ಅಬುಧಾಬಿ: ಭಾನುವಾರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಚೇತರಿಕೆ ನೀಡುವುದರ ಮೂಲಕ ಭರ್ಜರಿ ಆಟ ಪ್ರದರ್ಶಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಆರಂಭದಲ್ಲಿ ಆಘಾತ ಅನುಭವಿಸಿತ್ತು. ಹಾರ್ದಿಕ್ ಪಾಂಡ್ಯ ಅವರ ಅಬ್ಬರದ ಬ್ಯಾಟಿಂಗ್‍ ನಿಂದ ಮುಂಬಯಿ 195 ರನ್ ಗಳಿಸಿದೆ. 

ಹಾರ್ದಿಕ್ ಪಾಂಡ್ಯ ಅವರು ಕೇವಲ 21 ಬೌಲ್ ಗೆ ಏಳು ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ 60 ರನ್ ಸಿಡಿಸಿದ್ದಾರೆ. ಮೊದಲು ತಾಳ್ಮೆಯಿಂದ ಆಟವಾಡಿದ್ದ ಪಾಂಡ್ಯ ಆ ನಂತರ ಸಿಡಿದೆದ್ದಿದ್ದಾರೆ. ಪಾಂಡೆ ಮೊದಲ 9 ಬೌಲ್ ನಲ್ಲಿ ಕೇವಲ ಎಂಟು ರನ್ ಸಿಡಿಸಿದ್ದರು. ಆ ನಂತರ ಅವರ ಬ್ಯಾಟಿಂಗ್ ಮುಂದೆ ರಾಜಸ್ಥಾನ್ ಪರದಾಡಿತು. 

ಪಾಂಡ್ಯ ಕೊನೆಯ 12 ಬೌಲ್ ನಲ್ಲಿ ಭರ್ಜರಿ 52 ರನ್ ಸಿಡಿಸಿದರು. ಕೊನೆಯ ನಾಲ್ಕು ಓವರ್ ನಲ್ಲಿ ಭರ್ಜರಿಯಾಗಿ ಆಡಿದ ಪಾಂಡ್ಯ ತಂಡದ ಮೊತ್ತ ಏರಿಸಿದರು. 17ನೇ ಓವರ್ ನಲ್ಲಿ 17 ರನ್, 18ನೇ ಓವರ್ ನಲ್ಲಿ 27 ರನ್, 19ನೇ ಓವರ್ ಕೇವಲ ಮೂರು ರನ್, 20ನೇ ಓವರ್ ನಲ್ಲಿ 27 ರನ್ ಸಿಡಿಸಿದ್ದಾರೆ. ಕೊನೆಯ ನಾಲ್ಕು ಓವರ್ ನ 24 ಬೌಲ್ ನಲ್ಲಿ 74 ರನ್ ಸಿಡಿಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ಡ್ಯಾರೆನ್ ಜನಾಂಗೀಯ ನಿಂದನೆಗೆ ಒಳಗಾಗಿದ್ದು ಸತ್ಯವೇ?

ಹೈದರಾಬಾದ್:  ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೆ ಎಂದು ವೆಸ್ಟ್…

ಧೋನಿ ವಿರುದ್ಧ ಮೂರು ಸಿಕ್ಸರ್ ಸಿಡಿಸುವ ಮೂಲಕ ಅಕ್ಷರ್ ಸೇಡು ತೀರಿಸಿಕೊಂಡರೆ?

ಶಾರ್ಜಾ : ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಆಟಗಾರ ಅಕ್ಷರ್ ಪಟೇಲ್ ಕೊನೆಯ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಧೋನಿ ವಿರುದ್ಧದ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ತಂಡಕ್ಕೂ ಜಯ ತಂದು ಕೊಟ್ಟಿದ್ದಾರೆ.

ಹೆಚ್ಚು ಸಂಭಾವನೆ ಪಡೆಯುವ 100 ಕ್ರಿಕೇಟಿಗರಲ್ಲಿ ಭಾರತೀಯ ಕ್ರೀಕೆಟಿಗ ಯಾರು?

ದೆಹಲಿ: 2020 ರ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳಲ್ಲಿ ಫೋರ್ಬ್ಸ್ ನ ಏಕೈಕ…

ಕೋಲ್ಕತ್ತಾ, ಬೆಂಗಳೂರು ತಂಡಗಳ ಹಿಂದಿನ ಇತಿಹಾಸ ಹೇಗಿದೆ?

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಲೀಗ್ ನಲ್ಲಿ ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಬ್ಯಾಟ್ಸಮನ್ ಗಳ ನೆಚ್ಚಿನ ಮೈದಾನದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.