆದರೆ ಶಾಸಕ ಎಚ್.ಕೆ.ಪಾಟೀಲ ಅವರ ಹೆಸರನ್ನು ಬಳಸಿ ಅನಿಲ್‌ ಮೆಣಸಿನಕಾಯಿ ಅವರು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಇಂತಹ ಸಣ್ಣತನ ಬಿಟ್ಟು ನಾಯಕರಂತೆ ವರ್ತಸಿಸುವಯದನ್ನು ಕಲಿಯಲಿ ಎಂದು ಸಲಹೆ ನೀಡಿದರು.

ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ತೆಗೆಸಿರುವ ಕುರಿತು ಅನೀಲ್ ಅವರು ಆರೋಪಿಸಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಚುನಾವಣಾ ಆಯೋಗ ಹಾಗೂ ಆಡಳಿತ ವ್ಯವಸ್ಥೆ ಯಾರ ಕೈಯಲ್ಲಿದೆ ಎನ್ನುವುದನ್ನು ಸ್ವತಃ ಅನೀಲ್ ಅವರು ತಿಳಿದುಕೊಳ್ಳಬೇಕು. ಮಾತೆತ್ತಿದರೆ ಮಿಷನ್-30 ಎಂದು ಹೇಳುತ್ತಿದ್ದರು. ಆದರೆ ಈಗ ಮಿಷನ್ -13 ಕೂಡ ಬರಲ್ಲ ನ್ನುವುದು ಖಾತ್ರಿಯಾದ ಮೇಲೆ ಒಂದು ವೇಳೆ ಮುಂದಿನ ಸೋಲನ್ನು ಮತದಾರರ ಪಟ್ಟಿಯ ಹಣೆಗೆ ಕಟ್ಟುವ ಉದ್ದೇಶದಿಂದ  ಆರೋಪ ಮಾಡುತ್ತಿದ್ದಾರೆ ಎಂದರು.

ಮತದಾರರ ಪಟ್ಟಿ ಕುರಿತು ನಿಜವಾಗಿಯೂ ಆರೋಪಿಸಬೇಕಾಗಿದ್ದು ನಾವು. ಸರ್ಕಾರ ಅವರದ್ದೇ ಇರುವಾಗ ಬಿಜೆಪಿ ಮುಖಂಡರೊಬ್ಬರು ಈ ರೀತಿ ಆರೋಪ ಮಾಡಿದರೆ ಜನ ಸುಮ್ಮನಿರುವುದಿಲ್ಲ. ಜನ ಜಾಣರಿದ್ದಾರೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಮ್ಮ ಕುಟುಂಬದಲ್ಲಿಯೇ ಮತದಾರರ ಪಟ್ಟಿಯಲ್ಲಿ ವಾರ್ಡ್ ಸಂಖ್ಯೆಗಳ ಬದಲಾವಣೆಯಾಗಿವೆ. ಹಾಗಾದರೆ ಈ ಬಗ್ಗೆ ನಾನು ಯಾರ ಮೇಲೆ ಆರೋಪ ಮಾಡಬೇಕು ಎಂದು ಪ್ರಶ್ನಿಸಿದರು.

