ಮಸ್ಕಿ: ತಾಲೂಕ ಬಂಜಾರ ಭವನ ನಿರ್ಮಾಣಕ್ಕೆ 2ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್ ಭರವಸೆ ನೀಡಿದರು.

ಪಟ್ಟಣದ ಭ್ರಮರಾಂಭ ದೇವಸ್ಥಾನದಲ್ಲಿ ನಡೆದ ಬಂಜಾರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ಷೇತ್ರದ ಉಪ ಚುನಾವಣೆ ಘೋಷಣೆ ಆಗುವ ಮುನ್ನ ಮಸ್ಕಿ ಪಟ್ಟಣದಲ್ಲಿ ಬಂಜಾರ ಭವನ ನಿರ್ಮಿಸಲು 2ಕೋಟಿ ಅನುದಾನ ಮಂಜೂರ ಮಾಡಲಾಗುವುದು. ಮಂಜೂರು ಮಾಡಿದ ಬಳಿಕ ಮತವನ್ನು ಹಾಕಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಕ್ಷೇತ್ರದ ವ್ಯಾಪ್ತಿಯಲ್ಲಿನ ನಿರುದ್ಯೋಗ ಯುವಕರಿಗಾಗಿ ಕೌಶಲ್ಯ ತರಬೇತಿ ಆರಂಭ ಮಾಡಲಾಗುವುದು. ಈ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರತಾಪಗೌಡ ಪಾಟೀಲ ಅವರು ಕೈ ಜೋಡಿಸಿದ್ದಾರೆ ಉಪ ಚುನಾವಣೆಯಲ್ಲಿ ಅವರಿಗೆ ಬೆಂಬಲಿಸಬೇಕೆಂದು ಹೇಳಿದರು.  ನಿಮ್ಮ ಒಂದು ಮತ ಪ್ರತಾಪಗೌಡ ಪಾಟೀಲ ಬರಿ ಶಾಸಕನಾಗಿ ಮಾಡುವುದಿಲ್ಲ ಬದಲಾಗಿ ಮಂತ್ರಿಯನ್ನಾಗಿಸುತ್ತದೆ. ಪ್ರತಿಯೊಬ್ಬರು ಬಿಜೆಪಿಗೆ ಮತ ಹಾಕಬೇಕೆಂದು ಬಂಜಾರ ಸಮಾಜದ ಜನರಿಗೆ ಮನವಿ ಮಾಡಿದರು.

ಮುದಗಲ್ಲ ರಸ್ತೆಯಲ್ಲಿನ ಸಂತ ಸೇವಾಲಾಲ್ ವೃತ್ತಕ್ಕೆ ಹೂವಿನಹಾರ ಅರ್ಪಿಸಿ ಬಳಿಕ ಎತ್ತಿನಬಂಡಿ ಮೂಲಕ ಮೆರವಣಿಗೆ ನಡೆಸಿ ಭ್ರಮರಾಂಭ ದೇವಸ್ಥಾನಕ್ಕೆ ತಲುಪಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಬಂಜಾರ ಸಮಾಜದ ಮುಖಂಡ ಪಾಂಡುರಂಗ ಪಮ್ಮಾರ, ಅಮರೇಶ ರೈತನಗರ, ಅಮರೇಶ ರಾಠೋಡ್, ಅಮರೇಶ ಅಂತರಗಂಗಿ, ಹರಿಶ್ಚಂದ್ರ ರಾಠೋಡ್, ಲಿಂಗಪ್ಪ ಚವ್ಹಾಣ, ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ ಸೇರಿದಂತೆ ಸಮಾಜದ ಮುಖಂಡರು ಇದ್ದರು.

Leave a Reply

Your email address will not be published. Required fields are marked *

You May Also Like

ಕೊರೊನಾ: ಒಂದೇ ದಿನ 2,003 ಸಾವು, 10,974 ಹೊಸ ಪ್ರಕರಣ

ಕಳೆದ 24 ಗಂಟೆಗಳಲ್ಲಿ ಕೊರೊನಾ ರೋಗಕ್ಕೆ 2,003 ನಾಗರಿಕರು ಬಲಿಯಾಗಿದ್ದು, ಇದೇ ಅವಧಿಯಲ್ಲಿ ಹೊಸದಾಗಿ 10,974 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ.

ಸುದ್ದಿಗೆ ತೆರಳಿದ ಪತ್ರಕರ್ತನಿಗೆ ತಹಶೀಲ್ದಾರ ಆವಾಜ್!: ಗಜೇಂದ್ರಗಡ ತಹಶೀಲ್ದಾರರಿಂದ ಮಾದ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ!

ಜನರಿಗೆ ಸಮಸ್ಯೆಗಳೇನೆ ಇರಲಿ ಪತ್ರಕರ್ತ ತಹಶೀಲ್ದಾರರ ಪರ್ಮಿಷನ್ ಇಲ್ಲದೇ ಚಿತ್ರಿಕರಿಸುವ ಹಾಗಿಲ್ಲ. ಜನ ಸಮಸ್ಯೆ ಹೇಳಿಕೊಂಡು ಬಂದಾಗಲೂ ಸಾರ್ವಜನಿಕ ಸರ್ಕಾರಿ ಕಚೇರಿಯಲ್ಲಿ ಪತ್ರಕರ್ತನಿಗೆ ಪ್ರವೇಶ ಇಲ್ವಂತೆ! ಇದು ಗದಗ ಜಿಲ್ಲೆ ಗಜೇಂದ್ರಗಡ ತಹಶೀಲ್ದಾರ ಅಶೋಕ ಕಲಘಟಗಿ ಅವರ ರೂಲ್ಸ್.

ಮಳೆಯ ಸಂಕಷ್ಟ – ಮಣ್ಣಲ್ಲಿ ಮಣ್ಣಾದ ಈರುಳ್ಳಿ…ಮಾರುಕಟ್ಟೆಯಲ್ಲಿ ಗಗನಕ್ಕೆ ಏರಿದ ದರ!

ಬೆಂಗಳೂರು : ವಿಪರೀತ ಮಳೆಯಿಂದಾಗಿ ರೈತರು ಬೆಳೆದ ಈರುಳ್ಳಿ ಹೊಲದಲ್ಲಿಯೇ ಕೊಳೆಯುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಗಗನಕ್ಕೆ ಏರುತ್ತಿದೆ.

ಬೆಂಗಳೂರಿನ ಹೊಂಗಸಂದ್ರದಲ್ಲಿ ಮತ್ತೆ ಐವರಲ್ಲಿ ಕಂಡು ಬಂದ ಸೋಂಕು!

ಇಲ್ಲಿಯ ಹೊಂಗಸಂದ್ರದಲ್ಲಿನ ಮತ್ತೆ ಐವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬಿಹಾರಿ ಕೂಲಿ ಕಾರ್ಮಿಕನಿಂದ 29 ಜನರಿಗೆ ಸೋಂಕು ಹರಡಿತ್ತು. ಕೆಲವು ದಿನಗಳ ನಂತರ ಪ್ರಕರಣಗಳು ಪತ್ತೆಯಾಗಿರಲಿಲ್ಲ.