ಧಾರವಾಡ : ಅವಳಿ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ಮಾಡಿದ ಪೊಲೀಸರು ನಾಲ್ವರನ್ನು ಬಂಧಿಸಲಾಗಿದೆ. 

ಇಲ್ಲಿಯ ಉಪ ನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ್ದರು.ಮಾಳಾಪುರದ ಲತೀಫ್ ತಂಬೋಲಿ, ರಿಯಾಜ್ ಖಾನ್, ರಸಲಾಪುರದ ಓಣಿಯ ಇಜಾಜ್ ಅಹ್ಮದ್ ಮನಿಯಾರ್, ಮಹೆಬೂಬ್ ನಗರದ ಅಲ್ಲಾಭಕ್ಷ ಬಂಧಿತರು. 

ನಿಖರ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರೂ. 40,200 ನಗದು ಹಾಗೂ ಮೂರು ಮೊಬೈಲ್  ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಐಪಿಎಲ್ ಕ್ರಿಕೆಟ್ ಟೂರ್ನಿಗೆ ಸಂಬಂಧಿಸಿದಂತೆ ಬಂಧಿತರು ಬೆಟ್ಟಿಂಗ್ ಆಡುತ್ತಿದ್ದರು. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 1843 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1843 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 25317…

ಪೋಲಿಸ್ ದಾಳಿ : ಕಲ್ಲುಗಣಿ ಸ್ಪೋಟಕ ವಸ್ತುಗಳು ವಶಕ್ಕೆ, ಓರ್ವನ ಬಂಧನ

ಮುಳಗುಂದ ಸಮೀಪದ ಶೀತಾಲಹರಿ ಗ್ರಾಮದ ಹೊರವಲಯದ ಶೆಡ್ಡವೊಂದರ ಮೇಲೆ ಗದಗ ಗ್ರಾಮೀಣ ಸಿಪಿಐ ರವಿಕುಮಾರ ಕಪ್ಪತನವರ ನೇತೃತ್ವದ ತಂಡ ದಾಳಿ ನಡೆಸಿ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳು ಸೇರಿದಂತೆ ಓರ್ವ ವ್ಯಕ್ತಿಯನ್ನ ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ.

ಆಲಮಟ್ಟಿ ಹಳಕಟ್ಟಿ ಶಾಲೆಯಲ್ಲಿ ಅಮೃತ ಮಹೋತ್ಸವ ಸಂಭ್ರಮ ದೇಶಪ್ರೇಮ ಯುವಜನತೆಯಲ್ಲಿ ಚಿರಾಯುವಾಗಲಿ – ಜಿ.ಎಂ.ಕೋಟ್ಯಾಳ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಜಾತಿ, ಮಥ, ಪಂಥ, ಧರ್ಮಕ್ಕಿಂತ ದೇಶ ದೊಡ್ಡದು. ಆ ಅಭಿಮಾನ,ಗೌರವಯುಳ್ಳ ದೇಶ…

ತಿಮ್ಮಾಪೂರ : ರೈತ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರೈತ ನಾಯಕ ಪ್ರೋ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್.ನಾರಾಯಣರಡ್ಡಿ ಬಣದ ಸಂಘಕ್ಕೆ ತಾಲ್ಲೂಕಿನ ತಿಮ್ಮಾಪೂರ ಗ್ರಾಮ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.