     ಅನೀಲ್ ಮೆಣಸಿನಕಾಯಿ ಅವರಿಗೆ ಶಾಸಕ ಎಚ್.ಕೆ.ಪಾಟೀಲ್ ಅವರ ಹೆಸರು ತೆಗೆದುಕೊಳ್ಳದಿದ್ದರೇ ನಿದ್ದೇ ಬರುವಂತೆ ಕಾಣುತ್ತಿಲ್ಲ. ಇವರು ಎಚ್.ಕೆ.ಪಾಟೀಲ್ ಅವರ ಮೇಲೆ ಆರೋಪಿಸಿ ಮನವಿ ನೀಡಿದರೂ ಸ್ವತಃ ಜಿಲ್ಲಾಧ್ಯಕ್ಷರೇ ಪಾಲ್ಗೊಂಡಿಲ್ಲ. ಇವರಲ್ಲಿಯೇ ನಾಲ್ಕು ಗುಂಪುಗಳಿವೆ. ಮೆಣಸಿನಕಾಯಿ ಅವರಿಗೆ ಒಳ್ಳೆಯ ಭವಿಷ್ಯವಿದೆ. ಆದರೆ ಇಂತಹ ಸಣ್ಣತನದ ರಾಜಕಾರಣ ಬಿಡಬೇಕು. ಒಬ್ಬ ಶಾಸಕರು ಬಂದ ಕಿಟ್ ಗಳನ್ನು ವಿತರಿಸಲು ತಮಗೆ ಅನುಕೂಲವಾಗುವ ಪ್ರದೇಶದಲ್ಲಿಟ್ಟಿರಬಹುದು. ಈ ಬಗ್ಗೆ ಸ್ವತಃ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಪಷ್ಟಿಕರಣ ನೀಡಿದ್ದಾರೆ. ಆದರೆ ಶಾಸಕ ಎಚ್.ಕೆ.ಪಾಟೀಲ್ ಅವರು ಇಂತಹ ಯಾವುದೇ ಆರೊಪಕ್ಕೆ ಕಿವಿಗೊಡುವುದಿಲ್ಲ. ಜೊತೆಗೆ ಪ್ರತಿಕ್ರೀಯೇ ಕೂಡ ಕೊಡುವುದಿಲ್ಲ. ದನ್ನೆ ಬಂಡವಾಳವಾಗಿಸಿಕೊಂಡು ಈ ರೀತಿ ದೊಡ್ಡವರ ಹೆಸರು ಬಳಸಿಕೊಂಡು ಸಣ್ಣತನದ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿನಾಯಕ ಬಳ್ಳಾರಿ, ಪ್ರಕಾಶ ನಿಡಗುಂದಿ, ಚಂದ್ರು ಕರಿಸೋಮನಗೌಡ್ರ, ರಮೇಶ್ ಕಟ್ಟಿಮನಿ, ರಾಜು ಅಣ್ಣೀಗೇರಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ : ಶೀಘ್ರದಲ್ಲಿಯೇ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ

ಲಾಕ್ ಡೌನ್ ನಿಂದಾಗಿ ಬಡವರ ತೊಂದರೆ ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದೆ.

ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ-2021 ಮತಗಟ್ಟೆಗಳ ಬದಲಾವಣೆ ಮಾಡಿದ ಮಾಹಿತಿ

ಗದಗ ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆ ನೇದ್ದಕ್ಕೆ ಸಂಬOಧಿಸಿದ ಬೆಟಗೇರಿಯಲ್ಲಿನ ಈ ಕೆಳಗಿನ ಮತಗಟ್ಟೆಗಳನ್ನು ಬದಲಾವಣೆ…

ರಾಜ್ಯದಲ್ಲಿಂದು 5199 ಕೊರೊನಾ ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 5199 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 96141 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು

ಲೋಕಸಭೆಯಲ್ಲಿ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಮಂಡನೆ –ಮತದಾರರ ಪಟ್ಟಿಗೆ ಆಧಾರ ಜೊಡಣೆ ಪ್ರತಿಪಕ್ಷ ವಿರೋಧ

ದೆಹಲಿ:ಲೋಕಸಭೆಯಲ್ಲಿ ಚುಣಾವಾಣಾ ಕಾನೂನು (ತಿದ್ದುಪಡಿ) ಮಸೂದೆಯನ್ನು ಮಂಡಿಸಲಾಯಿತು. ಈ ತಿದ್ದುಪಡಿಯಲ್ಲಿ ಮುಖ್ಯವಾಗಿ ನಕಲಿ ಮತದಾರರನ್ನು ತಡೆಯುವುದು…