ಕೋಲ್ಕತಾ : ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಗುರುವಾರ ಹಿಂಸಾತ್ಮಕ ಘಷರ್ಣೆ ನಡೆದಿರುವ ಘಟನೆ ಪಶ್ಚಿಮ ಬಂಗಳಾದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರಿಂದ ಬಂದೂಕು ವಶಪಡಿಸಿಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ್ದ ಬಿಜೆಪಿ ಕಾರ್ಯಕರ್ತರು, ಪಶ್ಚಿಮ ಬಂಗಾಳ ಸಚಿವಾಲಯದ ಹತ್ತಿರ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದರು.

ಈ ಪ್ರತಿಭಟನೆಗೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪೊಲೀಸರು, ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹೌರಾದ ಸಂತಗಾಚಿಯಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಬಿಜೆಪಿ ಕಾರ್ಯಕರ್ತರ ಮೇಲೆ ಅಶ್ರುವಾಯು, ನೀರಿನ ಫಿರಂಗಿಯನ್ನು ಬಳಸಿದ್ದಾರೆ. ಇದಕ್ಕೆ ಜಗ್ಗದ ಕೇಸರಿ ಪಕ್ಷದ ಬೆಂಬಲಿಗರು ಬಂಗಾಳ ಪೊಲೀಸರೊಂದಿಗೆ ಘರ್ಷಣೆಗಿಳಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಮತ್ತು ಸಂಸದ ಜ್ಯೋತಿರ್ಮೊಯ್ ಸಿಂಗ್ ಮಹತೋ ಅವರು ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಹೊಸ ಕಾರು ಖರೀದಿದಾರರಿಗೆ ಎಸ್ ಬಿಐ ನಿಂದ ರ್ಜರರಿ ಗುಡ್ ನ್ಯೂಸ್

ಭಾರತೀಯ ಕಾರು ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಸಾಲ ಲಭ್ಯತೆಯಿಂದ ಮಧ್ಯಮ ರ್ಗೆದ ಖರೀದಿ ಸಾರ್ಥ್ಯಕ ಹೆಚ್ಚಿದೆ.

ಮಹದಾಯಿ ವಿಚಾರ : ಮತ್ತೆ ಗೋವಾ ಕ್ಯಾತೆ ಮಹಾದಾಯಿ ಯೋಜನೆಗೆ ಸರ್ಕಾರದ ವಿಳಂಭ ಧೋರಣೆಗೆ ಆಕ್ರೋಶ

ಮಹಾದಾಯಿ ವಿಚಾರದಲ್ಲಿ ಮತ್ತೆ ಗೋವಾ ಕ್ಯಾತೆ ತೆಗೆದಿದೆ. ಇದರಿಂದಾಗಿ ಮಹದಾಯಿ ಹೋರಾಟದ ನಾಡಲ್ಲಿ ಮತ್ತೆ ಹೋರಾಟಗಾರರು ಗೋವಾ ನಡೆಗೆ ಆಕ್ರೊಶ ವ್ಯಕ್ತಪಡಿಸಿದ್ದಾರೆ.

‘2021ಕ್ಕೂ ಮುಂಚೆ ದೇಶದಲ್ಲಿ ಕೋರೊನಾ ಲಸಿಕೆ ಅಸಾಧ್ಯ’

ನವದೆಹಲಿ: ‘2021ರವರೆಗೂ ದೇಶದಲ್ಲಿ ಕೋವಿಡ್ ಲಸಿಕೆ ತಯಾರಿಸುವುದು ಅಸಾಧ್ಯ’ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ…

ರಾಜ್ಯಕ್ಕೆ ಬರುವ ಯಾತ್ರಿಗಳಿಗೆ ಮಾರ್ಗಸೂಚಿ ಜಾರಿ

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ, ಈ ರಾಜ್ಯಗಳಿಂದ ಬರುವ ಜನರು ನೆಗೆಟಿವ್ ಆರ್ಟಿ-ಪಿಸಿಆರ್ ಪ್ರಮಾಣಪತ್ರವನ್ನು ಕರ್ನಾಟಕ ಕಡ್ಡಾಯಗೊಳಿಸಿದೆ.