ಪಾಟ್ನಾ :  ಬಿಹಾರ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತ ವೈರಸ್ ಲಸಿಕೆ ನೀಡುವ ಭರವಸೆ ನೀಡಿದೆ. 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಅವರೊಂದಿಗೆ ಬಿಜೆಪಿಯ ಹಿರಿಯ ಮುಖಂಡ ಭೂಪೇಂದರ್ ಯಾದವ್, ಅಶ್ವಿನಿ ಚೌಹೆ, ಪ್ರಮೋದ್ ಕುಮಾರ್, ನಿತ್ಯಾನಂದ ರೇ ಸೇರಿದಂತೆ ಹಲವರು ಇದ್ದರು. 

ಪ್ರಣಾಳಿಕೆ ಕುರಿತು ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಹಾರದಲ್ಲಿ ಒಟ್ಟು ದೇಶೀಯ ಉತ್ಪನ್ನವು ಎನ್‌ ಡಿಎ ಅಧಿಕಾರದ ಅವಧಿಯಲ್ಲಿ ಏರಿಕೆ ಕಂಡಿದೆ. ಬಿಹಾರದಲ್ಲಿ ಜಿಡಿಪಿ ಶೇ 3 ರಿಂದ 11.3 ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. 

ರಾಜ್ಯ ಕಾರ್ಮಿಕರಿಗೆ ಬಿಹಾರ ರಾಜ್ಯದಲ್ಲಿಯೇ ಉದ್ಯೋಗ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಎನ್’ಡಿಎ ಸರ್ಕಾರ ಉದಾಹರಣೆಯಾಗಿದೆ. ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ಕೂಡಲೇ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು ನಮ್ಮ ಸಂಕಲ್ಪವಾಗಿದೆ. ಲಸಿಕೆಗೆ ಅನುಮತಿ ದೊರಕಿದ ಕೂಡಲೇ ಪ್ರತೀಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ಬಿಜೆಪಿ ಹೇಳಿದೆ.

Leave a Reply

Your email address will not be published. Required fields are marked *

You May Also Like

ಕೊರೊನಾ ದುಷ್ಪರಿಣಾಮ: ನಗರಗಳ 14 ಕೋಟಿ ಜನರ ಬದುಕು ದುಸ್ತರ

ದೆಹಲಿ: ದೇಶಾದ್ಯಂತ ಕೊರೊನಾ ಕಾರಣದಿಂದಾಗಿ ಲಾಕ್ಡೌನ್ ದುಷ್ಪರಿಣಾಮ ನಗರ ಪ್ರದೇಶಗಳಲ್ಲಿ ವಾಸವಾಗಿರುವ ನಾಗರಿಕರ ಮೇಲೆ ಹೆಚ್ಚಾಗಿದೆ.…

ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10118…

ಪೈಲಟ್ ಬಣಕ್ಕೆ ಹೈಕೋರ್ಟಿನಿಂದ ಕೊಂಚ ರಿಲೀಫ್

ಸ್ಪೀಕರ್ ಕಳಿಸಿದ್ದ ಅನರ್ಹತೆ ಕುರಿತಾದ ನೋಟಿಸ್ ನಿಂದ ಆತಂಕಕ್ಕೆ ಬಿದ್ದಿದ್ದ ಸಚಿನ್ ಪೈಲಟ್ ಬಣದ 19…

ರಾಷ್ಟಪತಿ ಭಾಷಣಕ್ಕೆ ಬಹಿಷ್ಕರಿಸಲು 16 ವಿಪಕ್ಷಗಳಿಂದ ನಿರ್ಧಾರ

ನಾಳೆಯಿಂದ ಅಧಿವೇಶನ ಸಂಸತ್‌ ಬಜೆಟ್‌ ಆರಂಭವಾಗಲಿದ್ದು, ಕೇಂದ್ರದ ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಗುಲಾಂ ನಬಿ ಹೇಳಿದ್ದಾರೆ.