ಗದಗ: ರಾಜ್ಯ ಸರ್ಕಾರ ತಾಲೂಕು ಪಂಚಾಯತಿಯನ್ನು ರದ್ದು ಪಡಸಲು ಮುಂದಾಗಿದ್ದು, ಸAವಿಧಾನದಲ್ಲಿ ತಿದ್ದುಪಡಿಯಾಗಿದ್ದನ್ನು ರಾಜ್ಯ ಸರಕಾರ ರದ್ದು ಪಡಿಸೋಕೆ ಬರುವದಿಲ್ಲ. ಆದರೆ ಯಾವ ಆಧಾರದ ಮೇಲೆ ಸರ್ಕಾರ ಈ ನಿರ್ಧಾರಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಪ್ರಶ್ನಿಸಿದರು.

ಸರಕಾರ ತಾಲೂಕು ಪಂಚಾಯತ ವ್ಯವಸ್ಥೆ ರದ್ದು ಪಡಿಸೋ ವಿಚಾರ ಹಿನ್ನೆಲೆ ಗದಗನಲ್ಲಿ ಮಾತನಾಡಿ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

ಸಂವಿಧಾನ ತಿದ್ದುಪಡಿ 73 ರಲ್ಲಿ ಈ ಬಗ್ಗೆ ಬದಲಾವಣೆಯಾಗಿದೆ. ರಚನಾತ್ಮಕ ಹಾಗೂ ರಾಷ್ಟ್ರ ಕಟ್ಟುವ ಕೆಲಸದಲ್ಲಿ ತಾಲೂಕು ಪಂಚಾಯತ ಪರಿಣಾಮಕಾರಿ ಆಗಿವೆ.

ಇದರಲ್ಲಿ ಅಧಿಕಾರಿಶಾಹಿ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆ ಇಲ್ಲಿ ಎದ್ದು ಕಾಣುತ್ತದೆ ಎಂದು ಪ್ರಶ್ನಿಸಿದರು.

ಸರಕಾರ ತಾಲೂಕು ಪಂಚಾಯತ ವ್ಯವಸ್ಥೆ ಗಟ್ಟಿಗೊಳಿಸಬೇಕಾಗಿತ್ತು. ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರಗಳಲ್ಲಿ ತಾಲೂಕು ಪಂಚಾಯತಿ ಪಾತ್ರ ಮಹತ್ವವಾಗಿದೆ. ಅಧಿಕಾರಿಗಳ ಸಭೆಯಲ್ಲಿ ಕೂತು ರದ್ದು ಮಾಡಬೇಕು ಎಂದು ಹೇಳಿದರೆ ಅದು ಸಮರ್ಪಕ ನಿಲುವಲ್ಲ. ಮೇ ತಿಂಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ ಚುನಾವಣೆ ನಡೆಯಲಿವೆ. ಚುನಾವಣೆ ಮುಂದೂಡಲಿಕ್ಕೆ ಸರಕಾರ ಈ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.

ಬದಲಾವಣೆ ಹೆಸರಿನಲ್ಲಿ ಚುನಾವಣೆ ಮುಂದೂಡುವ ಪ್ರಯತ್ನ ಸಲ್ಲದು. ಇದರಿಂದ  ಪಂಚಾಯತ್ ಹಾಗೂ ಗ್ರಾಮಸ್ವರಾಜ್ ವ್ಯವಸ್ಥೆಗೆ ಧಕ್ಕೆ ಆಗುತ್ತದೆ. ಸರಕಾರ ಮಾಡುವ ಪ್ರಯತ್ನದಿಂದ ಕೋರ್ಟನಲ್ಲಿ ಮತ್ತೊಮ್ಮೆ ಮಂಗಳಾರುತಿ ಆಗುತ್ತದೆ.

ಈಗಾಗಲೇ ಗ್ರಾಮ ಪಂಚಾಯತ ಚುನಾವಣಾ ವೇಳೆ ಸರಕಾರಕ್ಕೆ ಕೋರ್ಟನಿಂದ ಮಂಗಳಾರತಿಯಾಗಿದೆ. ಅದೇ ರೀತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ ಚುನಾವಣೆ ವಿಚಾರದಲ್ಲಿ ಆಗುತ್ತದೆ. ಸರಕಾರ ಇಂಥ ಕೆಟ್ಟ ಸಾಹಸಕ್ಕೆ ಮುಂದಾಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You May Also Like

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮಾಹಿತಿ

01 ಹಾಜಿಅಲಿ ಹಾರುನ್‌ಜಾಪರ್ ಕೊಪ್ಪಳ (ವ: 46ವರ್ಷ) ಸಾ: ಜನತಾ ಕಾಲೋನಿ ಹೊಂಬಳ ರಸ್ತೆ ಗದಗ…

ವಿಪ ಸದಸ್ಯ ಪ್ರಸನ್ನಕುಮಾರ್ ಅವರ ಪುತ್ರ ನಿಧನ!

ಶಿವಮೊಗ್ಗ : ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಪುತ್ರ ಸುಹಾಸ್ (31) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಏಡ್ಸ್ ರೋಗ ಹತ್ತಿಕ್ಕಲು ಜನಜಾಗೃತಿ ಹೆಚ್ಚಳ-ಬಾಬುರಾವ ತಳವಾರ

ಆಲಮಟ್ಟಿ: 2030 ರೊಳಗೆ ಭಾರತದಲ್ಲಿ ಮಹಾಮಾರಿ ಏಡ್ಸ್ ರೋಗದ ಹಾವಳಿ ಸಂಪೂರ್ಣವಾಗಿ ತಡೆಗಟ್ಟಬೇಕಿದೆ. ಈ ಮಾರಕ…

ರಾಜ್ಯಸಭಾ ಚುನಾವಣೆ: ಸಂಘ ನಿಷ್ಟರಿಗೆ ಮಣೆ ಕಮಲದಲ್ಲಿ ಅಸಂತೋಷ..!

ಬೆಂಗಳೂರು: ಇತ್ತಿಚೆಗಷ್ಟೆ ಶಾಸಕ ಉಮೇಶ್ ಕತ್ತಿ ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆಗೆ ಕಳಿಸಬೇಕು ಎಂದು…