ಮೈಸೂರು: ಮಾಜಿ ಸಿದ್ದರಾಮಯ್ಯ ಅವರಿಗೆ ದಮ್ ಇದ್ದಿದ್ರೆ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಬೇಕಿತ್ತು. ಹಾಗಾದ್ರೆ ಏಕೆ ಗೆಲ್ಲಲಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ದಮ್ ಇಲ್ಲ ಎಂದು ಹೇಳಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದು ನಾವು ನಮ್ಮ ದಮ್ ತೋರಿಸಿದ್ದಿವಿ. ಬಿಜೆಪಿ ವಿಧಾನ ಪರಿಷತ್ತಿಗೆ ಎಂಟಿಬಿ ನಾಗರಾಜ್, ಶಂಕರ್ ಗೆ ಟಿಕೇಟ್ ನೀಡಿದ್ದು ಜಾತಿ ಲೆಕ್ಕಾಚಾರದ ಮೇಲೆ ಅಲ್ಲ. ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಋಣ ತೀರಿಸಿದ್ದೇವೆ. ಆದ್ರೆ ಮೊನ್ನೆ ತನಕ ಎಮ್ಎಲ್ಸಿ ಆಗಿದ್ದ ರೇವಣ್ಣ ಅವರಿಗೂ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಇನ್ನು ಪ್ರತಿಯೊಂದರಲ್ಲೂ ಜಾತಿ ಲೆಕ್ಕಾಚಾರ ಹಾಕುವ ಸಿದ್ದರಾಮಯ್ಯ, ಈವರೆಗೆ ಜಾತಿಯನ್ನು ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ. ಇನ್ನಾದ್ರು ಸ್ವಾರ್ಥ ಬಿಡಬೇಕು. ಸಿಎಂ ಆಗುವವರೆಗೆ ಮಾತ್ರ ಹಿಂದುಳಿದವರು, ದಲಿತರು ಅನ್ನುತ್ತಿದ್ದ ಸಿದ್ದರಾಮಯ್ಯ, ಸಿಎಂ ಆದ ಮೇಲೆ ಎಲ್ಲರನ್ನೂ ಮರೆತರು. ಇನ್ಮೆಲೆ ಜಾತಿ ವಿಚಾರ ಎತ್ತಬೇಡಿ. ಸಿಎಂ ಯಡಿಯೂರಪ್ಪ ಅವರಿಗೆ ದಮ್ಮ ಇಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

You May Also Like

ಕೈ ಕಮಲದ ನಡುವೆ ಟ್ವೀಟ್ ಸಮರ

ಬ್ರಷ್ಟಾಚಾರದ ವಿಷಯವೀಗ ಕೈ-ಕಮಲದ ಟ್ವೀಟ್ ಸಮರಕ್ಕೆ ಕಾರಣವಾಗಿದೆ. ಡಿಕೆಶಿ ವಿಚಾರವಾಗಿ ಬಿಜೆಪಿ ಟ್ವೀಟ್ ಮಾಡಿದರೆ, ಸಿಎಂ ಬಿಎಸ್ವೈ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿದೆ.

ವೀಕೆಂಡ್ ಆಲಮಟ್ಟಿ ಹೌಸ್ ಫುಲ್

“ಕಲರಮಯ ಬೆಳಕಿನ ಚಿತ್ತಾರದಲ್ಲಿ ಮಿನುಗಿದ ಡ್ಯಾಂ- ಜಲ ಸೌಂದರ್ಯ ಸವಿಯಲು ಅಸಂಖ್ಯ ಪ್ರವಾಸಿಗರ ಲಗ್ಗೆ..!” ಆಲಮಟ್ಟಿ:…

60 ಜನರಿರುವ ಕುಟುಂಬಕ್ಕೆ ಎಂಟ್ರಿ ಕೊಟ್ಟ ಸೋಂಕು!

ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ಹಾವಳಿ ದಿನದಿಂದ ದಿನಕ್ಕ ಏರಿಕೆಯಾಗುತ್ತಿದೆ.  ನವಲಗುಂದ ತಾಲೂಕಿನ ಶಿರಕೋಳ ಗ್ರಾಮಕ್ಕೂ…