ಸ್ಪೀಕರ್ ಕಳಿಸಿದ್ದ ಅನರ್ಹತೆ ಕುರಿತಾದ ನೋಟಿಸ್ ನಿಂದ ಆತಂಕಕ್ಕೆ ಬಿದ್ದಿದ್ದ ಸಚಿನ್ ಪೈಲಟ್ ಬಣದ 19 ಶಾಸಕರಿಗೆ ಹೈಕೋರ್ಟಿನಿಂದ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಜೈಪುರ: ಸ್ಪೀಕರ್ ನೋಟಿಸ್ ಮತ್ತು ಪಕ್ಷಾಂತರ ನಿಷೇಧ ಕಾಯಿದೆಯನ್ನು ಪ್ರಶ್ನಿಸಿ ದಾವೆ ಸಲ್ಲಿಸಲು ತಮಗೆ ಸಮಯಾವಕಾಶ ನೀಡಿ ಎಂದು ಸಚಿನ್ ಪೈಲಟ್ ಬಣದ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ ನಡೆಸಿದ ರಾಜಸ್ತಾನ ಹೈಕೋರ್ಟ್, ಹೊಸ ದಾವೆ ಸಲ್ಲಿಸಲು ಕಾಲಾವಕಾಶ ನೀಡಿದೆ.
ಇದರಿಂದ ಸದ್ಯಕ್ಕೆ ಅನರ್ಹತೆಯ ದೊಣ್ಣೆಯಿಂದ ಪೈಲಟ್ ಬಣದ ಶಾಸಕರು ತಪ್ಪಿಸಿಕೊಂಡಿದ್ದಾರೆ.
ಶಾಸಕರ ಅನರ್ಹತೆ ಕುರಿತಂತೆ ನೋಟಿಸ್ ಹೊರಡಿಸಿದ್ದ ಸ್ಪೀಕರ್, ನೋಟಿಸ್ಗೆ ಕೂಡಲೇ ಉತ್ತರಿಸುವಂತೆ 19 ಶಾಸಕರಿಗೆ ಸೂಚಿಸಿದ್ದರು. ನೋಟಿಸ್ಗಳನ್ನು ಶಾಸಕರ ಮನೆಯ ಗೋಡೆಗಳಿಗೆ ಅಂಟಿಸಲಾಗಿತ್ತು.
ಸ್ಪೀಕರ್ ಕ್ರಮ ಪ್ರಶ್ನಿಸಿ ದಾವೆ ಸಲ್ಲಿಸಲು ಸಮಯಾವಕಾಶ ನೀಡಿ ಎಂದು ಪೈಲಟ್ ಬಣದ ಶಾಸಕರು ಮುಂಜಾನೆ ಹೈಕೋರ್ಟ್ ಮೊರೆ ಹೋಗಿದ್ದರು.