ಬೆಂಗಳೂರು: ಚಂದನವನದ ಸ್ಟಾರ್ಗಳು ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ನಟ ಶಂಕರ್ ನಾಗ್ ಅವರು ಚಂದನವನದಲ್ಲಿ ತಮ್ಮದೆಯಾದ ಛಾಪು ಮೂಡಿಸಿ, ಮಿಂಚಿನಂತೆ ಮರೆಯಾಗಿದ್ದಾರೆ. ಕನ್ನಡ ಸಿನಿಮಾ ಜಗತ್ತಿನಲ್ಲಿ ಅವರ ವಿಭಿನ್ನ ಪ್ರಯತ್ನ, ಸಾಮಾಜಿಕ ಕಳಕಳಿ ಜನರನ್ನು ಅಭಿಮಾನಿಯಾಗುವಂತೆ ಮಾಡಿದ್ದವು.

ಇಂದು ಶಂಕರ್ ನಾಗ್ ಅವರ 66ನೇ ಹುಟ್ಟುಹಬ್ಬವಾಗಿದ್ದು, ಇಡೀ ಸ್ಯಾಂಡಲ್ವುಜಡ್ನಮ ನಟ, ನಟಿಯರು ನೆನೆಯುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್, ಕಿಚ್ಚ ಸುದೀಪ್, ರಚಿತಾ ರಾಮ್, ಡಾಲಿ ಧನಂಜಯ್ ಸೇರಿದಂತೆ ಬಹುತೇಕ ನಟರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಆಟೋ ರಾಜ ಶಂಕರ್ ಎಂದರೆ ಕನ್ನಡ ನಾಡಿನಲ್ಲಿ ಎಲ್ಲಿಲ್ಲದ ಪ್ರೀತಿ. ಶಂಕರ್ ನಾಗ್ ಹುಟ್ಟು ಹಬ್ಬದಂದು ಅವರ ಅಭಿಮಾನಿಗಳು ವಿವಿಧ ರೀತಿಯ ಸಾಮಾಜಿಕ ಕೆಲಸಗಳ ಮೂಲಕವೇ ಶುಭಾಶಯ ಕೋರುತ್ತಿದ್ದಾರೆ. ಇಂತಹ ನಟನ ಹುಟ್ಟು ಹಬ್ಬಕ್ಕೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ದರ್ಶನ್ ಲೆಜೆಂಡ್ ಆ್ಯಕ್ಟರ್ ಗೆ ಶುಭ ಕೋರಿದ್ದು, ಟ್ವೀಟ್ ಮಾಡಿದ್ದಾರೆ. ನಿಜವಾದ ಲೆಜೆಂಡ್ಗೆ ಯಾವತ್ತೂ ಸಾವಿಲ್ಲ. ಅವರು ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಯಾವಾಗಲೂ ಎವರ್ ಗ್ರೀನ್ ಆಗಿಯೇ ಉಳಿದಿದ್ದಾರೆ. ಹ್ಯಾಪಿ ಬರ್ತ್ ಡೇ ಶಂಕರಣ್ಣ, ನಾವು ಯಾವಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ.

Leave a Reply

Your email address will not be published. Required fields are marked *

You May Also Like

ಶಾಶ್ವತ ಚಿರನಿದ್ರೆಗೆ ಜಾರಿದ ಚಿರು..!

ತಮಿಳುನಾಡು ಅಂದ ತಕ್ಷಣವೇ ಕಾವೇರಿ ನದಿ ವಹಿವಾಟೆ ನಮ್ಮ ಕಣ್ಣೆದುರು ಬರುತ್ತದೆ. ಕಾವೇರಿ ಸಮಸ್ಯೆ ತೀವ್ರ ಇದ್ದ 1980ರ ದಶಕದಲ್ಲಿ ಈ ಹುಡುಗ ಹುಟ್ಟುತ್ತಾನೆ. ಬೆಂಗಳೂರಿನಲ್ಲೆ ಬೆಳೆಯುವ ಈ ಹುಡುಗನ ಸಿನಿಮಾ ಹುಚ್ಚಿಗೆ ಅವರ ಮಾವ ನೀರು ಎರೆಯುತ್ತಾರೆ.

ನಿರ್ದೇಶನದತ್ತ ಕೈ ಹಾಕಿದ ಮಾಣಿಕ್ಯ ನಟಿ ವರಲಕ್ಷ್ಮೀ!

ಬೆಂಗಳೂರು : ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದ್ದ ಮಾಣಿಕ್ಯ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ವರಲಕ್ಷ್ಮೀ ಈಗ ನಿರ್ದೇಶಕರಾಗಿ ಅವತಾರ ಎತ್ತಿದ್ದಾರೆ.

ನಟ ಶಾರೂಖ್ ಖಾನ್ ಹಾಡಿರುವ ಕ್ವಾರಂಟೈನ್ ಹಾಡು ಹೇಗಿದೆ ನೀವೂ ಕೇಳಿ

ಮೊದಲ ಬಾರಿಗೆ ಹಾಡೊಂದಕ್ಕೆ ಬಾಲಿವುಡ್ ನಟ ಶಾರೂಕ್ ಖಾನ್ ಧ್ವನಿಗೂಡಿಸಿದರೆ ಅವರ ಮಗ ನಟಿಸಿದ್ದಾರೆ. ಕ್ವಾರೈಂಟೇನ್ ಹಾಡೊಂದಕ್ಕೆ ಶಾರೂಕ್ ನೀಡಿದ ಧ್ವನಿ ಹೇಗಿದೆ ಮೋಡಿ.

ವಿಜಯ್ ದೇವರಕೊಂಡ ಅಭಿನಯದ ಹೊಸ ಚಿತ್ರ ಯಾವಾಗ ರಿಲೀಸ್ ಗೊತ್ತಾ?

ಹೈದರಾಬಾದ್ : ಟಾಲಿವುಡ್‌ ಬಹುಬೇಡಿಕೆಯ ನಟ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ಲೈಗರ್‌ ಸೆ. 9ಕ್ಕೆ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.