ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಅವರ ಕಾಲೆಳೆಯುವ ಕಾರ್ಯವನ್ನು ನೆಟ್ಟಿಗರು ಮಾಡುತ್ತಿದ್ದಾರೆ.    

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೀನಾಯ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ, 20 ಓವರ್‌ ಗಳಲ್ಲಿ 9 ವಿಕೆಟ್ ಕಳೆದುಕೊಂಡು 114 ರನ್‌ ಗಳಿಸಿತ್ತು. ಆದರೆ, ಒಂದು ವಿಕೆಟ್ ಪಡೆಯುವಲ್ಲಿ ಕೂಡ ಚೆನ್ನೈ ವಿಫಲವಾಗಿತ್ತು. ಅಲ್ಲದೇ, ಭರ್ಜರಿ ಬ್ಯಾಟಿಂಗ್ ಮಾಡಿದ್ದ ಮುಂಬಯಿ ತಂಡ, ಇಶಾನ್‌ ಕಿಶಾನ್‌ (68) ಹಾಗೂ ಕ್ವಿಂಟನ್‌ ಡಿ ಕಾಕ್‌(46) ರನ್ ಗಳಿಗೆ ಭರ್ಜರಿಯಾಗಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಏರಿದೆ. 

ಹೀಗಾಗಿ ಧೋನಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿಯೇ ದೊಡ್ಡ ಸೋಲು ಅನುಭವಿಸಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ. 

ಆದರೆ, ಚೆನ್ನೈ ಫ್ರಾಂಚೈಸಿ ಫ್ಲೇ ಆಫ್‌ ಹಾದಿ ಸಂಪೂರ್ಣವಾಗಿ ಬಂದ್ ಆಗಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಜಯ ಗಳಿಸಿದೆ. 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಧೋನಿ ನಾಕೌಟ್‌ ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. 

ಮಾಡು ಇಲ್ಲವೆ ಮಡಿ ಪರಿಸ್ಥಿತಿಯಲ್ಲಿ ಆಡಿದ ಚೆನ್ನೈ ಸೂಪರ್‌ ಕಿಂಗ್ಸ್ ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರಂಭ ಪಡೆದಿದೆ. ದಾಖಲೆಯ ಗೆಲುವು ದಾಖಲಿಸಿರುವ ಮುಂಬಯಿ ತಂಡ, ಮೊದಲ ಸ್ಥಾನಕ್ಕ ಜಿಗಿಯಿತು. ಅಲ್ಲದೇ, 14 ಅಂಕಗಳನ್ನೇ ಪಡೆದಿರುವ ದೆಹಲಿ ಹಾಗೂ ಬೆಂಗಳೂರು ತಂಡ ಎರಡು ಹಾಗೂ ಮೂರನೇ ಸ್ಥಾನಕ್ಕೆ ಏರಿವೆ. 

Leave a Reply

Your email address will not be published. Required fields are marked *

You May Also Like

ನಾನು ಧೋನಿ ಪಂದ್ಯ ವೀಕ್ಷಿಸಲು ಯುಎಇಗೆ ಹೋಗಲು ಯೋಚಿಸುತ್ತಿದ್ದೇನೆ

2005ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಭಾರತೀಯ ಕ್ರಿಕೆಟ್ ನ ಮಾಜಿ ನಾಯಕ ಎಂ.ಎಸ್. ಧೋನಿ 123 ಎಸೆತಗಳಿಗೆ 148 ರನ್ ಬಾರಿಸಿದ್ದರು. ಇದು ಅವರ ಮೊದಲ ಏಕದಿನ ಶತಕವಾಗಿತ್ತು.

ಸೇಡು ತೀರಿಸಿಕೊಳ್ಳುವುದರ ಮೂಲಕ ಗೆಲುವಿನ ಲಯ ಕಂಡುಕೊಂಡ ಚೆನ್ನೈ!

ದುಬೈ : ಆರ್ ಸಿಬಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಅರಬರ ನೆಲದಲ್ಲಿ ಇಂಡಿಯನ್ ಐಪಿಎಲ್! ಜೂಜುಕೋರ ಬಿಸಿಸಿಐನ ಕೋವಿಡ್ ಗೇಮ್

ಇಂಡಿಯನ್ಪ್ರಿಮೀಯರ್ ಲೀಗ್ ಎಂಬುದು ಕೇವಲ ಆಟವಲ್ಲ, ಅದೊಂದುಬ್ಯುಸಿನೆಸ್ ಮತ್ತು ಕಪ್ಪು ಹಣ ಬಿಳಿಪಾಗಿಸುವ ದಂಧೆ.ಹೀಗಾಗಿ ಈ ಕೋರೊನಾ ಬಿಕ್ಕಟ್ಟಿನಲ್ಲೂ ಐಪಿಎಲ್ ನಡೆಸಲುಶತಾಯಗತಾಯ ಯತ್ನಗಳು ನಡೆದ

ಮೊದಲ 8 ಬೌಲ್ ಗೆ ತಾಳ್ಮೆ…ಆ ನಂತರ 9 ಬೌಲ್ ಗೆರೆ ದಾಟಿ ಹೋದವು!

ಅಬುಧಾಬಿ : ಭಾನುವಾರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಚೇತರಿಕೆ ನೀಡುವುದರ ಮೂಲಕ ಭರ್ಜರಿ ಆಟ ಪ್ರದರ್ಶಿಸಿದ್ದಾರೆ.