ಅಹಮದಾಬಾದ್ : ಸಾಮಾಜಿಕ ಜಾಲತಾಣದ ಮೂಲಕ ಉದ್ಯಮಿಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ಅಹಮದಾಬಾದ್ ನ ಶೆಲಾದಲ್ಲಿ ನಡೆದಿದೆ. ಚಾಲಾಕಿ ಮಹಿಳೆಯು ಉದ್ಯಮಿಯಿಂದ ರೂ. 2.54 ಲಕ್ಷ ದೋಚಿದ್ದಾರೆ. ಪೂಜಾ ಪ್ರಜಾಪತಿ ಎಂಬ ಹೆಸರಿನ ಪ್ರೊಫೈಲ್‍ ನಿಂದ ಫೇಸ್‍ ಬುಕ್ ನಲ್ಲಿ ಬಂದಿರುವ ಫ್ರೆಂಡ್ ರಿಕ್ವೆಸ್ಟ್ ಅನ್ನು ಉದ್ಯಮಿ ಕಲ್ಪೇಶ್ ಸ್ವೀಕರಿಸಿದ್ದರು. ಸ್ವಲ್ಪ ಸಮಯದವರೆಗೆ ಚಾಟ್ ಮಾಡಿದ ನಂತರ ಪೂಜಾ, ಉದ್ಯಮಿಯನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾಳೆ. 

ಹೀಗಾಗಿ ಇಬ್ಬರೂ ಅ. 19ರಂದು ಅವರ ವಿರಾಮಗಂ ನಿವಾಸದಲ್ಲಿ ಭೇಟಿಯಾಗಿದ್ದರು. ಆಗ ಪೂಜಾ, ತನಗೆ ಸ್ವಲ್ಪ ನೀರು ಕೇಳಿದ್ದಾಳೆ. ಆಗ ಉದ್ಯಮಿ ನೀರು ತರಲು ಒಳಗೆ ಹೋಗಿದ್ದಾರೆ. ಆಗ ಪೂಜಾ ಕಡೆಯ ನಾಲ್ಕಾರು ಜನರು ಒಳಗೆ ಬಂದು ಕಲ್ಪೇಶ್‍ ನನ್ನು ಹೊಡೆದಿದ್ದಾರೆ. 

ಆ ನಾಲ್ವರು ಅತ್ಯಾಚಾರ ಪ್ರಕರಣದಲ್ಲಿ ಕಲ್ಪೇಶ್ ನ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆಗ ಕಲ್ಪೇಶ್ ನನ್ನು ಹೊರ ವಲಯಕ್ಕೆ ಕರೆದುಕೊಂಡು ಹೋಗಿ ರೂ. 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಭಯಗೊಂಡ ಕಲ್ಪೇಶ್ ಅವರಿಗೆ ರೂ. 2.45 ಲಕ್ಷ ನಗದು ಮತ್ತು ರೂ. 3.5 ಲಕ್ಷ ರೂ.ಗಳ ಮೂರು ಚೆಕ್ ನೀಡಿದ್ದಾನೆ. ಸದ್ಯ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಪೂಜಾ ಹಾಗೂ ಆರು ಜನರ ವಿರುದ್ಧ ವಿರಾಮಗಂ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಳ್ಳಾರಿ ಜಿಲ್ಲೆಯಲ್ಲಿಂದು 26 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು ಮತ್ತೆ 26 ಕೊರೊನಾ ಪಾಸಿಟಿವ್ ಪ್ರಕರಣ ದೃಡಪಟ್ಟಿದ್ದು ಸೋಂಕಿತರ ಸಂಖ್ಯೆ 555ಕ್ಕೆ ಏರಿಕೆಯಾಗಿದೆ.

ಸೀಲ್ ಡೌನ್ ಹೆಸರಿನಲ್ಲಿ ನಡೆಯಿತೇ ಕೋಟಿ ಕೋಟಿ ಅವ್ಯವಹಾರ?

ಕೊರೊನಾ ಸೋಂಕಿತರ ಮನೆಯ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿದೆ. ಈ ಹಿಂದೆ ಇದರ ಪ್ರಮಾಣ ತುಸು ಹೆಚ್ಚಾಗಿತ್ತು. ಆದರೆ, ಈ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.