ಬಳ್ಳಾರಿ : ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಈ ವರ್ಷ ಒಂದೇ ದಿನ ಆಚರಿಸಲು ನಿರ್ಧರಿಸಲಾಗಿದೆ. ನ.13 ರಂದು ಈ ಬಾರಿ ಒಂದೇ ದಿನದ ಮಟ್ಟಿಗೆ ಗತ ವೈಭವ ಸಾರುವ ಈ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಈ ಉತ್ಸವ ಮೂರು ದಿನಗಳ ಮಟ್ಟಿಗೆ ನಡೆಯುತ್ತಿತ್ತು. ಆದರೆ, ಈ ವರ್ಷ ಕೊರೊನಾದಿಂದಾಗಿ ಕೇವಲ ಒಂದೇ ದಿನ ಹಂಪಿ ಉತ್ಸವ ಆಚರಿಸಲು ನಿರ್ಧರಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್, ಈ ಬಾರಿ ಹಂಪಿ‌ ಉತ್ಸವವನ್ನು ನ. 13ರಂದು ಒಂದು ದಿನ ಮಾತ್ರ ನಡೆಸಲು ತೀರ್ಮಾನಿಸಿದೆ. ಈ ಉತ್ಸವವನ್ನು ವಿಜಯನಗರ ಸಾಮ್ರಾಜ್ಯದ ಗತ ವೈಭವವವನ್ನು ಇಂದಿನ‌ ಪೀಳಿಗೆಗೆ ಪರಿಚಯಿಸಲು ಹಮ್ಮಿಕೊಳ್ಳುತ್ತ ಬರುತ್ತಿದೆ. ಈ ಬಾರಿ ಕೊರೊನಾದಿಂದಾಗಿ ಈ ವರ್ಷ ಒಂದೇ ದಿನ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಾರಿ ಒಂದೇ ದಿನ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ವೇದಿಕೆ ಕಾರ್ಯಕ್ರಮಗಳು ಇರುವುದಿಲ್ಲ. ಅಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವೀರೂಪಾಕ್ಷ ದೇವಸ್ಥಾನದ ವರೆಗೆ ಜನಪದ ಕಲಾ ತಂಡಗಳೊಂದಿಗೆ ದೇವರ ಮೂರ್ತಿಯ ಶೊಭಾಯಾತ್ರೆ ನಡೆಯಲಿದೆ.

ಪ್ರತಿ ತಾಲೂಕಿನಿಂದ ಎರಡೆರಡು ಜನಪದ ಕಲಾ ತಂಡಗಳು ಪಾಲ್ಗೋಳ್ಳಲಿವೆ. ಆ ನಂತರ ವಿರೂಪಾಕ್ಷ ದೇವಸ್ಥಾನದ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿ ತಟದಲ್ಲಿ ತುಂಗಾ ಆರತಿ ನಡೆಯಲಿದೆ.

Leave a Reply

Your email address will not be published. Required fields are marked *

You May Also Like

ಅಗಸ್ತ್ಯ ತೀರ್ಥ ಬಾವಿಯಲ್ಲಿ ನೀರುಪಾಲಾದ ಯುವಕ

ದೀಪಾವಳಿ ಹಬ್ಬಕ್ಕೆಂದು ಸಂಬಂಧಿಕರ ಊರಿಗೆ ಬಂದಿದ್ದ ಯುವಕ ನೀರುಪಾಲಾದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಲಾಕ್ ಡೌನ್ ಇಲ್ಲ!

ಬೆಂಗಳೂರು : ಲಾಕ್ ಡೌನ್ ತೆರವುಗೊಂಡ ನಂತರ ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹೀಗಾಗಿ…

ಮನೆಯವರ ಕಿರುಕುಳಕ್ಕೆ ನೊಂದ ಸೊಸೆ ಮಾಡಿದ್ದೇನು?

ಮಂಡ್ಯ : ಮನೆಯವರ ನಿರಂತರ ದೌರ್ಜನ್ಯಕ್ಕೆ ಬೇಸತ್ತ ಸೊಸೆಯೊಬ್ಬರು ಪತಿ, ಮಾವ ಹಾಗೂ ಅತ್ತೆಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಯೋಗ್ಯ ಅಭ್ಯರ್ಥಿ ಕುಬೇರಪ್ಪ: ಎಚ್.ಕೆ.ಪಾಟೀಲ್

ಇದೇ 28 ರಂದು ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಡಾ. ಆರ್.ಎಂ ಕುಬೇರಪ್ಪ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ಶಿಕ್ಷಕರ ಸಮಸ್ಯೆಗಳನ್ನ ಬಗೆಹರಿಸಲು ಯೋಗ್ಯ ಅಭ್ಯರ್ಥಿಯಾಗಿದ್ದಾರೆ ಎಂದು ಶಾಸಕ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ.ಪಾಟೀಲ್ ಹೇಳಿದರು.