ಪಾಣಿಪತ್ : ಪಾಪಿಯೊಬ್ಬ ಪತ್ನಿಯನ್ನೇ ಶೌಚಾಲಯದಲ್ಲಿ ಕೂಡಿ ಹಾಕಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.  

ಹರಿಯಾಣದ ಪಾಣಿಪತ್ ಜಿಲ್ಲೆಯ ರಿಶ್ಬುರ್ ಗ್ರಾಮದಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಪಾಪಿ ಪತಿ ತನ್ನ ಪತ್ನಿಯನ್ನು ಬರೋಬ್ಬರಿ ಒಂದು ವರ್ಷದಿಂದ ಶೌಚಾಲಯದಲ್ಲಿ ಕೂಡಿ ಹಾಕಿದ್ದ. ಅಲ್ಲದೇ, ಕಳೆದ ಒಂದು ವರ್ಷದಿಂದ ಪತ್ನಿಗೆ ತಿನ್ನಲು ಏನೂ ನೀಡಿರಲಿಲ್ಲ. ಸದ್ಯ ಮಹಿಳೆಯನ್ನು ಮಹಿಳೆಯರ ರಕ್ಷಣೆ ಮತ್ತು ಬಾಲ್ಯವಿವಾಹ ತಡೆ ಅಧಿಕಾರಿ ಹಾಗೂ ಸಿಬ್ಬಂದಿ ರಕ್ಷಿಸಿದ್ದಾರೆ.

ಈ ಮಹಿಳೆ ಮಾನಸಿಕ ಅಸ್ವಸ್ಥತೆ ಎಂದು ಹೇಳುತ್ತಿದ್ದಾರೆ. ಆದರೆ, ಅದು ಸುಳ್ಳು. ಮಹಿಳೆಯನ್ನು ಮಾತನಾಡಿಸಿದಾಗ ಈ ರೀತಿ ಅನ್ನಿಸಲಿಲ್ಲ. ಶೌಚಾಲಯದೊಳಗಿದ್ದ ಮಹಿಳೆಯನ್ನು ಹೊರ ತಂದು, ತಲೆಗೂದಲು ತೊಳೆದು ಪೊಲೀಸ್ ಗೆ ದೂರು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯ ಪತಿ, ಆಕೆ ಮಾನಸಿಕ ಅಸ್ವಸ್ಥತೆ, ಹೊರಗೆ ಕುಳಿತುಕೊಳ್ಳು ಎಂದು ನಾವು ಹೇಳಿದರೂ ಆಕೆ ಕೇಳುತ್ತಿರಲಿಲ್ಲ. ವೈದ್ಯರ ಬಳಿಗೆ ಹೋಗಿ ತೋರಿಸಿದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Leave a Reply

Your email address will not be published. Required fields are marked *

You May Also Like

ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಚೀನಾಕ್ಕೆ ನೀಡುತ್ತಿದೆ ಭಾರತ?

ಲಡಾಖ್‌: ಲಡಾಖ್‌ನಲ್ಲಿ ಚೀನಾ ಸೇನೆಯಿಂದ ಗಡಿ ಕ್ಯಾತೆ ಮುಂದುವರೆದ ನಡುವೆಯೇ ಭಾರತ ಯುದ್ಧಕ್ಕೆ ಸಿದ್ಧ ಎಂಬ…

ದೇಶದಲ್ಲಿ ಹೆಚ್ಚುತ್ತಿದೆ ಕೊರೊನಾ ಆತಂಕ..!

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿ ದಿನ ದಾಖಲೆಯ…

ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಳ – ಗಡಿ ಬಂದ್!!

ಜೈಪುರ: ಮಹಾಮಾರಿಯ ಅಟ್ಟಹಾಸ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಸ್ಥಾನದ ಗಡಿ ಬಂದ್…

ರೈಲು ಹಳಿ ದುರಂತ: 16 ಸಾವು

ಮಹಾರಾಷ್ಟ್ರ:ನಿನ್ನೆಯಷ್ಟೆ ವಿಶಾಖಪಟ್ಟಣ ದುರಂತದ ಬೆನ್ನಲ್ಲೆ ಇಂದು ಔರಂಗಾಬಾದ್ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿದೆ. ಔರಂಗಾಬಾದ್ ರೈಲು…