ತುಮಕೂರು : ಶಿರಾದಲ್ಲಿ ಉಪಚುನಾವಣೆ ಜರುಗಿದ ಕಾರಣ ಜನದಟ್ಟಣೆ ಉಂಟಾಗಿ ಶೇ. 20ರಷ್ಟು ಜನರಲ್ಲಿ ಸೋಂಕು ಕಂಡು ಬಂದಿದೆ ಎನ್ನಲಾಗುತ್ತಿದೆ.

ಸದ್ಯ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಶಿರಾದಲ್ಲಿ 50 ಮಂದಿ ಐಸೋಲೇಟ್ ನಲ್ಲಿದ್ದಾರೆ. ಸದ್ಯ ಜನರ ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಸರ್ಕಾರ ಸೂಚಿಸಿತ್ತು.

ಸದ್ಯ 45 ಸಾವಿರ ಜನರು ಕೊರೊನಾ ಪರೀಕ್ಷೆಗೆ ಒಳಪಡಲಿದ್ದಾರೆ. ಇವರೆಲ್ಲ ಚುನಾವಣೆ ಪ್ರಚಾರ ಹಾಗೂ ಸಮಾವೇಶಗಳಲ್ಲಿ ಭಾಗವಹಿಸಿದ್ದರು. ಈ ಪೈಕಿ ಈಗಾಗಲೇ ಶುಕ್ರವಾರ 3,768 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 35 ಗ್ರಾಪಂ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲು 45 ತಂಡ ರಚಿಸಲಾಗಿದೆ.

ಈ ಪ್ರಕ್ರಿಯೆ ನ. 14ರ ವರೆಗೂ ನಡೆಯಲಿದೆ. 135 ಆರೋಗ್ಯ ಅಧಿಕಾರಿಗಳು ಹಾಗೂ ಗ್ರಾಪಂ ಸಿಬ್ಬಂದಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ, ತಾಲೂಕು ಕಚೇರಿ ಅಧಿಕಾರಿಗಳನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಈ ಪರೀಕ್ಷೆಗೆ ಒಳಪಡಿಸಲಾಗುವುದು. ಆದರೆ, ತಾಲೂಕು ಕಚೇರಿ ಅಧಿಕಾರಿಗಳ ವರದಿ ನೆಗೆಟಿವ್ ಬಂದಿದೆ.

Leave a Reply

Your email address will not be published. Required fields are marked *

You May Also Like

ಬೆಂಬಲ ಬೆಲೆಯಲ್ಲಿ ಸರ್ಕಾರ ಗೋವಿನ ಜೋಳ ಖರೀದಿಸಲು ರೈತರ ಆಗ್ರಹ

ತಾನು ಬೆಳೆದ ಬೆಳೆ ತನ್ನ ಬದುಕು ಬಂಗಾರವಾಗಿಸುತ್ತದೆ ಎಂದು ನಂಬಿದ ಅನ್ನದಾನಿಗೆ ಭಾರಿ ನಿರಾಶೆಯಾಗಿದೆ. ಬಿಳಿ ಗೋವಿನ ಜೋಳ ಬದುಕಿನಲ್ಲಿ ಬೆಳಕು ಚೆಲ್ಲುತ್ತೆ ಎಂಬ ವಿಶ್ವಾಸದಲ್ಲಿ ರೈತನಿಗೆ ಬಿಳಿ ಗೋವಿನ ಜೋಳ ಕೂಡ ಉತ್ತಮ ಧಾರಣೆ ನೀಡದ ಹಿನ್ನೆಲೆ ಬದುಕಿಗೆ ಕತ್ತಲೆ ಆವರಿಸಿದಂತಾಗಿದೆ. ಇದರಿಂದ ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ರೈತರು ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ.

ಡಿಸಿ ಹಿರೇಮಠ ಎದುರಿಗೊಂದು ಪ್ರಶ್ನೆ?: ಸಾವಿಗೆ ಕಾರಣ ಸೋಂಕೊ? ಶುಗರೋ?

ಬೆಳಗಾವಿ: ರಾಜ್ಯ ಹೆಲ್ತ್ ಬುಲೆಟಿನ್ ಪ್ರಕಾರ, ಗೋಕಾಕ್ ತಾಲೂಕಿನ ಕೊಣ್ಣೂರಿನ 55 ವರ್ಷದ ಮಹಿಳೆಯೊಬ್ಬರು ಕೊವಿಡ್ನಿಂದ ಮೃತರಾಗಿದ್ದಾರೆ. ಈ ಮಾಹಿತಿಯನ್ನು ಜಿಲ್ಲಾಡಳಿತ ರಾಜ್ಯ ಆರೋಗ್ಯ ಇಲಾಖೆಗೆ ಕಳಿಸಿತ್ತು. ಜಿಲ್ಲಾ ವೈದ್ಯಾಧಿಕಾರಿಗಳು ಟೆಸ್ಟ್ ವರದಿ ಬರುವ ಮುನ್ನವೇ ಸಾವು ಕೊವಿಡ್ ಕಾರಣದಿಂದ ನಿರ್ಧರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೂವಿನ ಹಡಗಲಿ: ಬಳ್ಳಾರಿ ಜಿಲ್ಲೆಯ ಹೂನಿನ ಹಡಗಲಿ ತಾಲೂಕಿನಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು, ಒಟ್ಟು 9…

ಗದಗ ಜಿಲ್ಲೆಯಲ್ಲಿ ಹಳದಿ ಕತ್ತುಪಟ್ಟಿಯ ತೋಳದ ಹಾವು ಪತ್ತೆ

ತೋಳದ ಹಾವು ಕೆಲವು ಪ್ರದೇಶಗಳಲ್ಲಿ ಸಾಮಾನ್ಯ, ಆದರೆ ಹಳದಿ ಕತ್ತು ಪಟ್ಟಿಯ ತೋಳದ ಹಾವು ಗದಗ್ ನ ರೋಣದಂತಹ ಬಿಸಿಲೂರಿನಲ್ಲಿ ಪತ್ತೆಯಾಗಿದ್ದು, ಸಂಶೋಧಕರಲ್ಲಿ ಅಚ್ಚರಿ ಮೂಡಿಸಿದೆ.