ನವದೆಹಲಿ : ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಒಂದೇ ದಿನ ದೇಶದಲ್ಲಿ 88,600 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಸೋಂಕಿತರ ಸಂಖ್ಯೆ 9,56,402ಕ್ಕೆ ಏರಿಕೆ ಕಂಡಿದೆ. 

ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 1,124 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 94,503ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ 59,92,533 ಪ್ರಕರಣಗಳು ವರದಿಯಾಗಿವೆ. ಸೆ. 2 ರಿಂದ ಪ್ರತಿ ನಿತ್ಯ ದೇಶದಲ್ಲಿ ಒಂದು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ. 

ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಪ್ರಮಾಣ ಶೇ. 6.3ರಿಂದ ಶೇ. 8.9ಕ್ಕೆ ಏರಿಕೆ ಕಂಡಿದೆ. ಈ ಆಘಾತಕಾರಿ ಅಂಶವನ್ನು ಆರೋಗ್ಯ ಸಚಿವಾಲಯದ ಅಂಕಿ – ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ. ಇನ್ನು ಗುಣಮುಖ ಪ್ರಮಾಣ ಶೇ. 82.1ರಷ್ಟಿದೆ.

ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದಲೇ ಅತ್ಯಧಿಕ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಐದು ರಾಜ್ಯಗಳಲ್ಲಿಯೇ ನಿನನೆ ಒಂದೇ ದಿನ 49,176 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಪ್ರಕರಣಗಳಲ್ಲಿ ಶೇ. 55ರಷ್ಟು ಪಾಲು ಈ ಐದು ರಾಜ್ಯಗಳದ್ದಾಗಿದೆ.

Leave a Reply

Your email address will not be published. Required fields are marked *

You May Also Like

6 ತಿಂಗಳ ನಂತರವೂ ಕೇಂದ್ರಕ್ಕೆ ಗೊಂದಲವೇ?: ಕವಾಟವಿರುವ ಎನ್-95 ಮಾಸ್ಕ್ ಅಪಾಯಕಾರಿ’

ಕೇಂದ್ರ ಆರೋಗ್ಯ ಸೇವೆಗಳ ಡೈರೆಕ್ಟರ್ ಜನರಲ್ ಹೊರಡಿಸಿದ ಸುತ್ತೋಲೆ ಈಗ ಜನರನ್ನು ಗೊಂದಲಕ್ಕೆ ತಳ್ಳಿದೆ.ಸದ್ಯ ಬಳಕೆಯಲ್ಲಿರುವ ಕವಾಟ ಅಥವಾ ರಂಧ್ರಗಳಿರುವ ಎನ್-95 ಮಾಸ್ಕ್ ಸೋಂಕು ತಡೆಯಲಾರವು.

ರೈತರನ್ನು ರಾಸ್ಕಲ್ ಎಂದ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಮಾನ ಉಳಿಸಿಕೊಳ್ಳಿ: ಸಿದ್ದರಾಮಯ್ಯ

ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ. ಅವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸುವಂತೆ‌‌ ಮಾಡಿ, ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು

ಗದಗ ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 88…

ಪೊಲೀಸ್ ಸಿಬ್ಬಂದಿಗೂ ಕೊರೊನಾ – ಹಲವು ಠಾಣೆಗಳು ಸೀಲ್ ಡೌನ್!

ಬೆಂಗಳೂರು:  ನಗರದಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಮಹಾಮಾರಿ ಬೆನ್ನು ಬಿದ್ದಿರುವುದಕ್ಕೆ ಇಲಾಖೆ ವಿಷಾದ ವ್ಯಕ್ತಪಡಿಸುತ್ತಿದೆ. ಸಶಸ್ತ್ರ…