ಲಕ್ಷ್ಮೇಶ್ವರ : ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ಬಂದಿದ್ದ ಯುವಕ ನೀರುಪಾಲಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಅಗಸ್ತ್ಯತೀರ್ಥ ಬಾವಿಯಲ್ಲಿ ಯುವಕನೋರ್ವ ನೀರು ಪಾಲಾಗಿದ್ದಾನೆ ಎಂಬ ಶಂಕೆ ಇದೆ. ನಾಲ್ಕು ಜನರು ಈಜಲು ಬಂದಿದ್ದು, ಇದರಲ್ಲಿ ಓರ್ವ ನೀರು ಪಾಲಾಗಿದ್ದಾನೆ ಎನ್ನಲಾಗಿದ್ದು, ಹರ್ಷವರ್ಧನ ಎನ್ನುವ ಯುವಕ ನೀರು ಪಾಲಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಹರ್ಷವರ್ಧನ ಗೆಳೆಯರ ಜೊತೆಯಲ್ಲಿ ಈಜಲು ಬಂದಿದ್ದು, ಈ ವೇಳೆ ಬಾವಿಯಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇದನ್ನು ಕಂಡು ಜೊತೆಗೆ ಬಂದಿದ್ದ ಗೆಳೆಯರು ಗಾಬರಿಯಿಂದ ಓಡಿದರು. ಹುಡುಗುರು ಓಡುವುದನ್ನು ಕಂಡ ಸಾರ್ವಜನಿಕರು ಬಾವಿಯ ಬಳಿಗೆ ಬಂದು ನೋಡಿದ್ದಾರೆ. ದಡದ ಮೇಲೆ ಬಟ್ಟೆ ಮತ್ತು ಚಪ್ಪಲಿಗಳು ಕಂಡ ಸಾರ್ವಜನಿಕರು ಯುವಕ ನೀರಿನಲ್ಲಿ ಮುಳಗಿರುವ ಸಂಶಯ ವ್ಯಕ್ತಪಡಿಸಿದ್ದಾರೆ. ಅಗಸ್ತ್ಯತೀರ್ಥ ಬಾವಿಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಗ್ನಿ ಅವಘಡ ತಪ್ಪಿದ ಬಾರಿ ದುರಂತ

ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಸ್ಪರ್ಶಗೊಂಡು ಹೊಟ್ಟಿನ ಬಣವಿ ಸುಟ್ಟು ಕರಕಲಾದ ಘಟನೆ ಜರುಗಿದೆ.

ಸ್ಮಶಾನದಲ್ಲಿ ಅಭಿಮಾನಿಯ ಹೊಸ ಕಾರಿಗೆ ಚಾಲನೆ ನೀಡಿದ ಸತೀಶ್ ಜಾರಕಿಹೊಳಿ

ಇಲ್ಲಿನ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಅಭಿಮಾನಿಯ ಹೊಸ ಕಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ ಜಾರಕಿಹೊಳಿ ಚಾಲನೆ ನೀಡಿದರು.

ಮಹಿಳೆಯಿಂದ ಕಾಂಗ್ರೆಸ್ ಮುಖಂಡನಿಗೆ ಥಳಿತ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆದಿದೆ.

ನಾಳೆ ನಡೆಯುವ ಜನಸಂಪರ್ಕ ಯಾತ್ರೆಗೆ ಬಿಎಸ್‌ವೈ, ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿ ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೇರಿದಂತೆ ಅನೇಕ…