ಕೋಲಾರ : ಗಾಂಜಾ ಅಮಲಿನಲ್ಲಿ ತಮ್ಮ ಚಿಕ್ಕಪ್ಪನನ್ನೇ ಬಾಲಕ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಮಾಲೂರು ತಾಲೂಕಿನ ಬೆನ್ನಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ.

ಇಬ್ಬರೂ ಸೇರಿ ಗಾಂಜಾ ಸೇವಿಸಿದ್ದರು. ಆದರೆ, ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳು ಶುರುವಾಗಿದೆ. ಈ ಸಂದರ್ಭದಲ್ಲಿ ಚಾಕುವಿನಿಂದ ಬಾಲಕ, ತಮ್ಮ ಚಿಕ್ಕಪ್ಪ ವಿಜಯ್ ಕುಮಾರ್ ನನ್ನು ಕೊಲೆ ಮಾಡಿದ್ದಾನೆ.

ನಶೆಯಲ್ಲಿದ್ದ ಚಿಕ್ಕಪ್ಪ ಮನೆಯ ಮುಂದೆ ಮಲಗಿದ್ದ ಸಂದರ್ಭದಲ್ಲಿ ಆರೋಪಿತ, ಕುತ್ತಿಗೆಗೆ ಚುಚ್ಚಿದ್ದಾನೆ. ತೀವ್ರ ರಕ್ತ ಸ್ರಾವವಾಗಿ ಚಿಕ್ಕಪ್ಪ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಗ್ರಾಮಸ್ಥರು ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿ, ಪೊಲಿಸರಿಗೆ ಒಪ್ಪಿಸಿದ್ದಾರೆ.

ಕೊಲೆಯಾದ ವಿಜಯ್ ಕುಮಾರ್ ಗೆ ಇಬ್ಬರು ಮಕ್ಕಳಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಹೆಂಡತಿಯೂ ಸಹ ಈತನ ಕುಡಿತದ ಕಾಟ ತಾಳದೆ ತನ್ನ ತವರು ಮನೆ ಸೇರಿದ್ದಾಳೆ. ಆದರೆ, ಇಬ್ಬರ ಜಗಳ, ಗ್ರಾಮಸ್ಥರಿಗೆ ಮಾಮೂಲಿಯಾಗಿತ್ತು. ಓದು ಬಿಟ್ಟು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅಣ್ಣನ ಮಗ ಗಾಂಜಾಗೆ ದಾಸನಾಗಿದ್ದ.

Leave a Reply

Your email address will not be published. Required fields are marked *

You May Also Like

ಶಿಘ್ರವೇ ನೇಕಾರರಿಗೆ ಸಹಾಯಧನ ನೀಡಿ

ನೇಕಾರರಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಗುರುವಾರ ವಿಶ್ವ ಬಂಧು ವಿದ್ಯುತ್ ಮಗ್ಗಗಳ ನೇಕಾರರ ಸಂಘದ ಕಾರ್ಯಕರ್ತು ಪ್ರತಿಭಟನೆ ನಡೆಸಿದರು. ಉಪ ನಿರ್ದೇಶಕರ ಕಚೇರಿ ಎದುರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ನಾಪತ್ತೆಯಾಗಿದ್ದ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಕೋಲಾರ : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು…

ಸಚಿವ ಸುಧಾಕರ್ ಗನ್ ಮ್ಯಾನ್, ಡ್ರೈವರ್ ನಡುವೆ ಮಾರಾಮಾರಿ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಮನೆ ಎದುರು ಚಾಲಕ ಸೋಮಶೇಖರ್ ಮೇಲೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ.

ಕಾರ್ಮಿಕರ ಬದುಕಲ್ಲಿ ನಗೆ ಮೂಡಲಿ – ಕುಮಾರಸ್ವಾಮಿ!

ಕಾರ್ಮಿಕರ ದಿನಾಚರಣೆಯ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವಿಟ್ ಮಾಡಿ ಶುಭಾಶಯ ಕೋರಿದ್ದಾರೆ.