ಚಿತ್ರದುರ್ಗ : ರಾಜ್ಯ ಸೇರಿದಂತೆ ದೇಶದಲ್ಲಿನ ಇನ್ನೂ ಹಲವು ಗ್ರಾಮಗಳು ಅಭಿವೃದ್ಧಿಯಿಂದ ಹಿಂದೆ ಉಳಿದಿವೆ. ಕೆಲವು ಗ್ರಾಮಗಳಲ್ಲಿನ ಪರಿಸ್ಥಿತಿಗಳಂತೂ ಹೇಳತೀರದಾಗಿದೆ.

ಜಿಲ್ಲೆಯಲ್ಲಿನ ಬಹುತೇಕ ಗ್ರಾಮಗಳ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ. ಹಿರಿಯೂರು ತಾಲೂಕಿನ ಶೇಷಪ್ಪನಹಳ್ಳಿ ಕೂಡ ಇದೇ ಸಾಲಿಗೆ ಬಂದು ನಿಂತಿದೆ. ಮೂಲಭೂತ ಸೌಲಭ್ಯಗಳನ್ನು ದೊರಕಿಸುವಂತೆ ಸ್ಥಳೀಯ ಶಾಸಕರಿಗೆ, ಗ್ರಾಪಂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ಕ್ಯಾರೇ ಎನ್ನುತ್ತಿಲ್ಲ.

ಹಾಳಾದ ಗ್ರಾಮದ ವ್ಯವಸ್ಥೆ ಕಂಡು ಬೇಸತ್ತ ಗ್ರಾಮದ ಕಿರಣ್ ಎಸ್.ಪಿ ಎಂಬ ಯುವಕ, ಪ್ರಧಾನಿ ಕಚೇರಿಗೆ ಆನ್ ಲೈನ್ ಮೂಲಕ ದೂರು ನೀಡಿದ್ದರು. ಯುವಕನ ದೂರಿಗೆ ಸ್ಪಂದನೆ ಕೂಡ ದೊರೆಕಿತ್ತು. ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸೂಚನೆ ನೀಡಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಮಾತ್ರ ಇನ್ನೂ ತಲೆ ದೋರುತ್ತಿದೆ.

ಪ್ರಧಾನಿ ಕಾರ್ಯಾಲಯದಿಂದ ಕ್ರಮಕೈಗೊಳ್ಳಲು ಸೂಚನೆ ನೀಡಿದರೂ, ಸ್ಥಳೀಯ ಅಧಿಕಾರಿಗಳು ಕಿಮ್ಮತ್ತು ಕೊಡುತ್ತಿಲ್ಲ ಎಂದು ಪ್ರಧಾನಮಂತ್ರಿಗಳ ಕಚೇರಿ ಆದೇಶ ಲಗತ್ತಿಸಿ ಯುವಕ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗಡಿಯಲ್ಲಿ ತೊಡೆ ತಟ್ಟಿ ನಿಂತಿದೆಯೇ ಚೀನಾ? ಬಗ್ಗು ಬಡಿಯದೆ ಬಿಡಲ್ಲ ಎನ್ನುತ್ತಿದ್ದಾರೆ ಭಾರತೀಯ ಸೈನಿಕರು!

ಬೀಜಿಂಗ್ : ಗಡಿಯಲ್ಲಿ ಉದ್ಧಟತನ ಮೆರೆಯುತ್ತಿರುವ ಚೀನಾ, ಯುದ್ಧದ ಉನ್ಮಾದದಲ್ಲಿ ಇದೆಯೇ ಎಂಬ ಸಂಶಯ ಮೂಡುತ್ತಿದೆ.

ಇಡಿ ಅಧಿಕಾರಿಗಳನ್ನು ಬಿಟ್ಟಿಲ್ಲ ಕೊರೊನಾ!

ನವದೆಹಲಿ: ದೇಶದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಜಾರಿ ನಿರ್ದೇಶನಾಲಯ(ಇಡಿ)ದ ಆರು ಜನ…

ತನ್ನ ದಾಖಲೆ ತಾನೇ ಮುರಿದು ಆತಂಕ ಸೃಷ್ಟಿಸುತ್ತಿರುವ ಮಹಾಮಾರಿ

ಬೆಂಗಳೂರು : ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ದಾಖಲೆಯನ್ನೇ ಮುರಿದು ಸಾಗುತ್ತಿದೆ. ನಿನ್ನೆ ಒಂದೇ…

ಚಂಡಮಾರುತ ಎಲ್ಲಿ ಅಪ್ಪಳಿಸಲಿದೆ ಅಂತ ಹೇಳಿದೆ ಹವಾಮಾನ ಇಲಾಖೆ..!

ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ನಿಸರ್ಗ ಚಂಡಮಾರುತ ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಬಾಧಿಸಲಿದೆ. ಈಗಾಗಲೇ ಗುಜಾರಾತ್ ಮತ್ತು ಮಹಾರಾಷ್ಟ್ರದೆಡೆಗೆ ಚಂಡಮಾರುತ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.