ತುಮಕೂರು: ಕೊರೊನಾ ಸೋಂಕು ತಡೆಗಟ್ಟುವಲ್ಲಿ ಜಿಲ್ಲೆಯ ಪೊಲೀಸರು ಮಾದರಿಯಾಗಿದ್ದಾರೆ ಎಂದು ಡಿಜಿ – ಐಜಿಪಿ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಮೂರು ತಿಂಗಳು ತುಮಕೂರು ಪೊಲೀಸರು ಚೆನ್ನಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸೋಕೆ ಇಲ್ಲಿಗೆ ಬಂದಿದ್ದೇನೆ. ರೆಡ್ ಝೋನ್ ಜಿಲ್ಲೆ, ಗ್ರೀನ್ ಜಿಲ್ಲೆ, ಎಂಬುವುದು ಈಗಿಲ್ಲ. ಮಹಾರಾಷ್ಟ್ರ, ತಮಿಳುನಾಡಿನಿಂದ ಎಲ್ಲಾ ಜಿಲ್ಲೆಗೂ ಕೊರೊನಾ ಸೋಂಕಿತರು ಬಂದಿದ್ದಾರೆ. ನನ್ನ ಪ್ರಕಾರ ಯಾವ ಜಿಲ್ಲೆಯ ಪೋಲಿಸರಿಗೆ ಸೋಂಕು ಬರುವುದಿಲ್ಲವೋ ಅದು ಗ್ರೀನ್ ಜೋನ್ ಜಿಲ್ಲೆ. ಈ ಜಿಲ್ಲೆಯ ಪೊಲೀಸರಿಗೆ ಯಾವುದೇ ಸೋಂಕು ಬಂದಿಲ್ಲ. ಚೆನ್ನಾಗಿ ಕಂಟ್ರೋಲ್ ಮಾಡಿದ್ದಾರೆ. ಜನರು ಹಾಗೂ ಪೊಲೀಸರ ಮಧ್ಯೆಯೂ ಇನ್ಫೆಕ್ಷನ್ ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ.

ಶಿವಮೊಗ್ಗ ಪೊಲೀಸರಿಗೆ ಸೋಂಕು ವಿಚಾರವಾಗಿ ಮಾತನಾಡಿದ ಪ್ರವೀಣ್ ಸೂದ್, ಯುವತಿಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ. ಈ ವೇಳೆ ಮಾನವೀಯ ದೃಷ್ಟಿಯಿಂದ ಇನ್ಸ್‌ಪೆಕ್ಟರ್ ತಮ್ಮ ಜೀಪಿನಲ್ಲಿ ಕೂರಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರೋಟೋಕಾಲ್ ಪ್ರಕಾರ ಅದು ತಪ್ಪು. ಆದರೆ, ಮಾನವೀಯ ದೃಷ್ಟಿಯಿಂದ ಏನು ಮಾಡ್ಬೇಕಿತ್ತು? ಕೆಲವು ಸರಿ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ ಎಂದರು.

Leave a Reply

Your email address will not be published. Required fields are marked *

You May Also Like

ಸರ್ಕಾರದ ಅಸಡ್ಡೆ – ಯಾದಗಿರಿಯಲ್ಲಿ ಹೆಚ್ಚಿದ ಆತಂಕ!

ಯಾದಗಿರಿ: ಮಹಾರಾಷ್ಟ್ರದ ಕೊರೊನಾದಿಂದಾಗಿ ಜಿಲ್ಲೆಯ ಜನರು ಕಂಗೆಟ್ಟು ಹೋಗಿದ್ದಾರೆ. ಸದ್ಯ ಮತ್ತೊಂದು ತಲೆನೋವು ಶುರುವಾಗಿದೆ. ವರದಿ…

ನೇಣಿಗೆ ಕೊರಳೊಡ್ಡಿದ ಕಾರ್ಪೊರೇಟರ್ ಪತ್ನಿ!

ಬೆಂಗಳೂರು : ಇಲ್ಲಿಯ ಬಸವನಪುರ ವಾರ್ಡ್ ನ ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಅವರ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ವಿರಾಟ್ ಕೊಹ್ಲಿ ಬಗ್ಗೆ ಕೋಚ್ ಹೇಳಿದ್ದೇನು?

ಮುಂಬಯಿ : ಭಾರತ ತಂಡದ ನಾಯಕ ವಿರಾಟ್ ಪರಿಸ್ಥಿತಿಗೆ ತಕ್ಕಂತೆ ತಮ್ಮ ಆಟ ಬದಲಾಯಿಸುತ್ತಾರೆ. ಇದೇ…