ಬಳಗಾನೂರಿನಲ್ಲಿ ಚೆನ್ನಮ್ಮ, ರಾಯಣ್ಣ ಪುತ್ಥಳಿ ಸ್ಥಾಪನೆಗೆ ಮನವಿ

panchamasali balaganuru manavi

ಬಳಗಾನೂರಿನಲ್ಲಿ ಚೆನ್ನಮ್ಮ, ರಾಯಣ್ಣ ಪುತ್ಥಳಿ ಸ್ಥಾಪನೆಗೆ ಮನವಿ

ಮುಂಡರಗಿ: ಪಂಚಮಸಾಲಿ ಸಮಾಜದ ಶಹರ ಘಟಕ ದಿಂದ ಗದಗ ಜಿಲ್ಲಾ ಬಳಗಾನೂರ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕಿತ್ತೂರು ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಸಂಬಂಧಿಸಿದಂತೆ ಗಲಾಟೆ ಪ್ರಕರಣ ನಡೆದಿದ್ದು ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತಂದಂತಾಗಿದೆ. ಈ ಪ್ರಕರಣದಲ್ಲಿ ಕಾಣದ ಕೈಗಳ ಕೈವಾಡದಿಂದ ತಾಯಿ ಮಕ್ಕಳಂತೆ ಇರುವ ಎರಡು ಸಮಾಜದ ಮೇಲೆ ದ್ವೇಷ ಭಾವನೆಯನ್ನುಂಟು ಮಾಡುತ್ತಿರುವುದು ಕಂಡು ಬರುತ್ತಿದೆ.

ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ಎದೆಯೊಡ್ಡಿ ಹೋರಾಡಿದ ಮಹನೀಯರ ಪುತ್ಥಳಿಗಳನ್ನು ಬಳಗಾನೂರು ಗ್ರಾಮದ ಎರಡೂ ಸಮಾಜದ ಹಿರಿಯರ ಸಮ್ಮುಖದಲ್ಲಿ ಒಂದೇ ವೃತ್ತದಲ್ಲಿ ಸ್ಥಾಪನೆ ಮಾಡಬೇಕು. ಮತ್ತು ಈ ವಿಚಾರವಾಗಿ ಕೂಡಲೇ ಜಿಲ್ಲಾಡಳಿತ ಮದ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಮಂಜುನಾಥ್ ಮುಧೋಳ, ಶಿವು ಇಟಗಿ,  ಹುಚ್ಚಪ್ಪ ಹಂದ್ರಾಳ, ಪ್ರಶಾಂತ್  ಅಂದ್ರಳ, ಅಶೋಕ್ ಹಂದ್ರಾಳ, ಎಂ.ಬಿ. ಪೊಲೀಸ್ ಪಾಟೀಲ್, ಜೆ.ಬಿ.ಉಳಾಗಡ್ಡಿ, ಸೋಮು ಹಕ್ಕಂಡಿ,  ಎಸ್.ಎಚ್.ದೇಸಾಯಿ, ಬಸವರಾಜ ಗುಡ್ಲಾನೂರ, ದೇವೀಂದ್ರಪ್ಪ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version