ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಹಲವು ಯೋಜನೆಗಳನ್ನು ಘೋಷಿಸಿದರು. ಇನ್ನು ಇದೇ ವೇಳೆ ದೇಶದ ಹತ್ತು ಹಲವು ಸಾಧನೆ ಹಾಗೂ ಯೋಜನೆಗಳ ಕುರಿತು ಮಾತನಾಡಿದರು.
ನವದೆಹಲಿ : ಇಂದು 74 ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡಿದ್ದಾರೆ.
ಈ ಬಾರಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗಿದ್ದು, ಅವರು ಮೋದಿ ಮಹಾತ್ಮ ಗಾಂಧಿ ಸಮಾಧಿ ರಾಜ್ ಘಾಟ್ ಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ನಂತರ ಕೆಂಪು ಕೋಟೆಯ ಮುಖ್ಯ ದ್ವಾರಕ್ಕೆ ಆಗಮಿಸುತ್ತಿದ್ದಂತೆ ಮೂರು ಸೇನೆಯಿಂದ ಮೋದಿ ಅವರಿಗೆ ಗೌರವ ಸಲ್ಲಿಸಲಾಯಿತು. ನಂತರ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಭದ್ರತೆ ವಹಿಸಲಾಗಿತ್ತು. ಎನ್.ಎಸ್.ಜಿ.ಆರ್. ಎಸ್ಪಿಜಿ, ಸಿಆರ್‌ಪಿಎಫ್, ಬಿಎಸ್ಎಫ್, ದೆಹಲಿ ಪೊಲಿಸ್ ಸೇರಿದಂತೆ 4,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದೇ ವೇಳೆ ಮಾತನಾಡಿದ ಅವರು, ಆಧುನಿಕ ಭಾರತ ನಿರ್ಮಾಣದಲ್ಲಿ ದೇಶದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ, ರಾಷ್ಟ್ರೀಯ ಶಿಕ್ಷಣ ನೀತಿ ಎಲ್ಲಾ ವಿದ್ಯಾರ್ಥಿಗಳನ್ನು ಒಂದುಗೂಡಿಸುತ್ತದೆ ಒಂದೇ ರೀತಿಯ ಶಿಕ್ಷಣ ಪಡೆಯುತ್ತಾರೆ ಎಂದರು.
ಮನೆಗೆ ನೀರು ತಲುಪಿಸುವ ಯೋಜನೆ ಜಲ ಜೀವನ್ ಮಿಷನ್ ನಿಂದ 2 ಕೋಟಿ ಮನೆಗೆ ನೀರು ತಲುಪಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಮಧ್ಯಮ ವರ್ಗದವರ ಹಣವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಕೋ-ಆಪರೇಟಿವ್ ಬ್ಯಾಂಕ್‌ಗಳನ್ನು ಆರ್‌ಬಿಐ ಜೊತೆ ಜೋಡಣೆ ಮಾಡಲಾಗಿದೆ.
ಕಳೆದ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ಶೇ 18ರ ದಾಖಲೆಯ ಹೆಚ್ಚಳವಾಗಿತ್ತು. ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ. ನಮ್ಮ ಪ್ರಜಾಪ್ರಭುತ್ವ, ಆರ್ಥಿಕತೆಯ ತಳಹದಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದೇವೆ.
ವಿಕಾಸದ ಈ ಯಾತ್ರೆಯಲ್ಲಿ ಸಮಾಜದಲ್ಲಿ ಜನರು ಹಿಂದೆ ಉಳಿದುಬಿಡುತ್ತಾರೆ, ಬಡತನದಿಂದ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಆತ್ಮ ನಿರ್ಭರ ಭಾರತವನ್ನಾಗಿಸಬೇಕು, ಹಿಂದುಳಿದ 110 ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳನ್ನು ಮುನ್ನಡೆಸುವ ಕುರಿತು ಆಲೋಚಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ, ಒಂದು ದೇಶ ಒಂದು ರೇಷನ್ ಕಾರ್ಡ್ ಯಾವುದೇ ಇರಲಿ ಪರಿವರ್ತನೆಯ ಕಾಲಘಟ್ಟವನ್ನು ವಿಶ್ವ ನೋಡುತ್ತಿದೆ.
