ಮಸ್ಕಿ: ಸಮೀಪ ನೀಲಾನಗರದ ದುರ್ಗಾದೇವಿ ಜಾತ್ರೆಯನ್ನು ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಬಂಜಾರ ಪೀಠಾಧಿಪತಿ ಕುಮಾರ ಮಹಾರಾಜ ತಿಳಿಸಿದರು.

ದಸರಾ ಹಬ್ಬದ ನಿಮಿತ್ಯ ಪ್ರತಿ ವರ್ಷ ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತಿತ್ತು, ಈ ಭಾರಿ ಕೊರೊನಾ ಹಿನ್ನೆಲೆಯಲ್ಲಿ ಅ.25ರಂದು ದೇವಿಯ ಮೂರ್ತಿಗೆ ಅಲಂಕರಿಸಿ ಪೂಜೆ ಪುರಸ್ಕಾರ ಅಭಿಷೇಕ ಮಾಡಲಾಗುವುದು.

ಯಾವುದೇ ವೇದಿಕೆ ಕಾರ್ಯಕ್ರಮ, ‌ಸಾಮಾಜಿಕ ನಾಟಕ ಇರುವುದಿಲ್ಲ. ಅಂದಿನ ದಿನ ದೇವಿಯ ದರ್ಶನ ಪಡೆಯಲು ಬರುವ ಭಕ್ತರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಜಾತ್ರೆ ಆಚರಣೆ ಮಾಡಬೇಕೆಂದು ಮನವಿ ಮಾಡಿದರು.

ರಾಯಚೂರು, ಯಾದಗಿರಿ ಜಿಲ್ಲೆಯಿಂದ ಬರುವ ಭಕ್ತರು ಜಾತ್ರೆ ಇಲ್ಲ ಎಂದು ಗೊಂದಲಕ್ಕೆ ಒಳಗಾಗಬಾರದು.‌ ದೇವಿಯ ಜಾತ್ರೆ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಮುಂಡರಗಿ ಅರಣ್ಯಾಧಿಕಾರಿ ದೌರ್ಜನ್ಯ ಇಬ್ಬರು ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನ ಸ್ಥಿತಿ ಗಂಭೀರ: ಜಿಲ್ಲಾಧಿಕಾರಿಗೆ ಹಿಡಿ ಶಾಪ ಹಾಕುತ್ತಿರುವ ರೈತರು

ಗದಗ: ಮುಂಡರಗಿ ತಾಲೂಕಿನ ಕೆಲೂರ ಗ್ರಾಮದ ಬಗರಹುಕುಂ ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ…

ಭಗೀರಥ ಸಂಘ: ನೂತನ ಪದಾಧಿಕಾರಿಗಳ ಆಯ್ಕೆ

ಭಗೀರಥ ಸಂಘದ ತಾಲೂಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಮಾಜದ ಮುಖಂಡರು ಸಭೆ ಸೇರಿ ಪದಾಧಿಕಾರಿಗಳನ್ನು ನೇಮಕ ಮಾಡಿದರು.

ಯೋಧನ ಸಮಯ ಪ್ರಜ್ಞೆಯಿಂದ ಕರುಳು ಬಳ್ಳಿ ಸೇರಿದ ಅಜ್ಜಿ..!

ಅರ್ಥವಾಗದ ಊರು, ತಿಳಿದ ಭಾಷೆಯ ಮದ್ಯೆ ಏಕಾಂಗಿಯಾದ ಅಜ್ಜಿ ತನ್ನವರಿಗಾಗಿ ಅಳುತ್ತಿದ್ದಳು. ಅಜ್ಜಿಯ ಆರ್ಥನಾದ ಅಲ್ಲಿರುವ ಯಾರ ಗಮನಕ್ಕೂ ಬರಲೇ ಇಲ್ಲ. ಕಣ್ಣೀರಿಡುತ್ತಿದ್ದ ಇಳಕಲ್ ಸೀರೆಯುಟ್ಟ ಹಿರಿಯ ಜೀವ ಕರುನಾಡಿನವಳುವೆಂದರಿತಯೋಧ ಅಜ್ಜಿಯ ಆರ್ಥನಾದಕ್ಕೆ ಧ್ವನಿಯಾಗಿದ್ದಾರೆ. ತನ್ನವರನ್ನು ಕಳೆದುಕೊಂಡ ಅಜ್ಜಿಗೆ ತನ್ನ ಬಂಧು ಬಳಗದೊಂದಿಗೆ ತಳುಕು ಹಾಕುವ ಮೂಲಕ ಜಿಲ್ಲೆಯ ಮುಂಡರಗಿ ಸೈನಿಕ ಜನರ ಮೆಚ್ಚುಗೆಯ ಜೊತೆಗೆ ಸೈ ಎನಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಇಂದು ಕೂಡ ನಾಲ್ಕು ಸಾವಿರ ಗಡಿ ದಾಟಿದ ಸೋಂಕು!

ಬೆಂಗಳೂರು : ರಾಜ್ಯದಲ್ಲಿ ಇಂದು 4,439 ಜನರು ಸೋಂಕಿಗೆ ಒಳಗಾಗಿದ್ದಾರೆ. ಅಲ್ಲದೇ, ಇಂದು ಆಸ್ಪತ್ರೆಯಿಂದ 10,106 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಲ್ಲದೇ, ಇಂದು 32 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.