ಗದಗ: ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಗಜೇಂದ್ರಗಡದ ಇಂಗು ಕೆರೆಯ ಗರಸು ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡಿದ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ಕೂಡಲೇ ರಾಜಿನಾಮೆ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಮೀಟಿ ವಕ್ತಾರ ಬಿ.ಎಸ್.ಶೀಲವಂತರ ಆಗ್ರಹಿಸಿದ್ದಾರೆ.

ಈ ಕುರಿತು ಗದಗನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಅವರು ಕಾರ್ಖಾನೆ ಸ್ಥಾಪಿಸುವ ಕಾರ್ಯಕ್ಕೆ ಅವರ ಮಾಲಿಕತ್ವದ ಜಮೀನುಗಳಾದ ಗಜೇಂದ್ರಗಡ ತಾಲೂಕು ನರೇಗಲ್ಲ ಹೋಬಳಿಯ ಗೌಡಗೇರಿ ಗ್ರಾಮದ ರಿ.ಸ ನಂಬರ್ 81/1ರಲ್ಲಿ 8 ಎಕರೆ 12 ಗುಂಟೆ ಹಾಗು 81/5ರಲ್ಲಿ 9 ಎಕರೆ ಸೇರಿ ಒಟ್ಟು 17 ಎಕರೆ 12 ಗುಂಟೆ ಪ್ರದೇಶದಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಗಜೇಂದ್ರಗಡದ 37 ಎಕರೆ ವಿಸ್ತೀರ್ಣದ ಇಂಗು ಕೆರೆಯ ಗರಸು ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ಎರಡು ತಿಂಗಳಿಗೂ ಹೆಚ್ಚು ಕಾಲ ಹಿಟಾಚಿ, ಜೆಸಿಬಿಗಳ ಮೂಲಕ ಅಂದಾಜು 70-80 ಲಕ್ಷ ರೂಪಾಯಿಯ ಕೆರೆಯ ಮಣ್ಣನ್ನು ಅಗೆದು ಟಿಪ್ಪರ್ಗಳ ಮೂಲಕ ರಾಜಾರೋಷವಾಗಿ ಶಾಸಕರು ತಮ್ಮ ಉದ್ದೇಶಿತ ಕಾರ್ಖಾನೆ ಸ್ಥಾಪಿಸುವ ಜಮೀನುಗಳಿಗೆ ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಈ ಕೆರೆಯಲ್ಲಿ ಮೂರು ಜನ ಮೃತಪಟ್ಟಿದ್ದಾರೆ. ಈ ಕೆರೆಯಲ್ಲಿ ಬೇಕಾಬಿಟ್ಟಿಯಾಗಿ ಮಣ್ಣ ಅಗೆದಿದ್ದರಿಂದ ದೊಡ್ಡ-ದೊಡ್ಡ ಕಂದಕಗಳು ನಿರ್ಮಾಣವಾಗಿ ಮೊದಲೇ ಸರಿಯಾದ ವಡ್ಡು ನಿರ್ಮಾಣವಾಗದ ಕಾರಣ ಕೆರೆಯಿಂದ ಗಜೇಂದ್ರಗಡ ನಗರಕ್ಕೆ ಗಂಡಾಂತರ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಿಸಿ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ದುರುಪಯೋಗ ಪಡಿಸಿಕೊಂಡು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ ಹಿನ್ನೆಲೆ ಪ್ರಜಾ ಪ್ರತಿನಿಧಿ ಕಾಯ್ದೆ 1951 ಉಲ್ಲಂಘಿಸಿದ ಬಂಡಿಯವರು ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಹಾಗು ತಪ್ಪಿತಸ್ಥ ಶಾಸಕರ ಮೇಲೆ ದೂರು ದಾಖಲಿಸಿಕೊಂಡು ತಿಖೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಬೇಕು. ಇನ್ನು ಮುಖ್ಯವಾಗಿ ಈ ಕಾರ್ಯದಲ್ಲಿ ಶಾಸಕರಿಗೆ ಸಹಕಾರ ನೀಡಿದ ಕಂದಾಯ ಇಲಾಖೆ, ಸಣ್ಣ ನಿರಾವರಿ ಇಲಾಖೆ ಅಧಿಕಾರಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಹಿಂದಿನ ಅವಧಿಯಲ್ಲಿ ಕಳಕಪ್ಪ ಬಂಡಿ ಅವರು ಶಾಸಕರಾಗಿದ್ದಾಗಲೇ ಈ ಕೆರೆಯನ್ನು ನಿರ್ಮಿಸಲಾಗಿತ್ತು. ಇದು ನಿಷ್ಪ್ರಯೋಜಕ ಕೆರೆಯಾಗಿದ್ದು ಸರಿಯಾದ ಒಡ್ಡು ಕೂಡ ಹಾಕಲಾಗಿಲ್ಲ. ಕಾಮಗಾರಿಯೂ ಕೂಡ ಸಂಪೂರ್ಣ ಕಳಪೆಯಿಂದ ಕೂಡಿದೆ. ಈ ಕಾಮಗಾರಿಯಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಈ ಹಿಂದೆಯೂ ದೂರಲಾಗಿತ್ತು.

