ಲಕ್ನೋ: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ನಾಲ್ಕು ಮಕ್ಕಳ ತಾಯಿಯೊಂದಿಗೆ ಲವ್ ನಲ್ಲಿ ಬಿದ್ದ ವೈದ್ಯ, ಅವಳನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ. 

ಇಸ್ಮಾಯಿಲ್(33) ಬಂಧಿತ ವೈದ್ಯ. ಬಂಧಿತ ವ್ಯಕ್ತಿ ಇತ್ತೀಚೆಗಷ್ಟೇ 4 ಮಕ್ಕಳಿರುವ ತಾಯಿಯನ್ನು ಕೊಲೆ ಮಾಡಿದ್ದ. ಕೊಲೆಯಾದ ಮಹಿಳೆ ಸೆ. 7ರಂದು ನಾಪತ್ತೆಯಾಗಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಕುರಿತು ಪೊಲೀಸರು ಹುಡುಕಾಟ ನಡೆಸಿದ್ದರು. ಬರೋಬ್ಬರಿ ಒಂದು ತಿಂಗಳ ನಂತರವೂ ಮಹಿಳೆ ಪತ್ತೆಯಾಗಿರಲಿಲ್ಲ. ಅ. 15ರಂದು ಕುರುಕ್ಷೇತ್ರದಲ್ಲಿ ಒಂದು ಅಪರಿಚಿತ ಶವ ಪತ್ತೆಯಾಗಿತ್ತು. ಈ ಶವದ ಮುಖ ಮತ್ತು ನಾಪತ್ತೆಯಾಗಿದ್ದ ಮಹಿಳೆಯ ಫೋಟೋ ಹೋಲಿಕೆಯಾಗುತ್ತದೆ ಎಂದು ಹರಿಯಾಣ ಪೊಲೀಸರು, ಗಾಜಿಯಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಶವ ಪತ್ತೆಯಾದ ಕೂಡಲೇ ಮಹಿಳೆಯ ಫೋನ್ ಕರೆ ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ವೈದ್ಯ ಇಸ್ಮಾಯಿಲ್ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ವೈದ್ಯ ಹಾಗೂ ಮಹಿಳೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮಹಿಳೆ ತನ್ನೊಂದಿಗೆ ಜೀವನ ಸಾಗಿಸುವಂತೆ ಪೀಡಿಸಿದ್ದಾಳೆ. ಈ ಕುರಿತು ಆಗಾಗ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಈ ಕುರಿತು ಜಗಳ ಜೋರಾಗುತ್ತಿದ್ದಂತೆ ಅಸ್ತಮಾ ರೋಗಿಯಾಗಿದ್ದ ಮಹಿಳೆಗೆ ಉಸಿರಾಟ ತೊಂದರೆ ಶುರುವಾಗಿದೆ. ಹೀಗಾಗಿ ಇಸ್ಮಾಯಿಲ್ ಇಂಜೆಕ್ಷನ್ ಮೂಲಕ ಔಷಧಿ ನೀಡಿದ್ದು, ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಈ ವೇಳೆ ಟವಲ್ ನಿಂದ ಮಹಿಳೆಯನ್ನು ಉಸಿರುಗಟ್ಟಿಸಿ ಕಾರಿನಲ್ಲಿಯೇ ಇಸ್ಮಾಯಿಲ್ ಕೊಲೆಗೈದಿದ್ದಾನೆ.

Leave a Reply

Your email address will not be published. Required fields are marked *

You May Also Like

ಅಂದು ವಿಶ್ವ ಕಪ್ ತಂದು ಕೊಟ್ಟ ತಂಡದಲ್ಲಿ ಕ್ರಿಕೆಟಿಗ ಯಶ್ ಪಾಲ್ ಇನ್ನಿಲ್ಲ!

ನವದೆಹಲಿ: 1983 ರಲ್ಲಿ ಭಾರತ ತಂಡ ವಿಶ್ವ ಕಪ್ ತನ್ನ ಮುಡಿಗೇರಿಸಿಕೊಂಡಿತ್ತು. ಇದು ಭಾರತದ ಕ್ರೀಕೆಟ್ ಇತಿಹಾಸದಲ್ಲಿ ಮಹತ್ವದ ವರ್ಷವಾಗಿತ್ತು. ಕ್ರೀಕೆಟ್ ಇತಿಹಾಸದಲ್ಲಿ ಭಾರತಕ್ಕೊಂದು ಮೈಲುಗಲ್ಲಾದ 1983 ರ ವಿಶ್ವಕಪ್ ಪಡೆದ ತಂಡದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ. ಹೌದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಕೋರಾನಾ: ಭಾರತೀಯ ಔಷಧಿಗೆ ತಡೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ!

ಜಿನೆವಾ: ಕೊರೊನಾ ವೈರಸ್ ಗೆ ಪರಿಣಾಮಕಾರಿ ಮದ್ದು ಎನ್ನಲಾಗುತ್ತಿದ್ದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧದ ವೈದ್ಯಕೀಯ ಪ್ರಯೋಗಕ್ಕೆ ವಿಶ್ವ…

ದೇಶದಲ್ಲಿ 73 ಲಕ್ಷದ ಗಡಿ ದಾಟಿದ ಮಹಾಮಾರಿ!

ನವದೆಹಲಿ : ದೇಶದಲ್ಲಿ ಮಹಾಮಾರಿಯ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 63,371 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 895 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ.

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್

ಒಂದೇ ದಿನಕ್ಕೆ ರಾಜ್ಯದಲ್ಲಿ 50 ಪಾಸಿಟಿವ್ ಬೆಂಗಳೂರು: ರಾಜ್ಯದಲ್ಲಿ ಒಂದೇ ದಿನದಲ್ಲಿ 50 ಪಾಸಿಟಿವ್ ಪ್ರಕರಣಗಳು…