ಶಾರ್ಜಾ : ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ತಂಡ ನಿನ್ನೆ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ. ರೋಚಕ ಹಂತಕ್ಕೆ ಬಂದು ತಲುಪಿದ್ದ ಪಂದ್ಯದಲ್ಲಿ ಧೋನಿ ಅವರ ಕೆಟ್ಟ ನಿರ್ಧಾರದಿಂದಾಗಿ ಸೋಲು ಕಾಣುವಂತಾಯಿತು ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬ್ರಾವೋ ಫಿಟ್‌ ಆಗಿರಲಿಲ್ಲ. ಗಾಯಗೊಂಡು ಮೈದಾನ ತೊರೆದ ನಂತರ ಮತ್ತೆ ಅವರು ಮರಳಿ ಬಂದಿರಲಿಲ್ಲ. ಹೀಗಾಗಿ ನನ್ನ ಬಳಿ ಕರ್ರನ್‌ ಹಾಗೂ ಜಡೇಜಾ ಅವರ ಆಯ್ಕೆ ಮಾತ್ರ ಇತ್ತು. ಹೀಗಾಗಿ ಕೊನೆಯ ಓವರ್‌ ಅನ್ನು ಜಡೇಜಾ ಅವರಿಗೆ ನೀಡಿದೆ ಎಂದು ಧೋನಿ ಹೇಳಿದ್ದಾರೆ. ಅಲ್ಲದೇ, ಕೋಚ್‌ ಸ್ಟಿಫನ್‌ ಫ್ಲೇಮಿಂಗ್‌ ಕೂಡ ಇದೇ ಮಾತು ಹೇಳಿದ್ದಾರೆ.

ಕೊನೆಯ ಓವರ್ ನಲ್ಲಿ ದೆಹಲಿ ತಂಡದ ಗೆಲುವಿಗೆ 17 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಬೌಲಿಂಗ್ ಗೆ ಇಳಿದ ಜಡೇಜಾ, ಮೊದಲ ಎಸೆತವನ್ನು ವೈಡ್‌ ಹಾಕಿ ಒಂದು ರನ್ ನೀಡಿದರು. ನಂತರದ ಎಸೆತದಲ್ಲಿ ಸಿಂಗಲ್ ರನ್ ಸಿಕ್ಕಿತು. ನಂತರ 2 ಎಸೆತಗಳನ್ನು ಅಕ್ಷರ್‌ ಪಟೇಲ್‌ ಸಿಕ್ಸರ್‌ ಗೆ ಅಟ್ಟಿದರು. 4ನೇ ಎಸೆತದಲ್ಲಿ 2 ರನ್ ಪಡೆಯಲಾಯಿತು. ಐದನೇ ಎಸೆತವನ್ನು ಮತ್ತೆ ಪಟೇಲ್ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಚೆನ್ನೈ ತಂಡ ಸೋಲು ಕಾಣುವಂತಾಯಿತು. ಇದಕ್ಕೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈ ಪಂದ್ಯದಲ್ಲಿ ಶಿಖರ್‌ ಧವನ್‌ ಅಜೇಯ 101 ರನ್ ‌(58 ಎಸೆತ, 14 ಬೌಂಡರಿ, 1ಸಿಕ್ಸರ್‌) ಬಾರಿಸಿದರು. ಅಕ್ಷರ್‌ ಪಟೇಲ್‌ 21 ರನ್‌(5 ಎಸೆತ, 3 ಸಿಕ್ಸರ್‌) ಹೊಡೆದು, ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಪರಿಣಾಮ ದೆಹಲಿ ಗೆಲುವಿನ ಕೇಕೆ ಹಾಕಿತು. ಅಂತಿಮವಾಗಿ ಈ ಗೆಲುವಿನೊಂದಿಗೆ ದೆಹಲಿ ತಂಡ 5 ವಿಕೆಟ್‌ ಗಳ ಜಯ ಪಡೆದು ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕ ಏರಿತು.

Leave a Reply

Your email address will not be published. Required fields are marked *

You May Also Like

ಮೊದಲ 8 ಬೌಲ್ ಗೆ ತಾಳ್ಮೆ…ಆ ನಂತರ 9 ಬೌಲ್ ಗೆರೆ ದಾಟಿ ಹೋದವು!

ಅಬುಧಾಬಿ : ಭಾನುವಾರ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಚೇತರಿಕೆ ನೀಡುವುದರ ಮೂಲಕ ಭರ್ಜರಿ ಆಟ ಪ್ರದರ್ಶಿಸಿದ್ದಾರೆ.

ಸೇಡು ತೀರಿಸಿಕೊಳ್ಳುವುದರ ಮೂಲಕ ಗೆಲುವಿನ ಲಯ ಕಂಡುಕೊಂಡ ಚೆನ್ನೈ!

ದುಬೈ : ಆರ್ ಸಿಬಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎಂಟು ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಕೋಲ್ಕತ್ತಾ, ಬೆಂಗಳೂರು ತಂಡಗಳ ಹಿಂದಿನ ಇತಿಹಾಸ ಹೇಗಿದೆ?

ಬೆಂಗಳೂರು : ಪ್ರಸಕ್ತ ಸಾಲಿನ ಐಪಿಎಲ್ ಲೀಗ್ ನಲ್ಲಿ ಸೋಮವಾರ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ಬ್ಯಾಟ್ಸಮನ್ ಗಳ ನೆಚ್ಚಿನ ಮೈದಾನದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.

ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬಹುದಾದ ತಂಡ ಕೈಬಿಟ್ಟಿದ್ದಕ್ಕೆ ನಾಯಕ ಹೇಳಿದ್ದೇನು?

ದುಬೈ : ಪಂಜಾಬ್ ವಿರುದ್ಧ ಸುಲಭವಾಗಿ ಗೆಲ್ಲಬೇಕಾದ ಪಂದ್ಯವನ್ನು ಹೈದ್ರಾಬಾದ್ ಕೈ ಚೆಲ್ಲಿದೆ. ಹೀಗಾಗಿ ಟೀಕೆಗಳು ವ್ಯಕ್ತವಾಗುತ್ತಿವೆ.