ಹೊಳೆ ಆಲೂರು: ಇಲ್ಲಿನ ಮಲಪ್ರಭ ನದಿಯಲ್ಲಿ ಮೊಸಳೆ ಮೃತದೇಹ ಪತ್ತೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಗದಗ ಜಿಲ್ಲೆ ಹೊಳೆಯಾಲೂರು ಗ್ರಾಮದಲ್ಲಿ ಮೊಸಳೆ ಪತ್ತೆಯಾಗಿತ್ತು. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿತ್ತು. ಇನ್ನು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿದ್ದರು. ನದಿ ದಡಕ್ಕೆ ಹೋಗದಂತೆ ಗ್ರಾಮ ಪಂಚಾಯತಿ ವತಿಯಿಂದ ಡಂಗುರ ಸಾರಲಾಗಿತ್ತು. ಆದರೆ ಇಂದು ಅದೇ ಸ್ಥಳದಲ್ಲಿ ಮೊಸಳೆಯ ಮೃತದೇಹ ಪತ್ತೆಯಾಗಿದ್ದು, ಬುಧುವಾರ ಇಲ್ಲಿ ಕಾಣಿಸಿಕೊಂಡ ಮೊಸಳೆ ಸಾವನ್ನಪ್ಪಿದಾಗಿರಬಹುದು ಎನ್ನಲಾಗಿದೆ.

ಹೊಳೆ ಆಲೂರು ಗ್ರಾಮದ ಮಲಪ್ರಭ ನದಿ ದಡದಲ್ಲಿ ಪತ್ತೆಯಾದ ಮೊಸಳೆ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಗ್ರಾಮಸ್ಥರು ಹೊರತೆಗೆದರು. ಆದರೆ ಇತ್ತಿಚೆಗೆ ಜನರ ಕಣ್ಣಿಗೆ ಬಿದ್ದ ಮೊಸಳೆ ಇದೆನಾ? ಎನ್ನುವ ಚರ್ಚೆ ಒಂದೆಡೆಯಾಗಿದೆ. ಇನ್ನು ಮತ್ತೊಂದೆಡೆ ಮೊಸಳೆ ಸಾವಿನ ಬಗೆಗೆ ಹತ್ತು ಹಲವು ಅನುಮಾನಗಳು ಮೂಡಿವೆ. ಮೊಸಳೆಯ ಶವ ಪರೀಕ್ಷೆ ನಂತರ  ಈ ಬಗ್ಗೆ ನಿಖರ ಕಾರಣ ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *

You May Also Like

ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಜಯಕರ್ನಾಟಕ ಸಂಘಟನೆ ಆಕ್ರೊಶ

ರೈತ ವಿರೋಧಿ ಮಸೂದೆ ಜಾರಿ ಖಂಡಿಸಿ ಕರ್ನಾಟಕ ಬಂದ್ ಗೆ ಗದಗ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ನಗರದಲ್ಲಿ ಬೆಳ್ಳಂಬೆಳಿಗ್ಗೆಯೇ ಕನ್ನಡಪರ ಸಂಘಟನೆ ಕಾ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರೈತವಿರೋಧ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ರೈತ ವಿರೋಧ ನಿಲುವಿನ ಬಗ್ಗೆ ಕಿಡಿಕಾರಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಸ್ಟಡಿಗೆ ನೀಡಿದ ಕೋರ್ಟ್!

ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.

ರೋಣ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಧರಣಿ; ಐಷಾರಾಮಿ ವಾಹನದಲ್ಲಿ ಓಡಾಡುವವರಿಗೆ ನಮ್ಮ ಕಷ್ಟ ಗೊತ್ತಾಗೋದು ಹೇಗೆ?

ಸಾರ್ವಜನಿಕರು ಪ್ರತಿನಿತ್ಯ ಪರದಾಡುತ್ತಿರುವಾಗ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಐಷಾರಾಮಿ ವಾಹನದಲ್ಲಿ ಅಡ್ಡಾಡುತ್ತಿರುವಾಗ ನಮ್ಮಂತವರ ಕಷ್ಟ ನಿಮಗೆ ಹೇಗೆ ಗೊತ್ತಾಗುತ್ತದೆ ಎಂದು ತಾಲೂಕು ದಲಿತ ಸಂಘಟನೆಯ ಮುಖಂಡ ವೀರಪ್ಪ ತೆಗ್ಗಿನಮನಿ ಆಕ್ರೋಶ ವ್ಯಕ್ತಪಡಿಸಿದರು.

ಸಾಲದ ಕೂಪಕ್ಕೆ ಸಿಲುಕಿದ್ದ ಒಂದೇ ಗ್ರಾಮದ ಇಬ್ಬರು ರೈತರು ಆತ್ಮಹತ್ಯೆ!

ಹಾವೇರಿ : ಸಾಲದಿಂದ ನರಳಿದ್ದ ಒಂದೇ ಗ್ರಾಮದ ಇಬ್ಬರು ರೈತರು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.