ಬೆಂಗಳೂರು : ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿದೆ.

ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ  ಕಳೆದ 6 ತಿಂಗಳಿನಿಂದ ಸರ್ಕಾರ, ಆರ್ಥಿಕವಾಗಿ ನಷ್ಟ ಅನುಭವಿಸಿತ್ತು. ಅಲ್ಲದೇ, ಕಳೆದ  6 ತಿಂಗಳಿಂದಲೂ ದರ ಏರಿಕೆ ಮಾಡುವ ವಿಚಾರ ಸರ್ಕಾರದ ಮುಂದೆ ಇತ್ತು. ಸದ್ಯ ಈ ಪ್ರಸ್ತಾಪಕ್ಕೆ ಒಪ್ಪಿಗೆ ಸಿಕ್ಕಂತಾಗಿದೆ. 

ಸದ್ಯ ವಿದ್ಯುತ್ ದರ ಪ್ರಕಟವಾಗಿದೆ. ಪರಿಷ್ಕೃತ ದರ ನ. 1ರಿಂದ ಜಾರಿಗೆ ಬರಲಿದೆ. ಮಾರ್ಚ್ ತಿಂಗಳಿನಲ್ಲಿಯೇ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಲಾಗಿತ್ತಾದರೂ ಕರೊನಾ ಕಾರಣಕ್ಕಾಗಿ ಮುಂದೂಡಲಾಗಿತ್ತು.

ಆದೇಶದಂತೆ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ಗ್ರಾಹಕರು ಪ್ರತಿ ಯೂನಿಟ್‌ ಗೆ ರೂ. 40 ಪೈಸೆ ಹೆಚ್ಚು ಹಣ ತೆರಬೇಕಾಗಿದೆ. ಈ ವಿದ್ಯುತ್ ದರ ಪರಿಷ್ಕರಣೆಗೆ ಎಲ್ಲ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿದ್ದವು. ಆರು ತಿಂಗಳಿನಿಂದ ಸರಕಾರ ಇದಕ್ಕೆ ಅನುಮತಿ ನೀಡಿರಲಿಲ್ಲ. ಆದರೆ, ಈಗ ಅನಿವಾರ್ಯಲವಾಗಿ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. 

Leave a Reply

Your email address will not be published. Required fields are marked *

You May Also Like

ಪ್ರೌಢ ಶಾಲಾ ಸಹ ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ;

ಉತ್ತರಪ್ರಭ ಕೊಪ್ಪಳ: ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳನ್ನು  ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ…

ಡಿಕೆಸಿ ಅವರಿಗೇಕೆ ಈ ಸಂಶಯ

ಕುಂಬಳಕಾಯಿ ಕಳ್ಳ ಎಂದಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಡಿಕೆಸಿ ಅವರಿಗೆ ಏಕೆ ಈ ಸಂಶಯ ಎಂದು ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ಪ್ರಶ್ನಿಸಿದೆ.

ಗದಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಅಂಧಾ ದರ್ಬಾರ್…!

ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರೆ ಮರಳು ಗಣಿಗಾರಿಕೆಗೆ ಸಿಲುಕಿ ನರಳುವಂತಾಗಿದೆ. ನಿತ್ಯ ಲೆಕ್ಕವಿಲ್ಲದಷ್ಟು ತುಂಗಭದ್ರೆಯ ಒಡಲು ಬಗೆಯುತ್ತಿದ್ದರೂ ತುಂಗವ್ವಾ ಮರಳು ಗಣಿಗಳ್ಳರ ದಾಯಕ್ಕೆ ಅಸಹಾಯಕಳಾಗಿ ಮೈಯೊಡ್ಡಿದ್ದಾಳೆ.

3 ಕೃಷಿ ಕಾನೂನು ಹಿಂಪಡೆದ ಕೇಂದ್ರ ಸರ್ಕಾರ

ವದೆಹಲಿ: ದೇಶದ ಕೆಲ ಭಾಗಗಳಲ್ಲಿ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.