ವಿಶಾಖಪಟ್ಟಣಂ: ಇಲ್ಲಿನ ವಿಷಾನಿಲ ದುರ್ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಅಸ್ವಸ್ಥರ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ಬರಿಸಲಿದೆ. ತೀವ್ರ ಅಸ್ವಸ್ಥರಿಗೆ 10 ಲಕ್ಷ ಪರಿಹಾರ ಹಾಗೂ ಆಸ್ಪತ್ರೆಯಲ್ಲಿ 2-3 ದಿನ ಉಳಿದವರಿಗೆ 5 ಲಕ್ಷ ನೆರುವು ನೀಡಲು ಆಂದ್ರ ಸರ್ಕಾರ ತೀರ್ಮಾನಿಸಿದೆ. ಜೊತೆಗೆ ಗಾಯಾಳುಗಳಿಗೆ 1 ಲಕ್ಷ ಪರಿಹಾರವನ್ನು ನೀಡಲಾಗುವುದು ಎಂದು ಆಂದ್ರ ಪ್ರದೇಶ ಸಿಎಂ ಜಗನಮೋಹನರೆಡ್ಡಿ ತಿಳಿಸಿದ್ದಾರೆ.

ಅಸ್ವಸ್ಥರನ್ನು ವಿಶಾಖಪಟ್ಟದ ಕಿಂಗ್ ಜಾರ್ಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಈ ದುರ್ಘಟನೆಯಿಂದ ಈಗಾಗಲೇ 1000ಕ್ಕೂ ಹೆಚ್ಚು ಜನರು ವಿಷಾನಿಲವನ್ನು ಸೇವಿಸಿದ್ದಾರೆ ಎನ್ನಲಾಗಿದ್ದು, ಆಸ್ಪತ್ರೆಯಲ್ಲಿ 200ಕ್ಕೂ ಅಧಿಕ ಮಂದಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಕಾರ್ಖಾನೆಯ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಆತಂಕ  ಸೃಷ್ಟಿಯಾಗಿದ್ದು, ಸುತ್ತಲಿನ ಕೆಲ ಗ್ರಾಮಸ್ಥರಿಗೆ ಕಣ್ಣಿನ ಉರಿ, ಹೊಟ್ಟೆ ನೋವು, ಉಸಿರಾಟದ ಸಮಸ್ಯೆ, ಗಂಟಲು ನೋವು ಕಾಣಿಸಿಕೊಂಡಿದೆ.

Leave a Reply

Your email address will not be published. Required fields are marked *

You May Also Like

ಅಕ್ರಮ ಅಕ್ಕಿ ಸಂಗ್ರಹ ಗೋಡೌನ್ ಮೇಲೆ ದಾಳಿ

ಗದಗ: ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಸಂಗ್ರಹ ಗೋಡೌನ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ಘಟನೆ…

ಗದಗ ಜಿಲ್ಲೆಯ ಯಾವ ಗ್ರಾಮ ಪಂಚಾಯತಿಗೆ ಯಾರು ಆಡಳಿತಾಧಿಕಾರಿ

ಗದಗ:ಈಗಾಗಲೇ ಕೊರೊನಾ ಹಿನ್ನೆಲೆ ಅವಧಿ ಮುಗಿದ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಪ್ರಕ್ರಿಯೇಯನ್ನು ಸರ್ಕಾರ ಮುಂದೂಡಿದೆ. ಆದರೆ…

ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿದ ಮನೆಯ ಮಾಲೀಕ!

ಹೈದರಾಬಾದ್ : 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಮಾಲೀಕನೇ ಬೆಂಕಿ ಹಚ್ಚಿರುವ ಆಘಾತಕಾರಿ ಹಾಗೂ ಅಮಾನವೀಯ ಘಟನೆ ನಡೆದಿದೆ.

ಕೊರ್ಲಹಳ್ಳಿ ಟೋಲ್ ನಾಕಾ ಸಿಬ್ಬಂದಿ ಗೂಂಡಾಗಿರಿ..!

ಮುಂಡರಗಿ: ಟೋಲ್ ನಾಕಾ ಹಣದ ವಿಚಾರಕ್ಕೆ ಸಂಬಂಧ ಪಟ್ಟಂತೆ ಟೋಲ್ ಸಿಬ್ಬಂಧಿಗಳು ಗೂಂಡಾಗಿರಿ ನಡೆಸಿದ್ದು ನಾಲ್ವರನ್ನು…