ಉಡುಪಿ: ಇಬ್ಬರೂ ಕಳೆದ 13 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಪ್ರೀತಿಯ ಪಾತ್ರವಾಗಿ ಎರಡು ಬಾರಿ ಯುವತಿಯ ಗರ್ಭಪಾತವೂ ಆಗಿದೆ. ಆದರೆ, ಮದುವೆಯೇ ದಿನವೇ ಹುಡುಗ ಕೈ ಕೊಟ್ಟ ಘಟನೆ ನಡೆದಿದೆ.
ಈ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಹೀಗಾಗಿ ಯುವತಿಯ ಮನೆಯವರು ವರನಿಗಾಗಿ ಪೋಲೀಸ್ ಠಾಣೆಯ ಮೊರೆ ಹೋಗಿದ್ದಾರೆ.

ಕಾರ್ಕಳದ ಗಣೇಶ್ ಹಾಗೂ ಮಣಿಪಾಲದ ಯುವತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ, ಈ ಪ್ರೀತಿಗೆ ಎರಡೂ ಮನೆಯವರು ಒಪ್ಪಿಗೆ ಕೂಡ ಸೂಚಿಸಿದ್ದರು. ಹೀಗಾಗಿ ಮದುವೆ ಕೂಡ ನಿಶ್ಚಯವಾಗಿತ್ತು. ಆದರೆ, ವಿವಾಹದ ದಿನವೇ ಗಣೇಶ್ ನಾಪತ್ತೆಯಾಗಿದ್ದಾನೆ. ಈಗ ಮದುವೆ ನಿಂತು ಹೋಗಿದ್ದು, ಯುವತಿ, ವರನ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

ಪರಸ್ಪರ ಪ್ರೀತಿಸುತ್ತಿರುವುದರಿಂದಾಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಏರ್ಪಟ್ಟಿತ್ತು. ಈ ಪ್ರೀತಿಯನ್ನು ಯುವತಿ ನಿಜವಾದ ಪ್ರೀತಿ ಎಂದು ಭಾವಿಸಿದ್ದಳು. ಆತ ಮದುವೆಯಾಗುವುದಾಗಿ ಕೂಡ ಹೇಳಿದ್ದ. ಮದುವೆಯ ದಿನ ಕೂಡ ನಿಗದಿಯಾಗಿತ್ತು.

ಇದಕ್ಕೂ ಮೊದಲು ಯುವಕನ ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿತ್ತು. ಈ ಮದುವೆ ನ. 4ಕ್ಕೆ ನಿಶ್ಚಯವಾಗಿತ್ತು. ಈ ಸಂದರ್ಭದಲ್ಲಿ ರಹಸ್ಯವಾಗಿ ವಿವಾಹವಾಗಲು ಆತ ತಯಾರಾಗಿದ್ದ. ಇದನ್ನು ನಿಲ್ಲಿಸುವಲ್ಲಿ ಯುವತಿ ಯಶಸ್ವಿಯಾಗಿದ್ದಳು.

ಆಗ ಗಣೇಶ್, ತನ್ನ ದೀರ್ಘಾವಧಿಯ ಪ್ರೇಯಸಿಯನ್ನು ವಿವಾಹವಾಗಲು ನಿರ್ಧರಿಸಿದ್ದ. ನ. 6ಕ್ಕೆ ವಿವಾಹ ನಿಶ್ಚಯವಾಗಿತ್ತು. ಆದರೆ, ಗಣೇಶ್ ಈ ಸಂದರ್ಭದಲ್ಲಿಯೇ ಪರಾರಿಯಾಗಿದ್ದಾನೆ. ಸದ್ಯ ಈ ಪ್ರಕರಣ ಪೊಲೀಸ್ ಮೆಟ್ಟಿಲು ಏರಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಕಲಬುರಗಿಗೂ ಲಾಕ್ ಡೌನ್ ಸಡಲಿಕೆಗೂ ಸಂಬಂಧವಿಲ್ಲ!!

ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಕಾಟ ಇನ್ನೂ ತಪ್ಪುತ್ತಿಲ್ಲ. ಸದ್ಯ ಕೊರೊನಾ ಅರ್ಧ ಶತಕ ಮೀರಿ ಸಾಗುತ್ತಿದೆ. ಜಿಲ್ಲೆಯಾದ್ಯಂತ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ.

ಟಂಟಂ ಡಿಕ್ಕಿ ಹೊಡೆದ ಓರ್ವ ಮಹಿಳೆ ಸಾವು

ನಗರದ ಮುಳಗುಂದ ರಸ್ತೆಯಲ್ಲಿ ರಸ್ತೆ ವಿಭಜಕ್ಕೆ ಟಂಟA ಡಿಕ್ಕಿ ಹೊಡೆದು ಸ್ಥಳದಲ್ಲೇ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ನಾಳೆ ಕೆರೆ ಹಸ್ತಾಂತರ ಸಮಾರಂಭ ( ಉದ್ಘಾಟನೆಗೆ ವೀರೇಂದ್ರ ಹೆಗ್ಗಡೆಯವರ ಆಗಮನ)

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಬಾಲಲೀಲಾ ಮಹಾಂತ ಶಿವಯೋಗಿ ಕೆರೆ ಸಮಿತಿ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ

ಕಣ್ಣಿಗೆ ಖಾರದ ಪುಡಿ ಎರಚಿ ರೌಡಿಶೀಟರ್ ಹತ್ಯೆ!

ಮಂಡ್ಯ : ಕಣ್ಣಿಗೆ ಖಾರದ ಪುಡಿ ಎರಚಿ ರೌಡಿ ಶೀಟರ್ ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.