ಮುಂಡರಗಿ: ಸ್ಥಳೀಯ ಪುರಸಭೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಬಿ.ಜೆ.ಪಿ ಪಕ್ಷದಿಂದ ಕವಿತಾ ಉಳ್ಳಾಗಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ಚಿಕ್ಕಣ್ಣನವರ ಅವಿರೋಧ ಆಯ್ಕೆ ಆಗುವದರ ಮೂಲಕ ಮುಂಡರಗಿ ಪುರಸಭೆಯನ್ನು ಬಿ.ಜೆ.ಪಿ ಪಕ್ಷವು ಉಳಿಸಿಕೊಂಡಿದೆ.

ರಾಜ್ಯ ಚುನಾವಣೆ ಆಯೋಗದ ಅಡಿಯಲ್ಲಿ ದಿ.4 ರಂದು ನಡೆದ ಚುನಾವಣೆಯ ಪ್ರಕ್ರೀಯೆಯಲ್ಲಿ ಕಳೆದ 2 ವರ್ಷಗಳ ಹಿಂದೆ ನಡೆದ ಪುರಸಭೆಯ ಚುನಾವಣೆಯಲ್ಲಿ ಬಿಜೆಪಿಯಿಂದ 12 ಜನ ಕಾಂಗ್ರೆಸ್‌ನಿAದ 6 ಜನ ಜೆಡಿಎಸ್‌ನಿಂದ 1 ಹಾಗೂ ಪಕ್ಷೇತರಾಗಿ 4 ಒಟ್ಟು 23 ಜನ ಸದಸ್ಯರು ಆಯ್ಕೆಯಾಗಿದ್ದರು. ಆದರೆ ಪುರಸಭೆಯ ಅಧಿಕಾರ ನಡೆಸುವ ಸಂಪೂರ್ಣ ಬಹುಮತವನ್ನು ಬಿಜೆಪಿ ಪಕ್ಷವು ಹೊಂದಿದ್ದರು ಸಹ ಪಕ್ಷೇತರ 4 ಜನ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದರಿAದ ಒಟ್ಟು 16 ಜನ ಸದಸ್ಯರ ಸಂಖ್ಯಾ ಬಲವನ್ನು ಹೊಂದಿರುವ ಬಿಜೆಪಿ ಪಕ್ಷವು ಸರ್ಕಾರದ ಮೀಸಲಾತಿ ಆಧಾರ ಮೇಲೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬ ವರ್ಗ ಮಹಿಳಾ ಹಾಗೂ ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗ ಇರುವ ಕಾರಣ ಸರ್ವಾನುಮತದಿಂದ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಉಳ್ಳಾಗಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ಚಿಕ್ಕಣ್ಣವರ ಅವರನ್ನು ಆಯ್ಕೆ ಮಾಡಲಾಯಿತು. ಚುನಾವಣೆಯ ಅಧಿಕಾರಿಯಾಗಿ ತಹಶೀಲ್ದಾರ್ ಆಶಪ್ಪ ಪೂಜಾರ ಕಾರ್ಯನಿರ್ವಹಿಸಿದರು.

