ಮುಂಡರಗಿ: ಪಂಚಮಸಾಲಿ ಸಮಾಜದ ಶಹರ ಘಟಕ ದಿಂದ ಗದಗ ಜಿಲ್ಲಾ ಬಳಗಾನೂರ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಸಂಬಂಧಿಸಿದಂತೆ ಗಲಾಟೆ ಪ್ರಕರಣ ನಡೆದಿದ್ದು ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತಂದಂತಾಗಿದೆ. ಈ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡದಿಂದ ತಾಯಿ ಮಕ್ಕಳಂತೆ ಇರುವ ಎರಡು ಸಮಾಜದ ಮೇಲೆ ದ್ವೇಷ ಭಾವನೆಯನ್ನುಂಟು ಮಾಡುತ್ತಿರುವುದು ಕಂಡು ಬರುತ್ತಿದೆ.

ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ಎದೆಯೊಡ್ಡಿ ಹೋರಾಡಿದ ಮಹನೀಯರ ಪುತ್ಥಳಿಗಳನ್ನು ಬಳಗಾನೂರು ಗ್ರಾಮದ ಎರಡೂ ಸಮಾಜದ ಹಿರಿಯರ ಸಮ್ಮುಖದಲ್ಲಿ ಒಂದೇ ವೃತ್ತದಲ್ಲಿ ಸ್ಥಾಪನೆ ಮಾಡಬೇಕು. ಮತ್ತು ಈ ವಿಚಾರವಾಗಿ ಕೂಡಲೇ ಜಿಲ್ಲಾಡಳಿತ ಮದ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಮಂಜುನಾಥ್ ಮುಧೋಳ, ಶಿವು ಇಟಗಿ,  ಹುಚ್ಚಪ್ಪ ಹಂದ್ರಾಳ, ಪ್ರಶಾಂತ್  ಅಂದ್ರಳ, ಅಶೋಕ್ ಹಂದ್ರಾಳ, ಎಂ.ಬಿ. ಪೊಲೀಸ್ ಪಾಟೀಲ್, ಜೆ.ಬಿ.ಉಳಾಗಡ್ಡಿ, ಸೋಮು ಹಕ್ಕಂಡಿ,  ಎಸ್.ಎಚ್.ದೇಸಾಯಿ, ಬಸವರಾಜ ಗುಡ್ಲಾನೂರ, ದೇವೀಂದ್ರಪ್ಪ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ರಾಯಚೂರು ಜಿಲ್ಲೆಯಲ್ಲಿಂದು 3 ಕೊರೊನಾ ಪಾಸಿಟಿವ್!

ರಾಯಚೂರು: ಜಿಲ್ಲೆಯಲ್ಲಿಂದು 3 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 434…

ಲಕ್ಷ್ಮೇಶ್ವರ:ಬತ್ತಿದ ಬೋರ್ ವೆಲ್ ನಲ್ಲಿ ಜಲಲ ಧಾರೆ…!

ಅಂತರ್ಜಲ ಹೆಚ್ಚಳದಿಂದ ಬತ್ತಿದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿದೆ. ಇದರಿಂದ ರೈತರಲ್ಲಿ ಸಂತಸ ಮೂಡಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಸಾರಿಗೆ ನೌಕರರ ಮುಷ್ಕರ ವಾಪಸ್: ಸತ್ಯಾಗ್ರಹ ಮುಂದುವರಿಕೆ

ಈಗಾಗಲೇ ಕಳೆದ ನಾಲ್ಕು ದಿನಗಳಿಂದ ಆರಂಭವಾಗಿದ್ದ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆದುಕೊಂಡಿರುವ ಬಗ್ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸ್ಪಷ್ಟಪಡಿಸಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಕರ್ಫ್ಯೂ ಭಾಗಶಃ ಯಶಸ್ವಿ; ದಂಡಾಧಿಕಾರಿಗಳಿಂದ ರೂಲ್ಸ್ ಬ್ರೇಕ ಮಾಡಿದವರಿಗೆ ದಂಡ.

ಲಕ್ಷ್ಮೇಶ್ವರ: ಬಿಕೋ ಎನ್ನುತ್ತಿರುವ ಪ್ರಮುಖ ಹೆದ್ದಾರಿ, ಬಸ್ ನಿಲ್ದಾಣಗಳು… ಶುಕ್ರವಾರ ರಾತ್ರಿಯಿಂದಲೇ ಪೊಲೀಸರು ನೈಟ್ –…