ನವದೆಹಲಿ : ದೇಶದಲ್ಲಿ  ಕೊರೊನಾ ಅಟ್ಟಹಾಸ ಪ್ರಾರಂಭವಾದ ಸಂದರ್ಭದಲ್ಲಿ  ಹಲವು ರಾಜ್ಯಗಳ ಅದರ ಹೊಡೆತಕ್ಕೆ ಸಿಲುಕಿ ನಲುಗಿದ್ದವು. ಆದರೆ, ಇಂದು ಅಂತಹ ರಾಜ್ಯಗಳಲ್ಲಿ ಕೂಡ ಚೇತರಿಕೆ ಕಂಡು ಬರುತ್ತಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದ ಒಟ್ಟಾರೆ ಗುಣಮುಖರಾದ ಸೋಂಕಿತರ ಪ್ರಮಾಣದಲ್ಲಿ ಶೇ. 81ರಷ್ಟು ಪ್ರಕರಣಗಳು ಕೇವಲ ಈ 10 ರಾಜ್ಯಗಳಿಂದಲೇ ವರದಿಯಾಗಿದ್ದವು. ದೇಶದಲ್ಲಿ ನಿತ್ಯ ಸುಮಾರು 74 ಸಾವಿರ ಜನ ಸೋಂಕಿತರು ಗುಣಮುಖರಾಗುತ್ತಿದ್ದು, ಈ ಪೈಕಿ  ಶೇ. 81ರಷ್ಟು ಗುಣಮುಖ ಪ್ರಕರಣಗಳು 10 ರಾಜ್ಯಗಳಿಂದ ವರದಿಯಾಗುತ್ತಿವೆ. ಅಷ್ಟೆ ಅಲ್ಲದೇ, ಈ 10 ರಾಜ್ಯಗಳಲ್ಲಿಯೇ ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 48ರಷ್ಟು ಇದೆ. 

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು, ಇಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 16,177 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 13,217 ಜನ ಗುಣಮುಖರಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೇರಳದಲ್ಲಿ 7,593 ಜನ ಸೋಂಕಿತರು ಗುಣಮುಖರಾಗಿದ್ದು, ತಮಿಳುನಾಡಿನಲ್ಲಿ 4,314, ಆಂಧ್ರ ಪ್ರದೇಶದಲ್ಲಿ 3,723, ಪಶ್ಚಿಮ ಬಂಗಾಳದಲ್ಲಿ 3, 608, ಛತ್ತೀಸ್ ಘಡದಲ್ಲಿ 2,996, ರಾಜಧಾನಿ ದೆಹಲಿಯಲ್ಲಿ 2,727, ರಾಜಸ್ಥಾನದಲ್ಲಿ 2,654 ಮತ್ತು ಉತ್ತರ  ಪ್ರದೇಶದಲ್ಲಿ 2,581 ಜನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

Leave a Reply

Your email address will not be published. Required fields are marked *

You May Also Like

ಕೋವಿಡ್ ಬಲಿ: ಹೈದರಾಬಾದ್ ನಲ್ಲಿ ವೈದ್ಯರ ಮೇಲೆ ದಾಳಿ

ಹೈದರಾಬಾದ್: ಹೈದರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಬಲಿಯಾದ ನಂತರ ವೈದ್ಯರ…

ದಕ್ಷಿಣ ಆಫ್ರಿಕಾ ಕ್ರಿಕೇಟ್ ಆಟಗಾರನಿಗೆ ಕೊರೋನಾ ಪಾಸಿಟಿವ್..!

ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಈ ಮೂಲಕ ಕೊರೊನಾ ಪಾಸಿಟಿವ್ ಬಂದ ಮೂರನೇ ಕ್ರಿಕೆಟ್ ಆಟಗಾರ ಸೋಲೋ ಆಗಿದ್ದಾರೆ.

ಮಹಾರಾಷ್ಟ್ರದಲ್ಲಿ ಕರ್ಫ್ಯೂ ಜಾರಿ

ಮಹಾರಾಷ್ಟ್ರದಲ್ಲಿ ಕೋವಿಡ್ ಎರಡನೇ ಅಲೆ ಆರಂಭವಾಗಿದ್ದು, ಇದೀಗ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

ರಾಜ್ಯಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾರು ಆಯ್ಕೆ..?

ಆಂಧ್ರವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ,…