ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷಕ್ಕಿಂತಲೂ ಈ ವರ್ಷ ಶ್ರೀಮಂತರಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಾಗಿದೆ. ಈ ವರ್ಷ ಅವರ ಆಸ್ತಿಯ ಮೌಲ್ಯ ರೂ. 36 ಲಕ್ಷ ಹೆಚ್ಚಳವಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಅವರ ವಾರ್ಷಿಕ ಆಸ್ತಿ ವಿವರವನ್ನು ಕಾರ್ಯಾಲಯ ಸ್ವಯಂ ಪ್ರೇರಣೆಯಿಂದ ಪ್ರಕಟಿಸಿದೆ. ಈ ವರದಿಯಲ್ಲಿ 2020ರ ಜೂ. 30ರ ವರೆಗಿನ ಮಾಹಿತಿ ಕುರಿತು ವಿವರಣೆ ನೀಡಲಾಗಿದೆ.
ಬ್ಯಾಂಕ್‌ ನಲ್ಲಿ ಹೂಡಿಕೆ ಮಾಡಿರುವುದು ಮತ್ತು ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ಸಿಕ್ಕಿರುವ ಕಾರಣ ಆಸ್ತಿಯ ಮೌಲ್ಯ ಏರಿಕೆಯಾಗಿದೆ. ಪ್ರಧಾನಿ ಮೋದಿ ಯಾವುದೇ ಸಾಲ ತೆಗೆದುಕೊಂಡಿಲ್ಲ ಮತ್ತು ಅವರ ಹೆಸರಿನಲ್ಲಿ ಯಾವುದೇ ವಾಹನ ಇಲ್ಲ.

2020ರ ಜೂನ್‌ 30ರ ಸಂದರ್ಭದಲ್ಲಿ ಮೋದಿಯವರ ಬಳಿ ರೂ. 31,450 ಇತ್ತು. ಗಾಂಧಿನಗರದ ಎಸ್ ಬಿಐ ಬ್ರಾಂಚ್‌ ನಲ್ಲಿರುವ ಉಳಿತಾಯ ಖಾತೆಯಲ್ಲಿ ರೂ. 3,38,173 ಹಣ ಇದೆ. ಕಳೆದ ವರ್ಷ ಇದು ಈ ಬ್ಯಾಂಕ್ ಖಾತೆಯಲ್ಲಿ ರೂ. 4,143 ಇತ್ತು. ಈ ಬ್ಯಾಂಕಿನಲ್ಲಿ ಎಫ್‌ ಡಿಆರ್‌ ಮತ್ತು ಎಂಒಡಿ ಬ್ಯಾಲೆನ್ಸ್‌ ರೂ. 1,60,28,039 ಇದೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು ರೂ. 1,27,81,574 ಇತ್ತು. 2019 ರ ಲೋಕಸಭಾ ಚುನಾವಣೆಯ ಅಫಿಡವಿಟ್‌ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾಹಿತಿಯನ್ನು ಘೋಷಿಸಿದ್ದರು.

