ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಹಳ್ಳಿ ಹಕ್ಕಿ ಸಲಹೆ ನೀಡಿದೆ. ಅವರಿಗೆ ಪಕ್ಷದಲ್ಲಿ ಮನ್ನಣೆ ಸಿಗುತ್ತಿಲ್ಲ. ಅವರು ಹೊಗಳು ಭಟ್ಟರಿಂದ ದೂರ ಇರಬೇಕು ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.

ರಾಜ ಮಹಾರಾಜರು ಸೇರಿದಂತೆ ದೊಡ್ಡ ಮಹನೀಯಕರು ಕೂಡ ಹೊಗಳು ಭಟ್ಟರನ್ನು ನಂಬಿ ಅವನತಿಯ ಹಾದಿ ಹಿಡಿದಿದ್ದಾರೆ. ನಾನು ಸಿದ್ದರಾಮಯ್ಯ ಅವರಲ್ಲಿ ಈಗಲೂ ಮನವಿ ಮಾಡುತ್ತೇನೆ. ಅವರು ಹೊಗಳು ಭಟ್ಟರಿಂದ ದೂರ ಇರಬೇಕು ಎಂದು ಹೇಳಿದ್ದಾರೆ.

ಳಿನ್ ಕುಮಾರ್ ಕಟೀಲ್‍ ಅವರನ್ನು  ಕಾಡು ಮನುಷ್ಯ ಎಂಬ ಸಿದ್ದರಾಮಯ್ಯ ಅವರ  ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕಾಡು ಮನುಷ್ಯ ಅಂದ್ರೆ ಅರಣ್ಯ ಸಂರಕ್ಷಕರಿಗೆ ಮಾಡುವ ಅಪಮಾನವಾಗಿದೆ. ಈಗ ಎಷ್ಟೋ ಜನ ನಾವು ಕಾಡು ಜನ ಅಂತ ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದ್ದಾರೆ. ಪಕ್ಷದ ರಾಜ್ಯಧ್ಯಾಕ್ಷನನ್ನ ಕಾಡುಮನುಷ್ಯ ಎನ್ನುವುದು ಸರಿಯೇ  ಎಂದು ಪ್ರಶ್ನಿಸಿದ್ದಾರೆ. 

ನೀವು ನಮ್ಮ ಮೈಸೂರಿನವರು ಭಾಷೆಯ ಮೇಲೆ ಹಿಡಿತ ನಿಮಗೆ ಇರಲಿ. ರಾಜಕೀಯ ಮುತ್ಸುದ್ದಿಯಾಗಿ ಬಳಸಿರುವ ಮಾತುಗಳನ್ನು ಹಿಂಪಡೆಯಿರಿ ಎಂದು ಹೇಳಿದ್ದಾರೆ. 

Leave a Reply

Your email address will not be published. Required fields are marked *

You May Also Like

ಕೊರೊನಾ ಭಯ : ಇಂದು ವಿಕಾಸಸೌಧಕ್ಕೆ ರಜೆ!

ಬೆಂಗಳೂರು: ವಿಕಾಸಸೌಧದಲ್ಲಿ ಕೊರೊನಾ ಆತಂಕ ಮನೆ ಮಾಡಿರುವುದರಿಂದಾಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಶುಕ್ರವಾರ ಕಚೇರಿ…

ಜೇನುಹುಳುಗಳಂತೆ ಬಂದ ಕುರುಬರು

ನಗರದ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಆವರಣ ಭಾನುವಾರ ಕುರುಬರ ಶಕ್ತಿ ಪ್ರದರ್ಶನ ಕೇಂದ್ರದಂತೆ ಕಾಣುತ್ತಿತ್ತು. ರಾಜ್ಯದ ಮೂಲೆ-ಮೂಲೆಯಿಂದ ಜನಸಾಗರ ಸಮಾವೇಶಕ್ಕೆ ಹರಿದು ಬಂದಿತ್ತು.

ಮಹಾಶಕ್ತಿ ಕೇಂದ್ರ ಅಧ್ಯಕ್ಷರಾಗಿ ನಾಗರಾಜ ಯಂಬಲದ ಆಯ್ಕೆ

ಮಸ್ಕಿ: ನಗರದ ಮಹಾಶಕ್ತಿ ಕೇಂದ್ರ ಅಧ್ಯಕ್ಷವನ್ನಾಗಿ ಆಯ್ಕೆಯಾದ ನಾಗರಾಜ ಯಂಬಲದ ಅವರಿಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ಸನ್ಮಾನಿಸಿದರು.

ಗುಲಗಂಜಿಕೊಪ್ಪ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು

ಲಕ್ಷ್ಮೇಶ್ವರ: ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ವಿದ್ಯಾರ್ಥಿಗಳಿಗೆ ಯಾರು ಬಸ್ ನಿಲ್ಲಸೊಲ್ಲ ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರುಹಾಗೂ ಕರವೇ ಸ್ವಾಭಿಮಾನ ಬಣದಿಂದ ಲಕ್ಷ್ಮೇಶ್ವರ ಬಸ್ ಡಿಪೋದಲ್ಲಿ ಮನವಿ ಸಲ್ಲಿಸಲಾಯಿತು.