ಮೇಕ್ ಇನ್ ಇಂಡಿಯಾ ಜೊತೆಗೆ ಮೇಕ್ ಫಾರ್ ವರ್ಲ್ಡ್ ಘೋಷವಾಖ್ಯದೊಂದಿಗೆ ಮುನ್ನುಗ್ಗಬೇಕಿದೆ. ಕೊರೊನಾ, ಭೂಕಂಪ, ಪ್ರವಾಹ ಏನೇ ಬರಲಿ ಜನರು ಆತ್ಮ ವಿಶ್ವಾಸವನ್ನು ಬಿಟ್ಟಿಲ್ಲ, ಗಟ್ಟಿ ಮನಸ್ಸಿನಿಂದ ಮುನ್ನುಗ್ಗಿದ್ದಾರೆ.
ಸಾಮರ್ಥ್ಯ ಮೂಲಂ ಸ್ವಾತಂತ್ರಂ, ಶ್ರಮ ಮೂಲಂಚ ವೈಭವಂ, ಯಾವುದೇ ಸಮಾಜದ ಸ್ವಾತಂತ್ರ್ಯ ಅವರ ಸಾಮರ್ಥ್ಯವಾಗಿರುತ್ತೆ, ಶ್ರಮವೇ ಅವರ ಉತ್ತಮ ಜೀವನಕ್ಕೆ ಕಾರಣವಾಗಿರುತ್ತದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊರೋನಾಗೆ ಮೂರು ಲಸಿಕೆಗಳು ಪರೀಕ್ಷಾ ಹಂತದಲ್ಲಿವೆ.
ಭಾರತದಲ್ಲಿ ಕೊರೋನಾಗೆ ಮೂರು ಲಸಿಕೆಗಳು ಪರೀಕ್ಷಾ ಹಂತದಲ್ಲಿವೆ. ವಿಜ್ಞಾನಿಗಳು ಗ್ನೀನ್ ಸಿಗ್ನನ್ ನೀಡಿದ ಕೂಡಲೇ, ಲಸಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಆತ್ಮನಿರ್ಭರ್, ಆಧುನಿಕತೆ, ನೂತನತೆಯಿಂದ ಮತ್ತು ಸಮೃದ್ಧತೆಯಿಂದ ದೇಶ ಕಟ್ಟಲು ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಮೂರು ದಶಕಗಳ ಬಳಿಕ ಹೊಸ ಶಿಕ್ಷಣ ನೀತಿಯನ್ನು ದೇಶಾದ್ಯಂತ ಸ್ವಾಗತಿಸಿದ್ದೇವೆ ಎಂದು ಹೇಳಿದ್ದಾರೆ.
ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿ ಕುರಿತು ಪರಿಶೀಲಿಸುವ ಚಿಂತನೆ ನಡೆದಿದೆ. ಮಹಿಳೆಯರಿಗೆ ಅವಕಾಶ ಸಿಕ್ಕಾಗಲೆಲ್ಲಾ ಭಾರತ ಹೆಮ್ಮೆ ಪಡುವ ಕೆಲಸಗಳು ನಡೆದಿವೆ. ಸ್ವಯಂ ಉದ್ಯೋಗ ಮತ್ತು ಉದ್ಯೋಗದ ಸಮಾನ ಅವಕಾಶಗಳನ್ನು ನೀಡಲಾಗುತ್ತಿದೆ. ದೇಶದ ಹೆಣ್ಣುಮಕ್ಕಳು ಯುದ್ಧ ವಿಮಾನವನ್ನು ಹಾರಿಸುವಾಗ ಆಗಸ ಮುಟ್ಟುತ್ತಿದ್ದಾರೆ. ಇಂದಿನಿಂದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಆರಂಭಿಸುತ್ತಿದ್ದೇವೆ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಿದೆ.
– ಪ್ರಧಾನಿ ಮೋದಿ
ರಾಷ್ಟ್ರೀಯ ಭದ್ರತೆಗೆ ತೊಂದರೆ ಮಾಡಲು ಹೊರಟವರಿಗೆ ನಮ್ಮ ಸೇನಾಪಡೆಗಳು ತಕ್ಕ ಉತ್ತರ ನೀಡುತ್ತಿವೆ. ಆತಂಕವಾದವಿರಲಿ, ವಿಸ್ತಾರವಾದವಿರಲಿ ದೇಶವು ಒಗ್ಗಟ್ಟಿನಿಂದ ಹೋರಾಡುತ್ತಿದೆ ಎಂದರು.