ಖಾಂಡ್ವಾ : ಭಾಷಣ ಕೇಳಲು ಬಂದ ರೈತರೊಬ್ಬರು ಹೃದಯಾಘಾತದಿಂದ ಕಣ್ಣೆದುರೇ ಸಾವನ್ನಪ್ಪಿದ್ದರೂ ಬಿಜೆಪಿ ನಾಯಕರು ಭಾಷಣ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ನ. 30ರಂದು ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಪ್ರಚಾರ ಸಭೆ ನಡೆದಿತ್ತು.

ಈ ಸಭೆಯಲ್ಲಿ ಬಿಜೆಪಿಯ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಭಾಷಣ ಮಾಡಬೇಕಿತ್ತು. ಈ ಸಂದರ್ಭದಲ್ಲಿಯೇ ಪ್ರಮಾದವೊಂದು ಜರುಗಿ, ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದರು. ಇದು ತಿಳಿದರೂ ನಾಯಕರು ಮಾತ್ರ ಭಾಷಣ ಮಾಡಿದ್ದಾರೆ.

ಬಿಜೆಪಿಯ ಪಂಧಾನ ಕ್ಷೇತ್ರದ ಶಾಸಕ ರಾಮ್ ಡಾಂಗೊರೆ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದ 80 ವರ್ಷದ ರೈತ ಜೀವನ್ ಸಿಂಗ್ ಎಂಬುವವರು ಅಲ್ಲಿಯೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಗುತ್ತಿತ್ತು.

ರೈತ, ಕುಸಿದು ಬೀಳುತ್ತಿದ್ದಂತೆ ಅಕ್ಕ ಪಕ್ಕ ಕುಳಿತಿದ್ದವರೆಲ್ಲರೂ ಗಾಬರಿಯಾಗಿ ಓಡಿದ್ದಾರೆ. ಅಲ್ಲಿನ ಎಲ್ಲ ಕುರ್ಚಿಗಳೂ ಖಾಲಿಯಾದವು. ವ್ಯಕ್ತಿಯೊಬ್ಬರು ಮೃತ ರೈತನ ಮುಖದ ಮೇಲೆ ಟವೆಲ್ ಹೊದಿಸಿದ್ದಾರೆ. ಆದರೆ, ರೈತ ಮೃತಪಟ್ಟಿರುವುದು ತಿಳಿದ ನಂತರವೂ ನಾಯಕರು ಭಾಷಣ ಮುಂದುವರೆಸಿದ್ದರು. 

ಸಿಂಧಿಯಾ ಅವರು ವೇದಿಕೆ ಬರುವುದಕ್ಕೂ ಮುನ್ನ ಈ ಘಟನೆ ಜರುಗಿತ್ತು. ಆನಂತರ ಅವರಿಗೆ ವಿಷಯ ತಲುಪಿಸಲಾಯಿತು. ನಂತರ ಸಿಂಧಿಯಾ, ಒಂದು ನಿಮಿಷದ ಮೌನ ಆಚರಿಸಿ, ಭಾಷಣ ಪ್ರಾರಂಭಿಸಿದರು. 

Leave a Reply

Your email address will not be published. Required fields are marked *

You May Also Like

ದೇಶ ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ! ಈ ಭಾಷಣದಲ್ಲಿ ಏನು ಹೇಳಿದರು?

ನವದೆಹಲಿ : ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗಿರುವ ಸಂತಸ ಹಂಚಿಕೊಂಡಿದ್ದಾರೆ.

ರಾಜ್ಯಸಭೆ ಕಲಾಪಕ್ಕೆ ಸರಕಾರವೇ ಹೊಣೆ: ಮಲ್ಲಿಕಾರ್ಜುನ ಖರ್ಗೆ

“ನಮ್ಮ ಧ್ವನಿಯನ್ನು ಹತ್ತಿಕ್ಕಲು ನಾವು ಬಿಡುವುದಿಲ್ಲ. ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಮತ್ತು ನಾವು ಮೋದಿಜಿ ಯವರ ಯಾವುದೇ ಸರ್ವಾಧಿಕಾರಕ್ಕೆ ಅವಕಾಶ ನೀಡುವುದಿಲ್ಲ.”

ಗೋಲ್ಡ್ ಸ್ಮಗ್ಲಿಂಗ್: ‘ಸ್ವಪ್ನ’ ಸುಂದರಿ ಲಾಕ್ ಡೌನಿನಲ್ಲಿ ಬೆಂಗಳೂರಿಗೆ ಬಂದಿದ್ದು ಹೇಗೆ?

ಯುಎಇಯಿಂದ 30 ಕೆಜಿ ಚಿನ್ನ ಅಕ್ರಮ ಸಾಗಾಣಿಕೆಯ ಆರೋಪ ಎದುರಿಸುತ್ತಿರುವ ಸ್ವಪ್ನ ಸುರೇಶ್ ಲಾಕ್ ಡೌನ್ ಸಂದರ್ಭದಲ್ಲಿ ಕೆರಳದಿಂದ ಬೆಂಗಳೂರು ತಲುಪಿದ್ದು ಹೇಗೆ?

ಭಾರತಕ್ಕೆ ಮರಳಿದವರು ರೂಪಾಂತರಿ ವೈರಸ್ ಹೊತ್ತು ತಂದರು

ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೋನಾ ವೈರಸ್ ಭಾರತದಲ್ಲೂ ವಕ್ಕರಿಸಿದೆ. ದಕ್ಷಿಣ ಆಫ್ರಿಕಾದ ವೈರಸ್ ದೇಶದಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.