ಲಕ್ನೋ : ತುಂಡು ತುಂಡಾದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವವೊಂದು ಪತ್ತೆಯಾಗಿರುವ ಘಟನೆ ನಡೆದಿದೆ.

ಮಹಿಳೆಯ ಶವ 17 ತುಣುಕುಗಳಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಈ ಶವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಹೀಗಾಗಿ ಆತಂಕದಲ್ಲಿ ಜನ ಇದ್ದಾರೆ. ಉತ್ತರ ಪ್ರದೇಶ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಮೀರತ್ ನಗರದ ಲಿಸಾಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ಮೃತ ಶವವನ್ನ ತುಂಡು ತುಂಡಾಗಿ ಕತ್ತರಿಸಿ, ಚಾಪೆಯಲ್ಲಿ ಸುತ್ತಿ ಡಂಪಿಂಗ್ ಯಾರ್ಡ್ ನಲ್ಲಿ ಎಸೆದಿದ್ದಾನೆ. ಅಲ್ಲದೇ, ಮಹಿಳೆಯ ಗುರುತು ಪತ್ತೆಯಾಗಬಾರದು ಎಂಬ ನಿಟ್ಟಿನಲ್ಲಿ ಆಕೆಯ ರುಂಡವನ್ನು ಜೊತೆಯಲ್ಲಿಯೇ ತೆಗೆದುಕೊಂಡು ಪರಾರಿಯಾಗಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು, ದೌಡಾಯಿಸಿದ್ದಾರೆ. ಡಂಪಿಂಗ್ ಯಾರ್ಡ್ ನಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಮೃತದೇಹದ ಭಾಗಗಳನ್ನು ಸಂಗ್ರಹಿಸಿ ಪೋಸ್ಟ್ ಮಾರ್ಟ್ಂನ ಗೆ ರವಾನಿಸಿದ್ದಾರೆ. ಮಹಿಳೆಗೆ ಪರಿಚಯ ಇರುವ ವ್ಯಕ್ತಿಯಿಂದಲೇ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You May Also Like

4 ಮಕ್ಕಳ ತಾಯಿಯೊಂದಿಗೆ ಲವ್ ನಲ್ಲಿ ಬಿದ್ದ ವೈದ್ಯ, ಮುಂದೇನಾಯ್ತು?

ಲಕ್ನೋ : ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ನಾಲ್ಕು ಮಕ್ಕಳ ತಾಯಿಯೊಂದಿಗೆ ಲವ್ ನಲ್ಲಿ ಬಿದ್ದ ವೈದ್ಯ, ಅವಳನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಅಮೆರಿಕದಲ್ಲಿ ಮಹಾಮಾರಿಯ ಅಟ್ಟಹಾಸ ತಗ್ಗಿತೇ?

ಅಮೆರಿಕದಲ್ಲಿ ಮಹಾಮಾರಿಯ ಅಟ್ಟಹಾಸ ತಗ್ಗಿತೇ? ವಾಷಿಂಗ್ಟನ್ : ಮಹಾಮಾರಿ ವೈರಸ್ ನಿಂದ ತತ್ತರಿಸಿ ಹೋಗಿದ್ದ ಅಮೆರಿಕದಲ್ಲಿ…

ಉಗ್ರರಿಂದ ಬಿಜೆಪಿ ನಾಯಕ ವಾಸೀಂ ಹತ್ಯೆ: ತಂದೆ, ಸಹೋದರನೂ ಬಲಿ

ಶ್ರೀನಗರ: ಬುಧವಾರ ರಾತ್ರಿ 9ಕ್ಕೆ ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಶೇಖ್ ವಾಸೀಂ ಬಾರಿ, ಆತನ ತಂದೆ…

ಒಬ್ಬನ ಕೊಲ್ಲಲು ಇಲ್ಲಿ ಲಾಂಗ್ ಹಿಡಿದು ಬಂದವರು ಎಷ್ಟು ಜನ ಗೊತ್ತಾ?

ಮುಂಬಯಿ : ಒಬ್ಬನನ್ನು ಕೊಲ್ಲಲು ನೂರು ಜನ ಲಾಂಗ್ ಹಿಡಿದುಕೊಂಡು ಬಂದಿದ್ದ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.