ಬೆಂಗಳೂರು :  ನಟ ಚಿರಂಜೀವಿ ಸರ್ಜಾ ಅವರ 36ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಅವರ ಮಾವ ಹಾಗೂ ನಟ ಅರ್ಜುನ್ ಸರ್ಜಾ ಭಾವನಾತ್ಮಕ ಸಾಲುಗಳನ್ನು ಬರೆದು ಶುಭಾಶಯ ಕೋರಿದ್ದಾರೆ.

ಚಿರಂಜೀವಿ ಅವರ ಹುಟ್ಟು ಹಬ್ಬದ ಅಂಗವಾಗಿ ಸರ್ಜಾ ಅವರಿಗೆ ಸುದೀಪ್, ದರ್ಶನ್ ಸೇರಿದಂತೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ. ಅರ್ಜುನ್ ಸರ್ಜಾ ಅವರು ಚಿರಂಜೀವಿ ಸತ್ತ ನಂತರದ ನೋವಿನ ಬಗ್ಗೆ ಬರೆದುಕೊಂಡಿದ್ದಾರೆ. 

36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಸಂತಸದಿಂದ ಕುಣಿದು ಕುಪ್ಪಳಿಸಿದ್ದೆ. ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ. ಹುಟ್ಟು ಹಬ್ಬದ ದಿನದಂದು ನಾನು ಈ ರೀತಿಯ ಪದಗಳನ್ನು ಬರೆಯುತ್ತೇನೆಂದು ನನ್ನ ಹುಚ್ಚು ಕನಸುಗಳಲ್ಲಿಯೂ ಯೋಚಿಸಿರಲಿಲ್ಲ. ನನ್ನ ಸಂದೇಶದಲ್ಲಿ ಯಾವಾಗಲೂ ನೀನು ಜೊತೆಗಿರುತ್ತೀಯ ಮಗನೆ. ಲವ್ ಯು ಸೋ ಮಚ್ ಮೈ ಬೇಬಿ ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಗೆ ಹಲವು ಅಭಿಮಾನಿಗಳು ಕಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿ, ಶುಭಾಶಯ ತಿಳಿಸಿದ್ದಾರೆ.

ಕಿಚ್ಚ ಸುದೀಪ್ ಟ್ವೀಟ್ ಮಾಡಿ, ಅವನನ್ನು ಕಳೆದುಕೊಂಡ, ಅವನನ್ನು ತಿಳಿದಿದ್ದ ಹಾಗೂ ಪ್ರೀತಿಸಿದ್ದ ಎಲ್ಲರಿಂದಲೂ ಅವನು ತಪ್ಪಿಸಿಕೊಂಡಂತಾಗಿದೆ ಎಂದು ಬರೆದುಕೊಂಡಿದ್ದಾರೆ. ನಟ ದರ್ಶನ್,  ಚಿರು ಜೊತೆ ನಾಯಿ ಹಿಡಿದು ನಿಂತಿರುವ ಫೋಟೋ ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

You May Also Like

ಕಾಮಾಕ್ಷಿ ಮಂತ್ರದೊಂದಿಗೆ ಹಬ್ಬದ ಶುಭಾಶಯ ತಿಳಿಸಿದ ರಮ್ಯಾ!

ಬೆಂಗಳೂರು : ನಟಿ ರಮ್ಯಾ ಅವರು ದಸರಾ ಹಬ್ಬದ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ನೇಹಾಗೆ ತಾಯಿಯಾದ ಸಂಭ್ರಮ!

ವಾಷಿಂಗ್ಟನ್: ಬಿಗ್ ಬಾಸ್ ಸೀಸನ್ 3 ಸ್ಪರ್ಧಿ ನೇಹಾ ಗೌಡ ತಾಯಿಯಾದ ಸಂಭ್ರಮದಲ್ಲಿದ್ದು, ಇತ್ತೀಚೆಗಷ್ಟೇ ಹೆಣ್ಣು…

ಟಾಲಿವುಡ್ ನ ಈ ಪ್ರಿನ್ಸ್ ಗಳಿಗೆ ಇಂದು ಸುದಿನವಂತೆ! ಏಕೆ ಗೊತ್ತಾ?

ಹೈದರಾಬಾದ್ : ನಟ ಮಹೇಶ್ ಬಾಬು ಹಾಗೂ ಸ್ವೀಟಿ ಅನುಷ್ಕಾ ಶೆಟ್ಟಿ ಅವರಿಗೆ ಇಂದು ವಿಶೇಷ ದಿನವಂತೆ. ಈ ನಿಟ್ಟಿನಲ್ಲಿ ಇಬ್ಬರೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಬಹು ದಿನಗಳ ನಂತರ ಚಂದನವನಕ್ಕೆ ಪ್ರಭುದೇವ್ ಕಾಲಿಡುವರೇ?

ಬೆಂಗಳೂರು : ಶಿವಣ್ಣ ಅವರೊಂದಿಗೆ ಪ್ರಭುದೇವ್ ಚಂದನವನದಲ್ಲಿ ಸದ್ದು ಮಾಡಲು ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.