ಭೋಪಾಲ್ : ತಂದೆಯನ್ನೇ ಕೊಲೆ ಮಾಡಿದ 16ರ ಬಾಲಕಿ ಪೊಲೀಸರಿಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿ ಬುಧವಾರ ಸಂಜೆ ಕುಡಿದ ಅಮಲಿನಲ್ಲಿ ಮನೆಗೆ ಬಂದು ತಾಯಿಯನ್ನು ಹೊಡೆಯುತ್ತಿದ್ದ. ಈ ಸಂದರ್ಭದಲ್ಲಿ ಸಿಟ್ಟಾದ 16 ವರ್ಷದ ಮಗಳು, ಬಟ್ಟೆ ಒಗೆಯಲು ಬಳಸುವ ವಸ್ತುವಿನಿಂದ ತಂದೆಯನ್ನೇ ಹೊಡೆದು ಹೊಡೆದು ಹತ್ಯೆ ಮಾಡಿದ್ದಾಳೆ. ಆ ನಂತರ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ, ಶರಣಾಗಿದ್ದಾಳೆ. ಬಾಲಕಿಯ ತಂದೆ ನಿರುದ್ಯೋಗಿಯಾಗಿದ್ದು, ಹಿರಿಯ ಮಗನನ್ನು ಅವಲಂಬಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿನಿತ್ಯ ಮದ್ಯ ಸೇವಿಸಿ ಬಂದು ತಾಯಿಗೆ ತಂದೆ ಹೊಡೆಯುತ್ತಿದ್ದರು ಎಂದು ಬಾಲಕಿ ಆರೋಪಿಸಿದ್ದಾಳೆ. ಘಟನೆ ನಡೆದ ದಿನ ಬಾಲಕಿಯ ಕುಟುಂಬ ಹಿರಿಯ ಮಗನ ಮದುವೆ ವಿಚಾರವಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ತಂದೆ ಜಗಳ ಮಾಡಿದ್ದಾನೆ. ಇದರಿಂದ ಕೋಪಗೊಂಡ ಬಾಲಕಿ ಬ್ಯಾಟ್ ಎತ್ತಿಕೊಂಡು ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಪರಿಣಾಮ ತೀವ್ರ ರಕ್ತಸ್ತಾವವಾಗಿ ಆಕೆಯ ತಂದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಾಲಕಿಯನ್ನು ಬಾಲಾಪರಾಧಿ ಹೋಮ್‍ ಗೆ ಕಳುಹಿಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ವಿಶ್ವ ಸಂಸ್ಥೆ ಭದ್ರತಾ ಸಮಿತಿಗೆ ಭಾರತ ತಾತ್ಕಾಲಿಕ‌ ಸದಸ್ಯ

ನ್ಯೂಯಾರ್ಕ್‌: ಚೀನಾದೊಂದಿಗೆ ಗಡಿಯಲ್ಲಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲಿಯೇ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ತಾತ್ಕಾಲಿಕ ಸದಸ್ಯತ್ವ…

ನಡು ರಸ್ತೆಯಲ್ಲಿಯೇ ಯುವತಿಯನ್ನು ಕೊಲೆಗೈದ ಪಾಪಿಗಳು!

ಹರಿಯಾಣ : ನಡು ರಸ್ತೆಯಲ್ಲಿಯೇ ಯುವತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.

ದೇಶ ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ! ಈ ಭಾಷಣದಲ್ಲಿ ಏನು ಹೇಳಿದರು?

ನವದೆಹಲಿ : ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗಿರುವ ಸಂತಸ ಹಂಚಿಕೊಂಡಿದ್ದಾರೆ.

ಮೊಬೈಲ್ ಗಾಗಿ ಅಜ್ಜಿಯ ತಲೆಯನ್ನೇ ಕತ್ತರಿಸಿದ ಮೊಮ್ಮಗ!

ಮುಂಬಯಿ : ಮೊಬೈಲ್ ಗಿಫ್ಟ್ ಕೊಡಲು ನಿರಾಕರಿಸಿದ ಅಜ್ಜಿಯ ತಲೆಯನ್ನೇ ಕತ್ತರಿಸಿ ಟೇಬಲ್ ಮೇಲಿಟ್ಟು ಮೊಮ್ಮಗ ವಿಕೃತಿ ಮೆರೆದಿರುವ ಘಟನೆ ನಡೆದಿದೆ.