ನವದೆಹಲಿ : ಬಾಲಿವುಡ್ ನಟ ಅಜಯ್ ದೇವಗನ್ ಅವರ ಸಹೋದರ ಹಾಗೂ ನಿರ್ದೇಶಕ ಅನಿಲ್ ದೇವಗನ್ (45) ನಿಧನರಾಗಿದ್ದಾರೆ.

ನಟ ಅಜಯ್ ದೇವಗನ್ ಅವರು ಈ ಕುರಿತು ಟ್ವೀಟ್ ಮಾಡಿ ತಿಳಿಸಿದಾರೆ. ಕಳೆದ ರಾತ್ರಿಯೇ ನನ್ನ ಸಹೋದರ ಅನಿಲ್ ದೇವಗನ್ ಅವರನ್ನು ನಾನು ಕಳೆದುಕೊಂಡಿದ್ದೇನೆ. ಅವರ ಅಕಾಲಿಕ ನಿಧನ ನಮ್ಮ ಕುಟುಂಬದ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿದೆ. ಫಿಲ್ಮ್ ಕಂಪನಿ ಎಡಿಎಫ್ ಎಫ್ ಮತ್ತು ನಾನು ಅವರ ಪ್ರೀತಿಯ ಉಪಸ್ಥಿತಿಯನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಅನಿಲ್ ಅವರು ಸಹೋದರನಿಗಾಗಿ ರಾಜು ಚಾಚಾ ಹಾಗೂ ಬ್ಲಾಕ್ ಮೇಲ್ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರ ತಂದೆ ಬಾಲಿವುಡ್ ಸ್ಟಂಟ್ ನಿರ್ದೇಶನದ ವೀರು ದೇವಗನ್ ಅವರು ಕೂಡ ಕಳೆದ ವರ್ಷವೇ ನಿಧನರಾಗಿದ್ದರು. ಅಭಿಮಾನಿಗಳು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನು ಬರೆದುಕೊಡ್ತಿದ್ದೆ ಅಂತ ನಟ ಶಿವಣ್ಣ ಹೇಳಿದ್ದು ಯಾಕೆ?

ರೈತರು ಬೀದಿಯಲ್ಲಿ ಕೂತು ಊಟ ಮಾಡ್ತಿರೋದು ನೋಡುವಾಗೆಲ್ಲಾ ಹೊಟ್ಟೆ ಉರಿಯುತ್ತೆ. ನಮ್ಮ ಸಮಸ್ಯೆಗಳನ್ನೇ ನಾವು ಪರಿಹಾರ ಪಡಿಸಿಕೊಳ್ಳೋಕೆ ಆಗುತ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ. ರೈತರಿಗೆ ನಮ್ಮ ಬೆಂಬಲ ಖಂಡಿತಾ ಇದ್ದೇ ಇರುತ್ತೆ. ಆದರೆ ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನನ್ ಕೈಯಲ್ಲಿ ಅಧಿಕಾರ ಇದ್ದಿದ್ರೆ ಎಲ್ಲವನ್ನೂ ಬರೆದುಕೊಡುತ್ತಿದ್ದೆ. ಆದ್ರೆ ಅಧಿಕಾರ ನನ್ನ ಕೈಯಲ್ಲಿ ಇಲ್ವಲ್ಲಾ ಎಂದು ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ ಬೇಸರ ವ್ಯಕ್ತಪಡಿಸಿದ್ದಾರೆ.

ಪಿಗ್ಗಿ ಬರ್ತಡೇ: ಕವಿಯಾದ ಗಂಡ

ಬಾಲಿವುಡ್ ಬೆಡಗಿ ಪ್ರಿಯಾಂಕ್ ಚೋಪ್ರಾ ಅವರ ಹುಟ್ಟು ಹಬ್ಬಕ್ಕೆ ಅವರ ಪತಿ ಕವಿಯಾಗಿದ್ದಾರೆ.ಜುಲೈ 18ರಂದು ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ 38ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ

ಬಹು ದಿನಗಳ ನಂತರ ಚಂದನವನಕ್ಕೆ ಪ್ರಭುದೇವ್ ಕಾಲಿಡುವರೇ?

ಬೆಂಗಳೂರು : ಶಿವಣ್ಣ ಅವರೊಂದಿಗೆ ಪ್ರಭುದೇವ್ ಚಂದನವನದಲ್ಲಿ ಸದ್ದು ಮಾಡಲು ತಯಾರಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಾಮಾಕ್ಷಿ ಮಂತ್ರದೊಂದಿಗೆ ಹಬ್ಬದ ಶುಭಾಶಯ ತಿಳಿಸಿದ ರಮ್ಯಾ!

ಬೆಂಗಳೂರು : ನಟಿ ರಮ್ಯಾ ಅವರು ದಸರಾ ಹಬ್ಬದ ಹಿನ್ನೆಲೆಯಲ್ಲಿ ನಾಡಿನ ಜನತೆಗೆ ಶುಭಾಶಯ ತಿಳಿಸಿದ್ದಾರೆ.