ಚುನಾವಣೆಯ ಪ್ರಕ್ರಿಯೇಯಲ್ಲಿ 22 ಪುರಸಭೆಯ ಸದಸ್ಯರು ಪಾಲ್ಗೊಂಡಿದ್ದರು. ಆದರೆ 23 ನೇ ವಾರ್ಡಿನ ಸದಸ್ಯರು ಮಾತ್ರ ಚುನಾವಣೆ ಪ್ರಕ್ರೀಯ ಮುಗಿದ ಮೇಲೆ ಸಭೆಗೆ ಭಾಗವಹಿಸಿದರು. ಚುನಾವಣೆಯ ಆಯ್ಕೆಯ ಸಭೆಯಲ್ಲಿ ಲೋಕಸಾಭಾ ಸದಸ್ಯ ಶಿವಕುಮಾರ ಉದಾಸಿ, ಶಾಸಕರಾದ ರಾಮಣ್ಣ ಲಮಾಣಿ, ಪುರಸಭೆಯ ಸದಸ್ಯರಾದ ಪ್ರಕಾಶ ಹಲವಾಗಲಿ, ಸುಮಾ ಬಳ್ಳಾರಿ, ಗಂಗಿಮಾಳವ್ವ ಮೋರನಾಳ, ಶಿವಪ್ಪ ಚಿಕ್ಕಣ್ಣನವರ, ತಿಮ್ಮಪ್ಪ ದಂಡಿನ, ಕವಿತಾ ಉಳ್ಳಾಗಡ್ಡಿ, ಶಾಂತವ್ವ ಕರಡಿಕೊಳ್ಳ, ಪವನಕುಮಾರ ಮೇಟಿ, ರುಕ್ಮಣಿ ಸುಣಗಾರ, ನಿರ್ಮಾಲಾ ಕೊರ್ಲಹಳ್ಳಿ, ಪ್ರಲ್ಲಾದ ಹೊಸಮನಿ, ನಾಗೇಂದ್ರಪ್ಪ ಹುಬ್ಬಳ್ಳಿ, ಶಿವಾನಂದ ಬಾರಕೇರ, ಜ್ಯೋತಿ ಹಾನಗಲ್, ವೀಣಾ ದೇವಿ ಸೋನಿ, ಲಿಂಗರಾಜಗೌಡ ಪಾಟೀಲ, ರೀಯಾನಬೇಗಂ ಕೆಲೂರ, ರಾಜಾಭಕ್ಷಿ ಬೇಟಗೇರಿ, ನಾಗರಾಜ ಹೊಂಬಗಟ್ಟಿ, ಮಹ್ಮದರಪೀಕ್ ಮುಲ್ಲಾ, ಸಂತೋಷ ಹಿರೇಮನಿ, ರೈಮನಸಾಬ ಮಲ್ಲನಕೇರಿ ಹಾಗೂ ಪುರಸಭೆಯ ಮುಖ್ಯಾಧಿಖಾರಿ ಡೊಂಬರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ನಿಧಿ ನೀಡದ ಮನೆಗಳು ಗುರುತಿಸುವ ಸಂಸ್ಕೃತಿ ನಮ್ಮದಲ್ಲ

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ನೀಡದ ಮನೆಗಳನ್ನು ಗುರುತಿಸುವ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕೆ ಹೇಳಿಕೆಗೆ ಆರೆಸ್ಸೆಸ್ ಸರ ಸಂಘ ಚಾಲಕ ಡಾ.ಮೋಹನ್ ಭಾಗವತ್ ಅವರು ತುರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನ ಬಂಡೆಗೆ ನಮ್ಮ ಡೈನಾಮೈಟ್ ಗಳು ಉತ್ತರ ನೀಡಲಿವೆ – ಕಟೀಲ್!

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗುಡುಗಿದ್ದಾರೆ.

ಸಿದ್ದರಾಮಯ್ಯ ಅವರಿಗೆ ದಮ್ ಇದ್ದಿದ್ರೆ ಚಾಮುಂಡೇಶ್ವರಿಯಲ್ಲಿ ಯಾಕೆ ಗೆಲ್ಲಲಿಲ್ಲ..?: ಸಚಿವ ಈಶ್ವರಪ್ಪ

ಮೈಸೂರು: ಮಾಜಿ ಸಿದ್ದರಾಮಯ್ಯ ಅವರಿಗೆ ದಮ್ ಇದ್ದಿದ್ರೆ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಬೇಕಿತ್ತು. ಹಾಗಾದ್ರೆ…

ಸಚಿವ ಸಿ ಸಿ ಪಿ ಕ್ಷಮೆ ಯಾಚಿಸಲಿ: ಅರಬರ್

ಉತ್ತರಪ್ರಭ ಸುದ್ದಿ ಗದಗ: ಮೆಣಿಸಗಿ ಗ್ರಾಮದಲ್ಲಿ ಹರಿಜನ ಗಿರಿಜನ ಅಭಿವೃದ್ಧಿ ವಿವಿಧ ಕಾಮಗಾರಿ ಚಾಲನೆ ನೀಡಿ…