ಲಕ್ಷ್ಮೇಶ್ವರ: ಮರಳು ನೀತಿ ಅನ್ವಯ ಮರಳು ಗಣಿಗಾರಿಕೆಗೆ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ನೀಡಲಾಗಿದೆ.  ಆದರೆ ಮರಳು ಗುತ್ತಿಗೆ ಪಡೆದ ಗುತ್ತಿಗೆದಾರರು ಎಗ್ಗಿಲ್ಲದೇ ಸಕ್ರಮದ ಹೆಸರಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಇದಕ್ಕೆ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಅವರ ಪೋಷಣೆಯೂ ಇದೆ ಎನ್ನುವ ಮಾತುಗಳು ಕೇಳಲಾರಂಭಿಸಿವೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಕೊಕ್ಕರಗುಂದಿ ಬೂದಿಹಾಳ ಗ್ರಾಮದಲ್ಲಿರುವ ಕಲ್ಪವೃಕ್ಷ ಮರಳು  ಗುತ್ತಿಗೆ ಪಾಯಿಂಟ್ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ನೆಲ ಜಲದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ ಇವೆರಡರ ಮೇಲೆ ಹಗಲು ದರೋಡೆ ನಡೆದಾಗ ಆಡಳಿತ ವರ್ಗ ಕಣ್ಣಿದ್ದು ಕುರುಡರಾಗುತ್ತಿರುವುದು ವಿಪರ್ಯಾಸ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಿಲಾಫಿಯಿಂದಾಗಿ ಸಕ್ರಮದ ಹೆಸರಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆದಿರೋ ಆರೋಪ ಗದಗ ಜಿಲ್ಲೆಯಲ್ಲಿ ಕೇಳಿ ಬಂದಿದೆ.   

ಲಕ್ಷ್ಮೇಶ್ವರ ತಾಲೂಕಿನ ಕೊಕ್ಕರಗುಂದಿ ಬೂದಿಹಾಳ ಗ್ರಾಮದಲ್ಲಿ ಸಕ್ರಮ ಮರಳು ಗಣಿಗಾರಿಕೆ ಹೆಸರಲ್ಲಿ ಅಕ್ರಮ ಮರಳು ದಂಧೆ ನಡೆಯತ್ತಿದ್ದು, ಹಗಲು, ರಾತ್ರಿ ಎನ್ನದೆ ಮರಳು ತುಂಬಿದ ಟಿಪ್ಪರ್ ಲಾರಿಗಳು ಓಡಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.

ಅತಿಯಾದ ಮಳೆಯಿಂದಾಗಿ ಕೆಲ ತಿಂಗಳುಗಳ ಕಾಲ ಮರಳು ಸಾಗಾಣಿಕೆ ನಿಂತಿತ್ತು. ಇದೀಗ ನದಿಯಲ್ಲಿ ನೀರು ತಗ್ಗುತ್ತಿದ್ದಂತೆ ಮರಳು ಗಣಿಗಾರಿಕೆ ಜೋರಾಗಿ ನಡೆಯುತ್ತಿದೆ. ಮರಳು ಗಣಿಗಾರಿಕೆ ಪಾಯಿಂಟ್ ನಲ್ಲಿ ಸಿಸಿಟಿವಿ, ಜಿಪಿಎಸ್ ಅಳವಡಿಸುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜೊತೆಗೆ ಮರಳು ಸಾಗಾಣಿಕೆಗೆ ಪಾಸ್ ಪಡೆದ ವಾಹನ ಮೂಲಕ ಮರಳು ಸಾಗಾಣಿಕೆ ಆಗಬೇಕು. ಆದರೆ, ಮರಳು ಗುತ್ತಿಗೆದಾರರು ನಿಯಮ ಉಲ್ಲಂಘಿಸಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.    

