ಬೆಂಗಳೂರು : ರಾಜ್ಯದಲ್ಲಿ ಎರಡು ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೂರು ಪಕ್ಷಗಳ ನಾಯಕರ ಪರ – ವಿರೋಧ ಹೇಳಿಕೆಗಳು ತಾರಕಕ್ಕೆ ಏರುತ್ತಿವೆ.

ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎದುರಾಳಿ ನಮ್ಮ ಸಮನಾಗಿದ್ದರೆ, ಯುದ್ಧ ಸಾರಬಹುದು. ಆದರೆ, ಇಲ್ಲಿನ ಎದುರಾಳಿ ನಮ್ಮ ಸರಿಸಾಟಿ ಇಲ್ಲ. ಹೀಗಾಗಿ ಯುದ್ಧ ಮಾಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಸದ್ಯ ಚುನಾವಣೆ ನಡೆಯುತ್ತಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಕಾಂಗ್ರೆಸ್ ಜಯಗಳಿಸುವುದು ನಿಶ್ಚಿತ. ಈ ಸರ್ಕಾರ ಕೇವಲ ಆಸ್ವಾಸನೆಗಳನ್ನು ಮಾತ್ರ ನೀಡುತ್ತಿದೆ. ಕಳೆದ ವರ್ಷ ಪ್ರವಾಹ ಬಂದ ಸಂದರ್ಭದಲ್ಲಿ ರೂ. 35 ಸಾವಿರ ಕೋಟಿ ನಷ್ಟವಾಗಿದೆ ಎಂದಿದ್ದರು. ಕೇಂದ್ರ ಸರ್ಕಾರ ಕೇವಲ ರೂ. 1800 ಕೋಟಿ ನೀಡಿತ್ತು. ಸಿಎ ಅವರು ಮನೆ ಕಳೆದುಕೊಂಡವರಿಗೆ ರೂ. 5 ಲಕ್ಷ ಹಾಗೂ ಬಾಡಿಗೆ ಕಟ್ಟಲು ರೂ. 5 ಸಾವಿರ ಕೊಡುವುದಾಗಿ ಹೇಳಿದ್ದರು. ಆದರೆ, ಆ ಮೊತ್ತ ಇನ್ನೂ ಜನರನ್ನು ತಲುಪಿಲ್ಲ ಎಂದು ಆರೋಪಿಸಿದ್ದಾರೆ.

ಕೊರೊನಾ ಸಂದರ್ಭದಲ್ಲಿ ನಾವು ಈ ಕುರಿತು ಧ್ವನಿ ಎತ್ತಿದಾಗ ಒಂದಿಷ್ಟು ಜನರಿಗೆ ಹಣ ನೀಡುವುದಾಗಿ ಸರ್ಕಾರ ಘೋಷಣೆ ಮಾಡಿತು. ಇದುವರೆಗೂ ಆ ಪರಿಹಾರ ರೈತರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ ತಲುಪಿಲ್ಲ. ಈ ಸರ್ಕಾರ ಆಶ್ವಾಸನೆ ಘೋಷಣೆ ಮಾಡುತ್ತದೆಯೇ ಹೊರತು ಅದನ್ನು ಸಾಕಾರಗೊಳಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. 

ಈ ಸಂದರ್ಭದಲ್ಲಿ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಹಾಗೂ ಜೆಡಿಎಸ್ ನಾಯಕ ಎಂ.ಎಸ್. ಅಕ್ಕಿ ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. 

Leave a Reply

Your email address will not be published. Required fields are marked *

You May Also Like

ಎಂಎಚ್ಎಂ ಶಾಲೆಯಲ್ಲಿ ಸ್ನೇಹ ಸಮ್ಮೇಳನ ಸಂಭ್ರಮ ಕನಾ೯ಟಕ ಗಾಂಧಿ ಹಡೇ೯ಕರ ಮಂಜಪ್ಪಗೆ ಭಾರತರತ್ನ ಪ್ರಶಸ್ತಿ ನೀಡಿ

ಚಿತ್ರವರದಿ : ಗುಲಾಬಚಂದ ಜಾಧವಆಲಮಟ್ಟಿ(ವಿಜಯಪುರ ಜಿಲ್ಲೆ) : ಉತ್ಕಟ ಕಾಯಕದ ತತ್ವ ಶಾಸ್ತ್ರ ಪರಿಪಾಲಿಸಿ ಶರಣ…

ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಕೂಗು ಎತ್ತಿದ್ದು ನಿಜ- ಸಚಿವ ಉಮೇಶ್ ಕತ್ತಿ

ಆಲಮಟ್ಟಿ: ಉತ್ತರ ಕರ್ನಾಟಕದ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊ0ಡಾಗ ತಾವು ಸಹಜವಾಗಿಯೇ ಪ್ರತ್ಯೇಕ ರಾಜ್ಯದ ಕೂಗೆತ್ತಿರುವುದು…

ಗದಗ-ಬೆಟಗೇರಿ ನಗರಸಭೆ: ಮಾರ್ಚ 2ಕ್ಕೆ ಅಧ್ಯಕ್ಷ ಸ್ಥಾನದ ತೀರ್ಪು ಸಾಧ್ಯತೆ, ಉಪಾಧ್ಯಕ್ಷ ಸ್ಥಾನಕ್ಕೆ ಹೈ ಕೋರ್ಟ ಗ್ರೀನ್ ಸಿಗ್ನಲ್

ಉತ್ತರಪ್ರಭ ಸುದ್ದಿಗದಗ: ಗದಗ ಬೆಟಗೇರಿ ನಗರ ಸಭೆಯ ಅಧ್ಯಕ್ಷರಾಗಿ ಬಿಜೇಪಿಯ ಉಷಾ ಮಹೇಶ ದಾಸರ ಆಯ್ಕೆಯಾಗಿದ್ದರು…