ಅಷ್ಟೇ ಅಲ್ಲದೇ, ಎಲ್ ಅಂಡ್ ಟಿ ಇನ್ಫ್ರಾಿಸ್ಟ್ರಕ್ಚರ್ ನಲ್ಲಿ ರೂ. 20 ಸಾವಿರ ಹೂಡಿಕೆ ಮಾಡಿದ್ದಾರೆ. ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಅಡಿ ರೂ. 5,18,235 ಹೂಡಿಕೆ ಮಾಡಿದ್ದಾರೆ. ಅಲ್ಲದೇ, ರೂ. 1,59,281 ಮೌಲ್ಯದ ಎಲ್ ಐಸಿ ಪ್ರೀಮಿಯಂ ಕಟ್ಟಿದ್ದಾರೆ. ಮೋದಿ ಅವರ ಬಳಿ ನಾಲ್ಕು ಚಿನ್ನದ ಉಂಗುರಗಳಿವೆ. ಅವುಗಳ ಮೌಲ್ಯ ರೂ. 1,51,875 ಆಗಿದೆ. ಪ್ರಧಾನಿ ಅವರು, ರೂ. 1,30,488 ಪಾವತಿಸಿ, ವಸತಿ ಕಟ್ಟಡವೊಂದನ್ನು ಖರೀದಿಸಿದ್ದರು. ಈ ಭೂಮಿಯ ಮೇಲೆ ಸದ್ಯ ರೂ. 2,47,208 ಹೂಡಿಕೆ ಮಾಡಿದ್ದಾರೆ. ಸದ್ಯ ಈ ಮಾರುಕಟ್ಟೆಯ ಬೆಲೆ ರೂ. 1.1 ಕೋಟಿ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಸರ್ಕಾರ ಗಂಭೀರ ನಿರ್ಧಾರ ತೆಗೆದುಕೊಳ್ಳದಿದ್ರೆ ಜನ ಆಸ್ಪತ್ರೆಗಳಲ್ಲಿ ಸಾವೀಗೀಡಾಗಬೇಕಾದೀತು : ಶಾಸಕ ಎಚ್.ಕೆ.ಪಾಟೀಲ್

ರಾಜ್ಯದಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ನ ಅಭಾವಿದೆ. ಆಕ್ಸಿಜನ್ ಕುರಿತಂತೆ ಗಂಭೀರವಾದ, ದೃಢವಾದ ತಕ್ಷಣದ ಹೆಜ್ಜೆಗಳನ್ನಿಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಬಾರೀ ಸಂಖ್ಯೆಯಲ್ಲಿ ಸಾವೀಗೀಡಾಗಬೇಕಾದ ಪ್ರಸಂಗ ಬಂದೀತು ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಪಿಯುಸಿ ಫಲಿತಾಂಶ ದಿನಾಂಕ ತಿಳಿಸಿದ ಸಚಿವ ಸುರೇಶ್ ಕುಮಾರ್

ಬೆಂಗಳೂರು: ಇಂದು ಪಿಯುಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ…

FasTag : NHAI ನಿಯಮದಲ್ಲಿ ಬದಲಾವಣೆ; Minimum ಬಾಲೆನ್ಸ್ ಬಗ್ಗೆ ಇನ್ನು ಚಿಂತೆ ಬಿಟ್ಟು ಬಿಡಿ

ಎಲ್ಲಾ ವಾಹನಗಳಿಗೆ ಫೆ 15ರ ಳಗೆ ಫ್ಯಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ಆದರೆ, ಫಾಸ್ಟ್ ಟ್ಯಾಗ್ ನಲ್ಲಿ ಮಿನಿಮಮ್ ಬಾಲೆನ್ಸ್ ಉಳಿಸಿಕೊಳ್ಳುವ ಚಿಂತೆಯಿಂದ ಈಗ ಮುಕ್ತಿ ಸಿಕ್ಕಿದೆ. ಫಾಸ್ಟ್ ಟ್ಯಾಗ್ ನಲ್ಲಿ ಮಿನಿಮಮ್ ಬಾಲೆನ್ಸ್ ಉಳಿಸುವ ಅಗತ್ಯ ಇಲ್ಲ ಎಂದು, ಎನ್‌ಎಚ್‌ಎಐ (NHAI ) ಹೇಳಿದೆ. ಈ ನಿಟ್ಟಿನಲ್ಲಿ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಆದರೆ, ಈ ನಿಯಮವು ಕಾರು, ಜೀಪ್ ಅಥವಾ ವ್ಯಾನ್ ಗೆ ಮಾತ್ರ ಅನ್ವಯವಾಗಲಿದೆ. ವಾಣಿಜ್ಯ ವಾಹನಗಳಿಗೆ ಕನಿಷ್ಠ ಬಾಲೆನ್ಸ್ ಉಳಿಸಿಕೊಳ್ಳುವುದು ಈಗಲೂ ಕಡ್ಡಾಯವಾಗಿದೆ.