ಗಜೇಂದ್ರಗಡ ಪಟ್ಟಣದ ಜನ ಅನೇಕ ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ 22 ದಿನಕ್ಕೊಮ್ಮೆ ನೀರು ಸಿಗುವ ಪರಿಸ್ಥಿತಿ ಇದೆ. ತಾಲೂಕಿನ ರಸ್ತೆಗಳು ಹದಗೆಟ್ಟು ಹೋಗಿವೆ. ಅಲ್ಲದೆ ಕೊರೊನಾ ಕಾಯಿಲೆ ಉಲ್ಭಣಗೊಂಡು ಸರಿಯಾದ ಚಿಕಿತ್ಸೆ ಸಿಗದೆ ಜನ ಸಾಯುತ್ತಿರುವಾಗ ಈ ಬಗ್ಗೆ ಸ್ಪಂದಿಸಬೇಕಾದ ಯೋಗ್ಯ ಯೋಜನೆಗಳನ್ನು ರೂಪಿಸಬೇಕಾದ ಶಾಸಕರು ಅಧಿಕಾರ ಸಿಕ್ಕಿದೆ ಎಂದು ಅದನ್ನು ದುರುಪಯೋಗ ಪಡಿಸಿಕೊಂಡು ಸಂಪತ್ತಿನ ಗಳಿಕೆಯಲ್ಲಿ ನಿರತರಾಗಿರುವುದು ಗಜೇಂದ್ರಗಡ ನಗರದ ಜನತೆಯ ದೌರ್ಭಾಗ್ಯವಾಗಿದೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಟಿಯಲ್ಲಿ ಗದಗ ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಹಾಗು ಕಡಿಯವರ್ ಇದ್ದರು.

Leave a Reply

Your email address will not be published. Required fields are marked *

You May Also Like

ಪಿಯುಸಿ ಪ್ರಾಯೋಗಿಕ ಪರೀಕ್ಷೆ ಕುರಿತು ಇಲಾಖೆ ಮಾರ್ಗಸೂಚಿ ಪ್ರಕಟ

ಏಪ್ರಿಲ್ 28 ರಿಂದ ಮೇ 18 ರವರೆಗೆ ನಡೆಯಬೇಕಿರುವ 2021 ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಉಪ ನಿರ್ದೇಶಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.

ಬಿಜೆಪಿಯಲ್ಲಿನ ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಾ ಶೀಕರಣಿ ಊಟ!

ಎರಡ್ಮೂರು ದಿನಗಳಿಂದ ಈಗಾಗಲೇ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ ಎದುರಾಗಿದೆ. ಈಗಾಗಲೇ ಕೆಲವು ಅತೃಪ್ತ ಶಾಸಕರು ನೀಡುತ್ತಿರುವ ಹೇಳಿಕೆಯಿಂದಾಗಿ ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವಂತಿದೆ.

ಕಪ್ಪತ್ತಗುಡ್ಡ ವನ್ಯಜೀವಿಧಾಮ: ಕೈಬಿಡಲು ಒತ್ತಾಯಿಸಿ ಮನವಿ

ಸರ್ಕಾರ ಅವೈಜ್ಞಾನಿಕವಾಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೋಷಿಸಿದ್ದು, ಶಿರಹಟ್ಟಿ ತಾಲೂಕಿನ‌ ಬ್ಲಾಕ್ ನಂ 3 ಮತ್ತು 4 ರ ಅರಣ್ಯ ಕ್ಷೇತ್ರವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾ ಅಹಿಂದ್ ಸಂಘ ಹಾಗೂ‌ ಕ್ರಷರ್ ಮತ್ತು‌ ಕಲ್ಲು ಗಣಿಗಾರಿಕೆ ಕಾರ್ಮಿಕ ಒಕ್ಕೂಟ ಸಂಘದ ವತಿಯಿಂದ ಬುಧವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ‌ ಮನವಿ‌ ಸಲ್ಲಿಸಲಾಯಿತು.

ಉತ್ತರದಲ್ಲಿ ರಣ ಬಿಸಿಲು….ದಕ್ಷಿಣದಲ್ಲಿ ಭರ್ಜರಿ ಮಳೆ!

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಉತ್ತರ ಕರ್ನಾಟಕದಲ್ಲಿ ರಣ ಬಿಸಿಲು ಮುಂದುವರೆದಿದೆ. ವಿಜಯಪುರ…