ಲಕ್ನೋ : ವ್ಯಕ್ತಿಯೊಬ್ಬ ಶಿವನಿಗೆ ತನ್ನೇ ತಲೆಯನ್ನೇ ಅರ್ಪಿಸಿರುವ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಉತ್ತರಪ್ರದೇಶದ ಕುರಾರ ಪ್ರದೇಶದಲ್ಲಿ ನಡೆದಿದೆ. 49 ವರ್ಷದ ರುಕ್ಮಾನಿ ಮಿಶ್ರಾ ಎಂಬ ವ್ಯಕ್ತಿಯೇ ಶಿವನಿಗೆ ತನ್ನ ತಲೆಯನ್ನು ಅರ್ಪಿಸಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಶಿವನಿಗೆ ತನ್ನನ್ನು ತಾನೇ ಅರ್ಪಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಈ ವ್ಯಕ್ತಿ ಶನಿವಾರ ರಾತ್ರಿ ಕೋಟೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ತನ್ನ ಕುತ್ತಿಗೆಯನ್ನು ಚೂರಿಯಿಂದ ಕೊಯ್ದುಕೊಂಡಿದ್ದಾರೆ. ಈ ವೇಳೆ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಈ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಎಸ್ ಐಟಿ ವಿಚಾರಣೆಯಲ್ಲಿ ಪ್ರಧಾನಿ ಮೋದಿ ಹೇಗೆ ವರ್ತಿಸಿದ್ದರು?

ನವದೆಹಲಿ : 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ಅವರು ಎಸ್ ಐಟಿ ವಿಚಾರಣೆ ಎದುರಿಸಿದ್ದರು. ಈ ಕುರಿತು ಕೇಳಿದ್ದ ಬರೋಬ್ಬರಿ 100 ಪ್ರಶ್ನೆಗಳಿಗೆ 9 ಗಂಟೆಗಳ ಕಾಲ ಉತ್ತರಿಸಿದ್ದಾರೆ. ಈ ಅವಧಿಯಲ್ಲಿ ಟೀ ಕೂಡ ಅವರು ಸೇವಿಸಿರಲಿಲ್ಲ ಎಂದು ತನಿಖೆಯ ತಂಡದಲ್ಲಿದ್ದ ಆರ್.ಕೆ. ರಾಘವನ್ ಹೇಳಿದ್ದಾರೆ.

ಕೊರೋನಾ ಸೋಂಕಿನಿಂದ ಗುಣ ಹೊಂದಿದ 12 ದಿನದ ಮಗುವಿನ ಹೆಸರೇನು ಗೊತ್ತಾ?

ಒಂಭತ್ತು ದಿನದ ಮಗುವಿನಲ್ಲಿ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಇದೀಗ 12 ದಿನದ ಈ ಮಗು ಕೊರೋನಾ ಸೋಂಕಿನಿಂದ ಗುಣ ಹೊಂದಿದ್ದು ಮಗುವಿಗೆ ಇಂದು ಹೆಸರಿಡಲಾಗಿದೆ.

ಕೊರೋನಾ ಸೋಂಕಿತ ಮಹಿಳೆ ಸಾವು

ಕೊರೋನಾ ಸೋಂಕಿತ ಮಹಿಳೆ ಸಾವುವಿಜಯಪುರ : ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ ಘಟನೆ ಇಜಯಪುರ ಜಿಲ್ಲೆಯಲ್ಲಿ…

ಚೀನಾದಲ್ಲಿ ಮತ್ತೆ ಶುರುವಾಗಿದೆ ಕೊರೊನಾ ಆತಂಕ!

ಕೊರೊನಾ ಹುಟ್ಟಿಗೆ ಕಾರಣವಾಗಿರುವ ಚೀನಾದಲ್ಲಿ ಮತ್ತೊಮ್ಮೆ ಮಹಾಮಾರಿ ತಾಂಡವಾಡುತ್ತಿದೆ.