ಚಿತ್ರದುರ್ಗ : ಅಪ್ರಾಪ್ತ ಬಾಲಕಿಯನ್ನು ವಿವಸ್ತ್ರಗೊಳಿಸಿ, ಬೆದರಿಸಿ, ವಿವಾಹವಾದ ಕುರಿತು ಕೂಡ ಚೆಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾಸ್ಕರ ಎಂಬ ಪಾಪಿಯಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಈ ಪ್ರಕರಣದ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಯುವಕನ ಪೋಷಕರು ಹಾಗೂ ಯುವತಿಯ ಪೋಷಕರ ಮೇಲೆ ಕೂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಚಳ್ಳಕೆರೆಯ ಭರಮ ಸಾಗರ ಎಂಬ ಗ್ರಾಮದಲ್ಲಿನ ಅಪ್ರಾಪ್ತ ಬಾಲಕಿ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. ಹೀಗಾಗಿ ಮನೆಯವರು ಗ್ರಾಮದಲ್ಲಿನ ಶರಣಪ್ಪ ಎಂಬ ವ್ಯಕ್ತಿಯ  ಹತ್ತಿರ ತೆರಳಿದ್ದರು. ಈ ಯುವತಿಯನ್ನು ಶರಣಪ್ಪ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿದ್ದಾನೆ. ನಿನಗೆ ದೆವ್ವ ಹಿಡಿದಿದೆ. ಹೀಗಾಗಿ ನೀರು ಹಾಕಬೇಕು ಎಂದು ಹೇಳಿ ಬಟ್ಟೆ ಬಿಚ್ಚಿಸಿದ್ದಾರೆ. ಯುವತಿ ನಿರಾಕರಿಸಿದ್ದಾಳೆ. 

ಆಗ ಯುವತಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾರೆ. ಯುವತಿಯ ಮನೆಯ ಹತ್ತಿರ ಹೋಗಿ ತನ್ನ ಮೊಬೈಲ್ ನಲ್ಲಿದ್ದ ಯುವತಿಯ ನಗ್ನ ದೇಹದ ಫೋಟೋ ತೋರಿಸಿದ್ದಾನೆ. ನಾನು ಹೇಳಿದ ಹಾಗೆ ಕೇಳದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ.

ಆ ನಂತರ ಯುವತಿಯನ್ನು ಪಾವಗಡ ತಾಲೂಕಿನ ಗುಡ್ಡಕ್ಕೆ ಕರೆದುಕೊಂಡು ಹೋಗಿ ಬೆದರಿಸಿ ಮದುವೆಯಾಗಿದ್ದಾನೆ. ನಾನು ಈಗ ನಿನ್ನ ಮದುವೆಯಾಗಿದ್ದೇನೆ. ನೀನು, ನಾನು ಹೇಳಿದಂತೆ ಕೇಳಬೇಕು. ಇಲ್ಲವಾದರೆ, ನಿನ್ನ ಅಪ್ಪ , ಅಮ್ಮನನ್ನು ಮಾಟ, ಮಂತ್ರ ಮಾಡಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ರಮ್ಯ ನೋಟಕ್ಕೆ ರಾಜ್ಯಪಾಲರು ಫಿದಾ..!

ಉತ್ತರಪ್ರಭಆಲಮಟ್ಟಿ: (ವಿಜಯಪುರ ಜಿಲ್ಲೆ) ಮೊಟ್ಟಮೊದಲ ಬಾರಿಗೆ ಬಯಲುನಾಡಿನ ಪ್ರಾಕೃತಿಕ ತಾಣದಲ್ಲಿ ರಾಜ್ಯದ ರಾಜ್ಯಪಾಲರ ದಿವ್ಯ ದರ್ಶನ…

ರಾಜ್ಯದಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೋಂಕು: ಇಂದು 4120 ಪಾಸಿಟಿವ್ , ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 4120 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ…

ಸರ್ಕಾರ ಲಿಂ.ತೋಂಟದ ಶ್ರೀಗಳ ಹೆಸರಲ್ಲಿ ಭಾವೈಕ್ಯತೆ ಭವನ ನಿರ್ಮಿಸಲಿ: ಮಲ್ಲಿಕಾರ್ಜುನ ಐಲಿ ಒತ್ತಾಯ

ರಾಜ್ಯ ಸರ್ಕಾರ ಪೂಜ್ಯ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೆಸರಿನಿಂದ ಶ್ರೀಗಳ ಜನ್ಮದಿನವಾದ ಫೆ.21 ಈ ದಿನವನ್ನು ಭಾವೈಕ್ಯತೆ ದಿನವೆಂದು ಆಚರಿಸಬೇಕು. ಹಾಗೂ ಪ್ರತಿ ವರ್ಷ ಶ್ರೀಗಳ ಹೆಸರಿನಲ್ಲಿ ಭಾವೈಕ್ಯತೆ ಪ್ರಶಸ್ತಿ ನೀಡಬೇಕು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಒತ್ತಾಯಸಿದ್ದಾರೆ.