ಮುಂಡರಗಿ: ಜಿಎಚ್ಎಚ್ ಆಗ್ರೋ ಕೇಂದ್ರದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕೇಂದ್ರ ಜಪ್ತಿ ಮಾಡಿದ ಘಟನೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

ರಸಗೊಬ್ಬರ ವಲ್ಲದೆ ದಾಸ್ತನನ್ನು ರಸಗೊಬ್ಬರ ವೆಂದು ಮಾರಾಟ ಮಾಡಲು ದಾಸ್ತಾನು ಮಾಡಿದ್ದನ್ನು ಜಪ್ತಿ ಮಾಡಲಾಗಿದೆ. ಬೆಳಗಾವಿ ವಿಭಾಗ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ನೇತೃತ್ವದಲ್ಲಿ ಬೆಳಗಾವಿ ಜಾಗೃತ ಕೋಶದ ಉಪನಿರ್ದೇಶಕ ವೆಂಕಟರಮಣಪ್ಪ, ಬೆಳಗಾವಿ ವಿಭಾಗ ವಿಭಾಗ ಜಾಗೃತ ಕೋಶದ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ಕಿಣಗಿ, ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಸಂತೋಷ್ ಪಟ್ಟದಕಲ್, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್ ತುಂಬಲಳ ನೇತೃತ್ವದ ತಂಡ ಅನಿರೀಕ್ಷಿತವಾಗಿ ಇಂದು ಜಿ.ಎಚ್.ಎಚ್ ಆಗ್ರೂ  ಕೇಂದ್ರದ ಮೇಲೆ ದಾಳಿ ನಡೆಸಿತು.

ಈ ವೇಳೆ  ಕೇಂದ್ರದಲ್ಲಿ ಅನಧಿಕೃತವಾಗಿ ರಸಗೊಬ್ಬರ ವಲ್ಲದೆ ದಾಸ್ತನನ್ನು ರಸಗೊಬ್ಬರವೆಂದು ಮಾರಾಟ ಮಾಡಲು ದಾಸ್ತಾನು ಮಾಡಿದ್ದನ್ನು ಜಪ್ತಿ ಮಾಡಿದರು. ರಸಗೊಬ್ಬರ ನಿಯಂತ್ರಣ  ಆಜ್ಞೆ  1985 ರ  ನಿಯಮ  2 (ಹೆಚ್ )ಹಾಗೂ ನಿಯಮ 19 (ಸಿ) (6)ಉಲ್ಲಂಘನೆ ಮಾಡಿರುವುದು ದೃಢ ಪಟ್ಟಿರುತ್ತದೆ. 

ಮುಂದುವರೆದು ನಿಯಮ 28 (ಡಿ)ಅಡಿಯಲ್ಲಿ ಕೃಷಿ ಮಳಿಗೆಯ ರಸಗೊಬ್ಬರ ದಾಸ್ತಾನು ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಗದಗ ಇವರಿಗೆ ಅಗತ್ಯ ವಸ್ತುಗಳ ಕಾಯ್ದೆ 1955 ನಿಯಮ 6A ರಂತೆ ಗಮನಕ್ಕೆ ತರಲಾಗಿದ್ದು ಅಗತ್ಯ ವಸ್ತುಗಳ ಕಾಯ್ದೆ 1955 ರ ಹಾದಿಯಲ್ಲಿ ಅಪರಾಧಿಗಳಿಗೆ ಮೂರು ರಿಂದ ಏಳು ವರ್ಷದವರೆಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಅನಕ್ಷರಸ್ಥರಿಗೆ ಜೀವನ ಕೌಶಲ್ಯ ಶಿಕ್ಷಣ ಮುಂದುವರಿಕೆ- ಎನ್.ಎಚ್.ನಾಗೂರ

ಉತ್ತರಪ್ರಭ ಸುದ್ದಿ ಆಲಮಟ್ಟಿ: ಕೇಂದ್ರ ಸರಕಾರ ಪುರಸ್ಕೃತ ಎನ್.ಐ.ಎಲ್.ಪಿ. ನವಭಾರತ ಸಾಕ್ಷರತಾ ಕಾರ್ಯಕ್ರಮ ಯೋಜನೆಯಡಿ ರಾಜ್ಯದ…

ಮತ್ತೆ ಕೇಂದ್ರದಿಂದ ಪಡಿತರರಿಗೆ ಶುಭ ಸುದ್ದಿ

ಕೊರೋನಾ ಹಿನ್ನಲೆಯಲ್ಲಿ ಪಿಎಂ ಗರಿಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪರಿತರ ಚೀಟಿ ಹೊಂದಿದವರಿಗೆ 5 ಕೆ.ಜಿ ಅಕ್ಕಿ ವಿತರಸಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜುಗೌಡ ತಿಳಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಚುರುಕು: 14 ಕಣ್ಗಾವಲು ಆರೋಗ್ಯ ತಂಡಗಳ ರಚನೆ

ಜಿಲ್ಲಾ ಮಟ್ಟದ 14 ಕಣ್ಗಾವಲು ಸಾರ್ವಜನಿಕ ಆರೋಗ್ಯ ಸುರಕ್ಷತಾ ತಂಡಗಳ ರಚಿಸಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಆದೇಶ ಹೊರಡಿಸಿದ್ದಾರೆ.

ಲಾಟರಿಯಿಂದ ಕಾಂಗ್ರೆಸ್ ಬೆಂಬಲಿತರಿಗೆ ಒಲಿದು ಬಂದ ಕುರ್ಚಿ!

ಚಾಮರಾಜನಗರ – ತಾಲೂಕಿನ ಜ್ಯೋತಿಗೌಡನಪುರ ಗ್ರಾಪಂನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರಿಗೆ ಲಾಟರಿ ಮೂಲಕ ಒಲಿದು ಬಂದಿದೆ.