ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಜಾಗೊಂಡಿದೆ.

ಇಂದು ಹೈಕೋರ್ಟ್ ನಟಿಯರಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ರಾಗಿಣಿ ಮತ್ತು ಸಂಜನಾ ಸೇರಿದಂತೆ ಬಂಧಿತ ಆರೋಪಿಗಳು ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು.

ಮಾದಕ ದ್ರವ್ಯ ವ್ಯಸನಕ್ಕೆ ಸಂಬಂಧಿಸಿದಂತೆ ಸೆ. 4ರಂದು ಸಿಸಿಬಿ ಪೊಲಿಸರು ಮೊದಲು ನಟಿ ರಾಗಿಣಿ ಅವರ ಮೇಲೆ ದಾಳಿ ನಡೆಸಿದ್ದರು. ಅಂದೇ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಅವರ ವಿಚಾರಣೆ ನಡೆಸಿತ್ತು. ಎನ್‍ ಡಿಪಿಎಸ್ ಕೋರ್ಟ್ ನಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ನಟಿಯನ್ನು ಪರಪ್ಪನ ಅಗ್ರಹಾರದಲ್ಲಿರಿಸಲಾಗಿತ್ತು. ಆಗ ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ನ್ಯಾಯಾಲಯದ ಅನುಮತಿ ಪಡೆದು ಜೈಲಿನಲ್ಲಿಯೇ ವಿಚಾರಣೆ ನಡೆಸಿತ್ತು.

ಇಬ್ಬರು ನಟಿಯರ ಮೇಲೆ ಸಾಕ್ಷ್ಯ ನಾಶದ ಆರೋಪ ಕೇಳಿ ಬಂದಿವೆ. ಹೀಗಾಗಿ ರಾಗಿಣಿ, ಸಂಜನಾಗೆ ಜಾಮೀನು ಕೊಡಬಾರದು. ಪ್ರಕರಣದ ಪ್ರಮುಖ ಆರೋಪಿಗಳ ಬಂಧನವಾಗಿಲ್ಲ. ಜಾಮೀನು ಕೊಟ್ಟರೆ ಇಬ್ಬರು ಪ್ರಭಾವಿಗಳಾಗಿದ್ದರಿಂದ ಪ್ರಕರಣದ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಸಿಸಿಬಿ ಪರ ವಕೀಲರು ವಾದ ಮಂಡಿಸಿದ್ದರು.

ಡ್ರಗ್ ಕೇಸ್ ನಲ್ಲಿ ರಾಗಿಣಿ ಅಮಾಯಕಿ. ನಮ್ಮ ಕಕ್ಷಿದಾರರ ವಿರುದ್ಧ ಅನಗತ್ಯ ಆರೋಪಗಳನ್ನ ಮಾಡಲಾಗಿದೆ. ಸಿಸಿಬಿ ಪೊಲೀಸರ ದಾಳಿ ವೇಳೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಅವರ ಪರ ವಕೀಲ ವಾದಿಸಿದ್ದರು.

Leave a Reply

Your email address will not be published. Required fields are marked *

You May Also Like

ನಟಿ ಬಿಪಾಶಾ ಬಸು ಅವರ ಜೀವನದಲ್ಲಿ ನಡೆದ ಕಹಿ ಘಟನೆ ಯಾವುದು?

ಮಾದಕ ನಟಿ ಬಿಪಾಶಾ ಬಸು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗಿನಿಂದಲೂ ಬಹುತೇಕ ಚಿತ್ರಗಳಲ್ಲಿ ಹಾಟ್ ಆಂಡ್ ಬೋಲ್ಡ್ ಪಾತ್ರಗಳಲ್ಲಿಯೇ ನಟಿಸಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಆದರೆ, ಈ ನಟಿ ಎಷ್ಟೇ ಮಾದಕವಾಗಿದ್ದರೂ ನೇರ ಹಾಗೂ ನಿಷ್ಠುರ. ಅವರಿಗೆ ಚಿತ್ರಗಳಲ್ಲಿ ಅವಕಾಶ ಮಾತ್ರ ಕಡಿಮೆಯಾಗಿಲ್ಲ. ಸದ್ಯ ಅವರ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

ಚಿರಂಜೀವಿ ಹುಟ್ಟು ಹಬ್ಬಕ್ಕೆ ದುಃಖದ ಸಾಲು ಬರೆದ ಅರ್ಜುನ ಸರ್ಜಾ!

ನಟ ಚಿರಂಜೀವಿ ಸರ್ಜಾ ಅವರ 36ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅವರ ಮಾವ ಹಾಗೂ ನಟ ಅರ್ಜುನ್ ಸರ್ಜಾ ಭಾವನಾತ್ಮಕ ಸಾಲುಗಳನ್ನು ಬರೆದು ಶುಭಾಶಯ ಕೋರಿದ್ದಾರೆ.

ಶಂಕರಣ್ಣನನ್ನು ನೆನೆದ ಚಂದನವನದ ಸ್ಟಾರ್ ಗಳು!

ಬೆಂಗಳೂರು : ಚಂದನವನದ ಸ್ಟಾರ್ ಗಳು ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

ನೆಕೆಡ್ ಚಿತ್ರ 27ರಂದು ತೆರೆಗೆ ಬರಲಿದೆ: ಮಾದಕ ಫೋಟೋ ಹಂಚಿಕೊಂಡ RGV

ಮುಂಬೈ: ಬಾಲಿವುಡ್ ನ ಪ್ರತಿಭಾವಂತ ಮತ್ತು ಅನೇಕ ಕಾರಣಗಳಿಂದ ವಿವಾದದ ಸುಳಿಗೆ ಸಿಲುಕುವ ನಿರ್ದೇಶಕ ರಾಮ್…