ಕಲ್ಪವೃಕ್ಷ ಮರಳು ಗುತ್ತಿಗೆ ಪಾಯಿಂಟ್ ನಲ್ಲಿ ಸರ್ಕಾರದ ಯಾವುದೇ ನಿಯಮ ಪಾಲನೆಯಾಗಿಲ್ಲ. ಆದಾಗ್ಯೂ ಗಣಿ ಇಲಾಖೆ ಅನುಮತಿ ಕೊಟ್ಟಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಇನ್ನು ತಾಲೂಕಿನಲ್ಲಿ ಈ ಅಕ್ರಮ ಮರಳು ದಂಧೆಗೆ ಶಾಸಕ ರಾಮಣ್ಣ ಲಮಾಣಿ ಅವರ ಪೋಷಣೆ ಇದೆಯೇ? ಎನ್ನುವ ಅನುಮಾನ ಜನ ವ್ಯಕ್ತ ಪಡಿಸುತ್ತಿದ್ದಾರೆ. ಕಲ್ಪವೃಕ್ಷ ಮರಳು ಗುತ್ತಿಗೆ ಪಾಯಿಂಟ್ ಗೆ ಇಲಾಖೆ ನಿಗದಿಪಡಿಸಿದ ಯಾವುದೇ ನಿಯಮಗಳನ್ನು ಪಾಲನೆ ಮಾಡದಿದ್ದರೂ ಶಾಸಕ ರಾಮಣ್ಣ ಲಮಾಣಿ ಅವರೆ ತಮ್ಮ ಪ್ರಭಾವ ಬಳಸಿ ಮರಳು ಗಣಿಗಾರಿಕೆಗೆ ಅನುಮತಿ ಕೊಡಿಸಿದ್ದಾರೆ ಎಂಬ ಮಾತುಗಳು ತಾಲೂಕಿನಾದ್ಯಂತ ಚಾಲ್ತಿ ಇದೆ.

ಕ್ರಮ ಕೈಗೊಳ್ಳುತ್ತೇನೆ ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿ ಮರಳು ಗಣಿಗಾರಿಕೆ ಪಾಯಿಂಟ್ ವೀಕ್ಷಣೆ ಮಾಡಿ, ಒಂದು ವೇಳೆ ಇಲಾಖೆ ನಿಯಮ ಪಾಲಿಸದಿರುವುದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇನೆ. -ರಾಜೇಶ್, ಗಣಿ ಇಲಾಖೆ ಅಧಿಕಾರಿ.

ಸರ್ಕಾರ ನಿಗದಿಪಡಿಸಿದ ದರಕ್ಕಿಂತಲು ಹೆಚ್ಚಿನ ದರಕ್ಕೆ ಮರಳು ಮಾರಾಟ ಮಾಡುತ್ತಿದ್ದು, ಇದರಿಂದ ಮನೆ ಕಟ್ಟುವ ಕನಸು ಕಟ್ಟಿಕೊಂಡ ಜನಸಸಾಮಾನ್ಯರ ಪರಿಸ್ಥಿತಿ ಹೇಗೆ ಎನ್ನುವ ಪ್ರಶ್ನೆಯಾಗಿದೆ. ಇನ್ನು ಇಲಾಖೆ ಸೂಚಿಸಿದ್ದಕ್ಕಿಂತ ಆಳವಾಗಿ ಮರಳು ಗಣಿಗಾರಿಕೆ ಮಾಡುವ ಮೂಲಕ ಅದರಲ್ಲಿಯೂ ನಿಯಮ ಉಲ್ಲಂಘಿಸಿದ್ದಾರೆ.

ಪ್ರಭಾವಿಗಳೇ ಮರಳು ಗಣಿಗಾರಿಕೆ ಗುತ್ತಿಗೆ ಪಡೆದಿರುವುದರಿಂದ ಜನಪ್ರತಿನಿಧಿಗಳು, ಅಧಿಕಾರಿಗಳ ಮೇಲೆ ಮರಳು ಲಾಭಿಯಿಂದ ಅಕ್ರಮಕ್ಕೆ ಬ್ರೇಕ್ ಬೀಳುತ್ತಿಲ್ಲ ಎನ್ನುವದು ಸಾರ್ವಜನಿಕರ ಮಾತು. ಇನ್ನಾದರೂ ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕಿದೆ.

Leave a Reply

Your email address will not be published. Required fields are marked *

You May Also Like

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್  ನಿಧನ

ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ.ಅವರು  ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು…

ಸಿಂದಗಿ ಶಾಸಕ ಎಂ.ಸಿ. ಮನಗೂಳಿ ವಿಧಿವಶ

ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಬನ್ನೇರುಘಟ್ಟ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ. (85) ತಡರಾತ್ರಿ ನಿಧನರಾಗಿದ್ದಾರೆ.

ಸಿಬಿಎಸ್ಇ 12ನೇ ತರಗತಿ ಪರೀಕ್ಷೆ ರದ್ದು ಕೋರಿ ಅರ್ಜಿ: ವಿಚಾರಣೆ ಮುಂದೂಡಿದ ಸುಪ್ರೀಂ

ಇಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಬಿಜೆಪಿ ಸರಕಾರ ಬರಲು ಶ್ರಮಿಸಿ: ಮಾಜಿ ಶಾಸಕ‌ ಪ್ರತಾಪಗೌಡ ಕರೆ

ಮಸ್ಕಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮತ್ತೆ ಅಧಿಕಾರಕ್ಕೆ‌‌ ಬರುವುದಕ್ಕೆ ಕಾರ್ಯಕರ್ತರು ಶ್ರಮಿಸಬೇಕೆಂದು‌ ಮಾಜಿ‌‌…